/newsfirstlive-kannada/media/media_files/2025/12/22/chinnaswamy-stadium-1-2025-12-22-15-32-58.jpg)
ಐಪಿಎಲ್​ ಸೀಸನ್​ 18ಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಮೆಗಾ ಟೂರ್ನಿಗೆ ಈಗಾಗಲೇ ಎಲ್ಲಾ ತಂಡಗಳ ಸಿದ್ಧತೆ ಕೂಡ ಆರಂಭವಾಗಿದೆ. ಹಾಲಿ ಚಾಂಪಿಯನ್ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೂಡ ಅಭ್ಯಾಸದ ಅಖಾಡಕ್ಕೆ ಧುಮುಕಿದೆ. ಆರ್​​ಸಿಬಿಯ ಹೋಮ್​​ಗ್ರೌಂಡ್​ ಯಾವುದು ಅನ್ನೋದು ಮಾತ್ರ ಇನ್ನೂ ಗೊಂದಲವಾಗಿಯೇ ಉಳಿದಿದೆ. ಚಿನ್ನಸ್ವಾಮಿಯಲ್ಲಿ ಆರ್​​ಸಿಬಿ ಆಡುತ್ತಾ? ಇಲ್ವಾ? ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರವೇ ಸಿಕ್ಕಿಲ್ಲ.
ಇನ್ನೂ ಮುಗಿಯದ RCB ಹೋಮ್​ಗ್ರೌಂಡ್​ ಹಗ್ಗಜಗ್ಗಾಟ
ಅಸಂಖ್ಯ ಅಭಿಮಾನಿಗಳ ಸುದೀರ್ಘ 18 ವರ್ಷಗಳ ಕಾಯುವಿಕೆಗೆ ಕಳೆದ ಸೀಸನ್ IPL​ನಲ್ಲಿ ಬ್ರೇಕ್​ ಬಿದ್ದಿತ್ತು. 18 ವರ್ಷಗಳ ಬಳಿಕ ಕಪ್​ ಗೆದ್ದ ಸಂಭ್ರಮ 18 ಗಂಟೆಯೂ ಇರಲಿಲ್ಲ. ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ದುರಂತ ಖುಷಿಯನ್ನ ಕಿತ್ತುಕೊಳ್ತು. ಈ ಭೀಕರ ದುರಂತದಿಂದಾಗಿ ಚಿನ್ನಸ್ವಾಮಿ ಮೈದಾನಕ್ಕೂ ಕಪ್ಪು ಚುಕ್ಕೆ ಅಂಟಿತು. ಅಂದಿನಿಂದ ಇಂದಿನವರೆಗೂ ಚಿನ್ನಸ್ವಾಮಿ ಮೈದಾನದಲ್ಲಿ ಒಂದೇ ಒಂದು ಪಂದ್ಯ ನಡೆದಿಲ್ಲ. ವೆಂಕಟೇಶ್​ ಪ್ರಸಾದ್​ ನೇತೃತ್ವದ ಕಮಿಟಿ ಹೋರಾಟ ನಡೆಸಿ ಪಂದ್ಯ ಆಯೋಜನೆಗೆ ಕೊನೆಗೂ ಸರ್ಕಾರದಿಂದ ಪರ್ಮಿಷನ್ ತಂದಿದೆ. ಚಿನ್ನಸ್ವಾಮಿಯಲ್ಲಿ ಆಡೋದಕ್ಕೆ ಆರ್​​ಸಿಬಿಯೇ ಹಿಂದೇಟು ಹಾಕ್ತಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಎಚ್‌ಆರ್‌ಎ, ಶಿಕ್ಷಣ ಭತ್ಯೆ, ಹಾಸ್ಟೆಲ್ ಭತ್ಯೆ, ಸಾರಿಗೆ ಭತ್ಯೆ ಹೆಚ್ಚಳ : ಹೊಸ ನಿಯಮ ಜಾರಿ
/filters:format(webp)/newsfirstlive-kannada/media/media_files/2026/02/06/rcb-19-2026-02-06-09-47-18.jpg)
ಪಂದ್ಯ ಆಯೋಜನೆಗೆ ಸರ್ಕಾರದ ಷರತ್ತುಬದ್ಧ ಅನುಮತಿ
ಚಿನ್ನಸ್ವಾಮಿ ಮೈದಾನ ಗತವೈಭವವನ್ನ ಮತ್ತೆ ತರ್ತಿವಿ ಎಂದು ಕೆಎಸ್​​ಸಿಎ ಚುನಾವಣೆ ಗೆದ್ದ ವೆಂಕಟೇಶ್​ ಪ್ರಸಾದ್​ ಅಂಡ್ ಟೀಮ್​ ಹಗಲಿರುಳು ಶ್ರಮಿಸಿ ಕೊನೆಗೂ ಸರ್ಕಾರದಿಂದ ಪರ್ಮಿಷನ್​ ಪಡೆದಿದೆ. ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದ್ದೂ ಆಗಿದೆ. ಈ ಕುರಿತಂತೆ ಫೆಬ್ರವರಿ 12ರಂದು ಕೆಎಸ್​​ಸಿಎ ಹಾಗೂ ಆರ್​​ಸಿಬಿ ಜೊತೆಗೆ ಹೋಮ್​ ಮಿನಿಸ್ಟರ್​ ಪರಮೇಶ್ವರ್​ ಮಹತ್ವದ ಸಭೆ ನಡೆಸಿ ಎಲ್ಲಾ ವಿಚಾರಗಳ ಬಗ್ಗೆ ಕ್ಲಾರಿಟಿಯನ್ನೂ ಕೊಟ್ಟಿದ್ದಾರೆ. ಆರ್​​ಸಿಬಿ ಮ್ಯಾನೇಜ್​ಮೆಂಟ್​​ ಷರತ್ತುಬದ್ಧ ಒಪ್ಪಿಗೆ ನೀಡಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿಂದಿನಂತೆ ಯಾವುದೇ ಕಂಡಿಷನ್ಸ್​ ಇಲ್ಲದೆ ಪಂದ್ಯ ಆಯೋಜನೆಗೆ ಅನುಮತಿ ನೀಡಿ ಎಂದು ಕೇಳಿಕೊಂಡಿದೆ.
ಪಂದ್ಯ ಆಯೋಜನೆಗೆ ಕೆಎಸ್​​ಸಿಎನಿಂದ ಸಿದ್ಧತೆ
ಫೆಬ್ರವರಿ 12ರಂದು ಹೋಮ್​ ಮಿನಿಸ್ಟರ್​ ಜೊತೆಗೆ ಮೀಟಿಂಗ್ ಮುಗಿಸಿ ಹೋದ ಆರ್​​ಸಿಬಿ ಪಂದ್ಯ ಆಡೋದ್ರ ಬಗ್ಗೆ ಯಾವುದೇ ಕ್ಲಾರಿಟಿ ಕೊಡದೇ ಮೌನಕ್ಕೆ ಜಾರಿದೆ. ಕೆಎಸ್​ಸಿಎ ಮ್ಯಾನೇಜಿಂಗ್​ ಕಮಿಟಿ ಮಾತ್ರ ಪಂದ್ಯದ ಆಯೋಜನೆಗೆ ಸಕಲ ಸಿದ್ಧತೆಯನ್ನೂ ನಡೆಸಿಕೊಂಡಿದೆ. ಕುನ್ಹಾ ವರದಿಯ ಶಿಘಾರಸ್ಸುಗಳನ್ನ ಜಾರಿಗೆ ತರಲು ಶ್ರಮಿಸ್ತಿದೆ. ಜೊತೆಗೆ ತಜ್ಞರ ಸಮಿತಿ ನೀಡಿರೋ ಸಲಹೆಯಂತೆ ಕ್ರೀಡಾಂಗಣದ ಕಾಮಗಾರಿಗಳನ್ನ ಈ ತಿಂಗಳ ಅಂತ್ಯದೊಳಗೆ ಮುಗಿಸಲು ಪ್ರಯತ್ನ ಪಡ್ತಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಎಚ್‌ಆರ್‌ಎ, ಶಿಕ್ಷಣ ಭತ್ಯೆ, ಹಾಸ್ಟೆಲ್ ಭತ್ಯೆ, ಸಾರಿಗೆ ಭತ್ಯೆ ಹೆಚ್ಚಳ : ಹೊಸ ನಿಯಮ ಜಾರಿ
ಚಿನ್ನಸ್ವಾಮಿ ಆಡೋದಕ್ಕೆ ಹಿಂದೇಟು ಹಾಕ್ತಿರೋ ಆರ್​​ಸಿಬಿ ಚತ್ತಿಸ್​ಘಢದ ರಾಯ್​​ಪುರ್​​ ಸ್ಟೇಡಿಯಂನಲ್ಲಿ ಪಂದ್ಯಗಳನ್ನಾಡಲು ಒಲವು ಹೊಂದಿದೆ. ಕಳೆದ ತಿಂಗಳಷ್ಟೇ ಈ ವಿಚಾರವಾಗಿ ಛತ್ತೀಸ್​ಘಡ ಮುಖ್ಯಮಂತ್ರಿಯನ್ನ ಭೇಟಿಯಾಗಿ ಆರ್​​ಸಿಬಿ ಸಿಒಒ ರಾಜೇಶ್​ ಮೆನನ್​ ಚರ್ಚಿಸಿದ್ರು. ಆ ಬಳಿಕ 2 ಪಂದ್ಯಗಳ ಆಯೋಜನೆ ಬಗ್ಗೆ ಛತ್ತೀಸ್​ಘಡ ಸಿಎಂ ಅಧಿಕೃತ ಘೋಷಣೆಯನ್ನೂ ಮಾಡಿದ್ರು. ಇದೀಗ ಸೀಸನ್​ನ ಎಲ್ಲಾ ಪಂದ್ಯಗಳನ್ನೂ ರಾಯ್​ಪುರದಲ್ಲೇ ಆಡೋ ಬಗ್ಗೆ ಆರ್​​ಸಿಬಿ ವಲಯದಲ್ಲಿ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಸಿಕ್ಕಿದೆ.
ಫೆಬ್ರವರಿ ಆರಂಭದಲ್ಲೇ ಐಪಿಎಲ್​ ವೇಳಾಪಟ್ಟಿಯನ್ನ ಬಿಸಿಸಿಐ ಪ್ರಕಟಿಸಬೇಕಿತ್ತು. ಆದ್ರೆ, ನಾಲ್ಕು ರಾಜ್ಯಗಳ ಚುನಾವಣೆ ಬಿಸಿಸಿಐಗೆ ಅಡ್ಡಿಯಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ್​, ತಮಿಳುನಾಡು, ಕೇರಳದ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಐಪಿಎಲ್ ಶೆಡ್ಯೂಲ್​ ರಿಲೀಸ್​ ಮಾಡಲು ಬಿಸಿಸಿಐ ನಿರ್ಧರಿಸಿದೆ. ಅಷ್ಟರೊಳಗೆ ಆರ್​​ಸಿಬಿ ತನ್ನ ಹೋಮ್​ಗ್ರೌಂಡ್​ ವಿಚಾರದಲ್ಲಿ ಬಿಸಿಸಿಐಗೆ ಕ್ಲಾರಿಟಿಯನ್ನ ಕೊಡಬೇಕಿದೆ.
ಒಟ್ಟಿನಲ್ಲಿ ಸರ್ಕಾರದಿಂದ ಪರ್ಮಿಷನ್​ ತೆಗೆದುಕೊಂಡಿರೋ ಕೆಎಸ್​ಸಿಎ ಆಡಳಿತ ಕಮಿಟಿ ಪಂದ್ಯ ಆಯೋಜನೆ ಸಿದ್ಧತೆಯನ್ನೂ ಆರಂಭಿಸಿದ್ದು, ಆರ್​​​ಸಿಬಿ ಕಡೆಯಿಂದ ಅಂತಿಮ ನಿರ್ಧಾರಕ್ಕಾಗಿ ಕಾದು ಕುಳಿತಿದೆ. ಆರ್​​ಸಿಬಿ ಹಾಗೂ ಕೆಎಸ್​​ಸಿಎ ನಡುವೆ ಒಮ್ಮತದ ನಿರ್ಧಾರವಾದ್ರೆ ಮಾತ್ರ ಈ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ ಪಂದ್ಯಗಳು ನಡೆಯಲಿವೆ. ಇಲ್ಲದಿದ್ರೆ, ಹೊಸ ಹೋಮ್​​​​ಗ್ರೌಂಡ್​ನಲ್ಲಿ ಆರ್​​ಸಿಬಿ ಆಡಲಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಎಚ್‌ಆರ್‌ಎ, ಶಿಕ್ಷಣ ಭತ್ಯೆ, ಹಾಸ್ಟೆಲ್ ಭತ್ಯೆ, ಸಾರಿಗೆ ಭತ್ಯೆ ಹೆಚ್ಚಳ : ಹೊಸ ನಿಯಮ ಜಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us