/newsfirstlive-kannada/media/media_files/2025/12/17/rcb-6-2025-12-17-09-03-48.jpg)
ಇನ್ನೂ ಫೀಲ್ಡಿಗಿಳಿದು ಅಭ್ಯಾಸ ಮಾಡದ ಆರ್‌ಸಿಬಿ ಟೀಮ್
ಐಪಿಎಲ್​ ಸೀಸನ್​ 19ಕ್ಕೂ ಮುನ್ನ ಆರ್​​ಸಿಬಿ ಮ್ಯಾನೇಜ್​ಮೆಂಟ್​ಗೆ ಸೂಪರ್​ ಸ್ಟಾರ್ಸ್​ ಟೆನ್ಶನ್ ಶುರುವಾಗಿದೆ. ವಿರಾಟ್​ ಕೊಹ್ಲಿ, ರಜತ್​ ಪಟಿದಾರ್​, ಜೋಷ್​ ಹೇಜಲ್​ವುಡ್​, ಟಿಮ್​ ಡೇವಿಡ್​ ಪ್ಲೇಯಿಂಗ್ ಇಲೆವೆನ್​ನ ಖಾಯಂ ಪ್ಲೇಯರ್​ಗಳೇ ಕೋಚ್​ ಆ್ಯಂಡಿ ಫ್ಲವರ್​ಗೆ ತಲೆನೋವಾಗಿದ್ದಾರೆ. ಆರ್​​ಸಿಬಿ ಸ್ಟಾರ್ಸ್​​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್ ತಂದಿಟ್ಟಿರೋದ್ಯಾಕೆ.? ಇಲ್ಲಿದೆ ಡೀಟೈಲ್ ರಿಪೋರ್ಟ್, ಓದಿ
ಟಿ20 ವಿಶ್ವಕಪ್​ ಮಹಾಸಮರ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ವಿಶ್ವಕಪ್​ ಅಂತ್ಯಕ್ಕೆ ಕೌಂಟ್​​ಡೌನ್ ಆರಂಭವಾದ ಬೆನ್ನಲ್ಲೇ ಐಪಿಎಲ್​ ಸೀಸನ್​ 19ಕ್ಕೆ ಫ್ರಾಂಚೈಸಿಗಳು ಸಿದ್ಧತೆಗಳು ಆರಂಭವಾಗಿವೆ. ಹಾಲಿ ಚಾಂಪಿಯನ್​ ಆರ್​​ಸಿಬಿ ಕೂಡ ಇದ್ರಿಂದ ಹೊರತಾಗಿಲ್ಲ. ಆಟಗಾರರಿಗೆ ಪ್ರೀ ಸೀಸನ್​ ಕ್ಯಾಂಪ್ ಆಯೋಜಿಸಿ ಅಭ್ಯಾಸದ ಅಖಾಡಕ್ಕೆ ಧುಮುಕಿದೆ. ಸೀಸನ್ 19ಕ್ಕೆ ತಿಂಗಳ ಮೊದಲೇ ಅಭ್ಯಾಸ ಆರಂಭಿಸಿದ್ರೂ, ಆರ್​​ಸಿಬಿ ಕ್ಯಾಂಪ್​ನಲ್ಲಿ ಸ್ಟಾರ್​ಗಳ ಟೆನ್ಶನ್​ ಮನೆ ಮಾಡಿದೆ.
ಆರ್​​ಸಿಬಿ ಸ್ಟಾರ್​ಗಳು ಫೀಲ್ಡ್​ನಿಂದ ದೂರ... ದೂರ.!
ಐಪಿಎಲ್​ ಮೆಗಾ ಟೂರ್ನಿಯಲ್ಲಿ ರಿಧಮ್ ಕಂಡುಕೊಳ್ತಾರಾ.?
ಕಳೆದ ಸೀಸನ್​ನಂತೆ ಈ ಸೀಸನ್​ನಲ್ಲೂ ಆರ್​​​ಸಿಬಿ ಬ್ಯಾಲೆನ್ಸ್​​ಡ್​ ಟೀಮ್ ಹೊಂದಿದೆ. ಬ್ಯಾಟಿಂಗ್, ಬೌಲಿಂಗ್​ ಎರಡೂ ವಿಭಾಗದಲ್ಲಿ ತಂಡ ಬಲಿಷ್ಟವಾಗಿದ್ದು, ಸ್ಟಾರ್​ ಆಟಗಾರರ ದಂಡೇ ತಂಡದಲ್ಲಿದೆ. ಈ ಸ್ಟಾರ್​ ಆಟಗಾರರೇ ಇದೀಗ ಆರ್​​ಸಿಬಿ ಮ್ಯಾನೇಜ್​ಮೆಂಟ್​ ಟೆನ್ಶನ್ ಹೆಚ್ಚಿಸಿದ್ದಾರೆ. ತಂಡದಲ್ಲಿರೋ ಸೂಪರ್​ ಸ್ಟಾರ್​ಗಳು ಬಹುಕಾಲದಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಕಳೆದ ಕೆಲ ತಿಂಗಳಿಂದ ಮೈದಾನಕ್ಕಿಳಿದಿರೋ ಆಟಗಾರರು ನೇರವಾಗಿ ಐಪಿಎಲ್​ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದು, ಇವ್ರ ಮ್ಯಾಚ್​ ಫಿಟ್​ನೆಸ್​, ಫಾರ್ಮ್​ ಬಗ್ಗೆ ಟೆನ್ಶನ್​ ಶುರುವಾಗಿದೆ.
2 ತಿಂಗಳಿಂದ ಮೈದಾನದಿಂದ ವಿರಾಟ್​ ಕೊಹ್ಲಿ ದೂರ.!
ಆರ್​​ಸಿಬಿ ತಂಡದ ಕಿಂಗ್​ ವಿರಾಟ್​ ಕೊಹ್ಲಿ ನ್ಯೂಜಿಲೆಂಡ್​ ಸರಣಿಯಲ್ಲಿ ಕೊನೆಯ ಬಾರಿ ಫೀಲ್ಡ್​ನಲ್ಲಿ ಕಾಣಿಸಿಕೊಂಡಿದ್ದು. ಜನವರಿ 18ರಂದು ನಡೆದ ನ್ಯೂಜಿಲೆಂಡ್​ ವಿರುದ್ಧ ಕೊನೆ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ, ಆ ಬಳಿಕ ಬ್ಯಾಟ್​​ ಮುಟ್ಟಿಲ್ಲ. ಕನಿಷ್ಟ ಅಭ್ಯಾಸವನ್ನೂ ವಿರಾಟ್​ ಕೊಹ್ಲಿ ಆರಂಭಿಸಿಲ್ಲ. 2 ತಿಂಗಳ ಅಂತರದ ಬಳಿಕ ನೇರವಾಗಿ ಐಪಿಎಲ್ ಆಡಲಿರೋ ವಿರಾಟ್​ ಕೊಹ್ಲಿ, ಅದೇ ಟಚ್​​ ಕಾಯ್ದುಕೊಳ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ವೇಗಿ ಜೋಷ್​ ಹೇಜಲ್​ವುಡ್​ಗೆ ಇಂಜುರಿ ಕಾಟ.!
ಆರ್​​ಸಿಬಿ ತಂಡದ ಮೇನ್ ವೆಪೆನ್​ ವೇಗಿ ಜೋಷ್​ ಹೇಜಲ್​​ವುಡ್​ಗೆ ಇಂಜುರಿ ಕಾಟ ಬಿಟ್ಟೂ ಬಿಡದೇ ಕಾಡ್ತಿದೆ. ಅಕ್ಟೋಬರ್​ನಲ್ಲಿ ನಡೆದ ಟೀಮ್​ ಇಂಡಿಯಾ ವಿರುದ್ಧದ ಸರಣಿಯೇ ಕೊನೆ. ಆ ಬಳಿಕ ಜೋಷ್​ ಹೇಜಲ್​ವುಡ್ ಇಂಟರ್​ನ್ಯಾಷನಲ್​ ಪಂದ್ಯವನ್ನೇ ಆಡಿಲ್ಲ. ವಿಕ್ಟೋರಿಯಾ ವಿರುದ್ಧ ನವೆಂಬರ್​ 12ಕ್ಕೆ ಒಂದು ಫಸ್ಟ್​​ ಕ್ಲಾಸ್​ ಮಾಚ್​ ಆಡಿದ್ದ ಹೇಜಲ್​ವುಡ್​ ಆ ಬಳಿಕ ಇಂಜುರಿಗೆ ತುತ್ತಾಗಿದ್ರು. ಆ್ಯಷಸ್​ ಟೆಸ್ಟ್​ ಸರಣಿ, ಟಿ20 ವಿಶ್ವಕಪ್​ನಂತಾ ಮಹತ್ವದ ಸರಣಿಗಳಿಂದಲೇ ಹೊರಗುಳಿದಿರೋ ಹೇಜಲ್​ವುಡ್​ ಸದ್ಯ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಆದ್ರೆ, ಫಿಟ್​​ನೆಸ್​, ಫಾರ್ಮ್​ ಬಗ್ಗೆ ಪ್ರಶ್ನೆಯಿದೆ.
ಕಮ್​ಬ್ಯಾಕ್​ ಟೂರ್ನಿಯಲ್ಲಿ ಟಿಮ್​ ಡೇವಿಡ್​ ಡಲ್.!
ಬಿಗ್​ ಬ್ಯಾಷ್​ ಟೂರ್ನಿಯ ವೇಳೆ ಇಂಜುರಿಗೆ ತುತ್ತಾಗಿದ್ದ ಟಿಮ್ ಡೇವಿಡ್​​ ಟಿ20 ವಿಶ್ವಕಪ್ ವೇಳೆಗೆ ಫಿಟ್​ ಆಗಿ ತಂಡಕ್ಕೆ ವಾಪಾಸ್ಸಾದ್ರು. ಆದ್ರೆ, ಕಮ್​ಬ್ಯಾಕ್ ಟೂರ್ನಿಯಲ್ಲಿ ಟಿಮ್​ ಡೇವಿಡ್​ ಹೀನಾಯ ಪರ್ಫಾಮೆನ್ಸ್​ ನೀಡಿದ್ರು. ಜಿಂಬಾಬ್ವೆ ಎದುರು ಡಕೌಟ್​ ಆದ ಟಿಮ್ ಡೇವಿಡ್​, ಶ್ರೀಲಂಕಾ ಎದುರು ಕೇವಲ 6 ರನ್​ಗಳಿಸಿದ್ರು. 3 ಪಂದ್ಯಗಳನ್ನಾಡಿ ಕೇವಲ 6 ರನ್​ಗಳಿಸಿದ ಟಿಮ್​ ಡೇವಿಡ್​ ಕಳಪೆ ಫಾರ್ಮ್​ ಆರ್​​ಸಿಬಿ ಥಿಂಕ್​ ಟ್ಯಾಂಕ್ಸ್​​ ಟೆನ್ಶನ್ ಹೆಚ್ಚಿಸಿದೆ.
ರನ್ ​ಗಳಿಕೆಗೆ ನಾಯಕ ಪಾಟಿದಾರ್​​ ಪರದಾಟ.!
ಆರ್​​ಸಿಬಿ ಸಾರಥಿ ರಜತ್​ ಪಟಿದಾರ್​ ಕೂಡ ಫಾರ್ಮ್​ನಲ್ಲಿಲ್ಲ. ಫೆಬ್ರವರಿಯಲ್ಲಿ ಕೊನೆಯದಾಗಿ ರಣಜಿ ಟ್ರೋಫಿ ಪಂದ್ಯವನ್ನಾಡಿದ್ದ ರಜತ್ ಪಟಿದಾರ್​, ಆ ಬಳಿಕ ಫೀಲ್ಡಿಗಿಳಿದಿಲ್ಲ. ರಣಜಿ ಟ್ರೋಫಿಯಲ್ಲಿ ಆಡಿದ 3 ಪಂದ್ಯಗಳ 6 ಇನ್ನಿಂಗ್ಸ್​ಗಳಲ್ಲೂ ಪಟಿದಾರ್​ ಪರದಾಟ ನಡೆಸಿದ್ರು. ಅದಕ್ಕೂ ಹಿಂದೆ ಆಡಿದ ವಿಜಯ್ ಹಜಾರೆ, ಸೈಯದ್​ ಮುಷ್ಯಾಕ್ ಅಲಿ ಟೂರ್ನಿಯಲ್ಲೂ ರಜತ್ ಪಾಟಿದಾರ್​ ಬ್ಯಾಟ್​ ಸೈಲೆಂಟಾಗಿತ್ತು. ಕಳೆದ ಡಿಸೆಂಬರ್​ನಿಂದಲೂ ರನ್​ಗಳಿಕೆಗೆ ಪರದಾಟ ನಡೆಸಿರೋ ಆರ್​​ಸಿಬಿ ನಾಯಕ ಐಪಿಎಲ್​ನಲ್ಲಿ ಕಮ್​ಬ್ಯಾಕ್ ಮಾಡ್ತಾರಾ ಅನ್ನೋದು ಯಕ್ಷಪ್ರಶ್ನೆಯಾಗಿದೆ.
ಫಾರ್ಮ್​ನಲ್ಲಿಲ್ಲ ಆಲ್​​ರೌಂಡರ್​ ವೆಂಕಟೇಶ್​ ಅಯ್ಯರ್​.!
ಆರ್​​ಸಿಬಿ ತಂಡಕ್ಕೆ ಹೊಸದಾಗಿ ಎಂಟ್ರಿಕೊಟ್ಟಿರುವ ವೆಂಕಟೇಶ್​ ಅಯ್ಯರ್​ ಆಟವೂ ಮ್ಯಾನೇಜ್​ಮೆಂಟ್​ ಚಿಂತೆ ಹೆಚ್ಚಿಸಿದೆ. ಕಳೆದ ಸೀಸನ್ ಐಪಿಎಲ್​ನಲ್ಲಿ ವೆಂಕಟೇಶ್​ ಅಯ್ಯರ್​ ಅಟ್ಟರ್​ಫ್ಲಾಪ್ ಆಗಿದ್ರು. ಆದ್ರೂ, ಆರ್​​ಸಿಬಿ ಹರಾಜಿನಲ್ಲಿ ಖರೀದಿಸಿತು. ಆ ಬಳಿಕ ವೆಂಕಿಯ ಆಟ ಸುಧಾರಣೆಯಾಗಿಲ್ಲ. ಸತತ 1 ವರ್ಷದಿಂದ ವೈಫಲ್ಯ ಅನುಭವಿಸಿರೋ ವೆಂಕಟೇಶ್​ ಅಯ್ಯರ್​ ಫಾರ್ಮ್​ಗೆ ಬರ್ತಾರಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.
ಕೆಲ ದಿನಗಳಿಂದ ಆಡಿಲ್ಲ.. ಫಾರ್ಮ್​ನಲ್ಲಿಲ್ಲ.. ಅಂದ ಮಾತ್ರಕ್ಕೆ ರೈಟ್​ ಆಫ್​ ಮಾಡೋ ಪ್ಲೇಯರ್ಸ್​ ಇವರಲ್ಲ. ಒಂದೊಳ್ಳೆ ಇನ್ನಿಂಗ್ಸ್​ ಸಾಕು ಈ ಸೂಪರ್​ ಸ್ಟಾರ್​ಗಳಿಗೆ ರನ್​ ಹೊಳೆಯನ್ನೇ ಹರಿಸಿಬಿಡ್ತಾರೆ.
ವಸಂತ್ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ. ನ್ಯೂಸ್​ ಫಸ್ಟ್​ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us