ದೆಹಲಿಯಲ್ಲಿ ಲಿಯೋನೆಲ್ ಮೆಸ್ಸಿ ಭೇಟಿಗೆ 1 ಕೋಟಿ ಖರ್ಚು ಮಾಡಿದ ಶ್ರೀಮಂತರು! : ಮೋದಿ, ಕೋಹ್ಲಿ ಸೇರಿ ಗಣ್ಯರ ಭೇಟಿ ನಿಗದಿ

ಅರ್ಜೈಂಟೈನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇಂದು ದೆಹಲಿಗೆ ಭೇಟಿ ನೀಡುವರು. ದೆಹಲಿಯಲ್ಲಿ ಪ್ರಧಾನಿ ಮೋದಿ, ಸಿಜೆ ಸೂರ್ಯಕಾಂತ್ ಸೇರಿದಂತೆ ಅನೇಕ ಗಣ್ಯರನ್ನು ಭೇಟಿಯಾಗುವರು. ಜೊತೆಗೆ ಕ್ರಿಕೆಟಿಗ ವಿರಾಟ್ ಕೋಹ್ಲಿಯನ್ನು ಭೇಟಿಯಾಗುವರು. ಮೆಸ್ಸಿ ಭೇಟಿಗೆ ಕೆಲವರು 1 ಕೋಟಿ ರೂ.ವರೆಗೂ ಖರ್ಚು ಮಾಡುತ್ತಿದ್ದಾರೆ.

author-image
Chandramohan
MESSI MEET AND GREET
Advertisment

ಅರ್ಜೆಂಟೀನಾದ ವಿಶ್ವಕಪ್ ವಿಜೇತ ನಾಯಕ ಲಿಯೋನೆಲ್ ಮೆಸ್ಸಿ  ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ್ದಾರೆ. 

ಮೆಸ್ಸಿ ಮತ್ತು ಅವರ ತಂಡವು ಚಾಣಕ್ಯಪುರಿಯಲ್ಲಿರುವ ದಿ ಲೀಲಾ ಪ್ಯಾಲೇಸ್‌ಗೆ ಭೇಟಿ ನೀಡಲಿದೆ.  ಅಲ್ಲಿ ಅವರಿಗಾಗಿಯೇ ಸಂಪೂರ್ಣ ಮಹಡಿಯನ್ನು ಕಾಯ್ದಿರಿಸಲಾಗಿದೆ. ಅರ್ಜೆಂಟೀನಾದ ತಂಡವನ್ನು ಹೋಟೆಲ್‌ನ ಪ್ರೆಸಿಡೆನ್ಶಿಯಲ್ ಸೂಟ್‌ಗಳಲ್ಲಿ ಇರಿಸಲಾಗುವುದು.  ಪ್ರತಿಯೊಂದೂ ರಾತ್ರಿಗೆ 3.5 ಲಕ್ಷದಿಂದ 7 ಲಕ್ಷ ರೂ.ಗಳವರೆಗೆ ಬೆಲೆಯಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಮೆಸ್ಸಿಯ ವಾಸ್ತವ್ಯದ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳದಂತೆ ಹೋಟೆಲ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಡ್ರೈವ್ ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.  ಆದರೆ ಲೀಲಾ ಪ್ಯಾಲೇಸ್ ಸುತ್ತಲಿನ ವಾತಾವರಣವು ಸಾಮಾನ್ಯವಾಗಿದೆ. ದೆಹಲಿ ಹೋಟೆಲ್ ಸುತ್ತಲೂ ಭದ್ರತೆಯನ್ನು ಹೈ-ಸೆಕ್ಯುರಿಟಿ ವಲಯದ ಮಟ್ಟಕ್ಕೆ ಬಿಗಿಗೊಳಿಸಲಾಗಿದೆ. ಲೀಲಾ ಪ್ಯಾಲೇಸ್ ಹೋಟೇಲ್ ಅನ್ನು ಪೊಲೀಸರ ಭದ್ರಕೋಟೆಯಾಗಿ ಪರಿವರ್ತಿಸಲಾಗಿದೆ. 

ಹ್ಯಾಂಡ್‌ಶೇಕ್‌ಗೆ ಕೋಟಿಗಟ್ಟಲೆ ಬೆಲೆ ನಿಗದಿ

ಆಯ್ದ ಕಾರ್ಪೋರೇಟ್ ಮತ್ತು ವಿಐಪಿ ಅತಿಥಿಗಳಿಗಾಗಿ ಮೀಟ್ ಮತ್ತು ಗ್ರೀಟ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಲಿನೋನಲ್ ಮೆಸ್ಸಿ ಜೊತೆಗಿನ ಮೀಟ್ ಮತ್ತು ಗ್ರೀಟ್‌ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆಲವು ಕಾರ್ಪೋರೇಟ್ ಗಳು 1 ಕೋಟಿ ರೂಪಾಯಿವರೆಗೂ ಹಣವನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಅವರ ಸಂಕ್ಷಿಪ್ತ ಭೇಟಿಯ ಸಮಯದಲ್ಲಿ, ಮೆಸ್ಸಿ ಭಾರತದ ಮುಖ್ಯ ನ್ಯಾಯಮೂರ್ತಿ, ಹಲವಾರು ಸಂಸದರು ಮತ್ತು ಕ್ರಿಕೆಟಿಗರು ಮತ್ತು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತರು ಸೇರಿದಂತೆ ಭಾರತೀಯ ಕ್ರೀಡಾ ತಾರೆಯರ ಗುಂಪನ್ನು ಭೇಟಿ ಮಾಡಲಿದ್ದಾರೆ. ದೆಹಲಿಯಲ್ಲಿ ಸಂಸದ ಪ್ರಫುಲ್ ಪಟೇಲ್ ನಿವಾಸಕ್ಕೆ ಲಿಯೋನಾರ್ಡ್ ಮೆಸ್ಸಿ ಭೇಟಿ ನೀಡುವರು.  ಪ್ರಫುಲ್ ಪಟೇಲ್ ನಿವಾಸದಲ್ಲಿ ಸುಪ್ರೀಂಕೋರ್ಟ್ ಸಿಜೆ ಸೂರ್ಯಕಾಂತ್ ಸೇರಿದಂತೆ ಗಣ್ಯರನ್ನು ಭೇಟಿಯಾಗುವರು. ಜೊತೆಗೆ ದೆಹಲಿಯಲ್ಲಿ  ಭಾರತದ ಖ್ಯಾತ ಕ್ರಿಕೆಟ್ ತಾರೆ ವಿರಾಟ್ ಕೋಹ್ಲಿಯನ್ನು ಮೆಸ್ಸಿ ಭೇಟಿಯಾಗುವರು. ಬಳಿಕ ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗುವರು. 

ಕ್ರಿಕೆಟ್, ಸಂಸ್ಕೃತಿ ಮತ್ತು ಚಾಂಪಿಯನ್‌ಗಳು

ಮೆಸ್ಸಿ ಅವರು ದೆಹಲಿಯ  ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.  ಅಲ್ಲಿ ಫುಟ್ಬಾಲ್ ಕ್ಲಿನಿಕ್ ಅನ್ನು ಯೋಜಿಸಲಾಗಿದೆ, ಜೊತೆಗೆ ಭಾರತೀಯ ಕ್ರಿಕೆಟಿಗರ ಆಯ್ದ ಗುಂಪಿನೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲಿಂದ, ಅರ್ಜೆಂಟೀನಾದ ನಾಯಕ ಅಡಿಡಾಸ್ ಆಯೋಜಿಸುವ ವಿಶೇಷ ಕಾರ್ಯಕ್ರಮಕ್ಕಾಗಿ ಪುರಾನ ಕಿಲಾಗೆ ತೆರಳಲಿದ್ದಾರೆ.

ಓಲ್ಡ್ ಫೋರ್ಟ್‌ನಲ್ಲಿ, ಮೆಸ್ಸಿ, ರೋಹಿತ್ ಶರ್ಮಾ, ಪ್ಯಾರಾಲಿಂಪಿಕ್ ಜಾವೆಲಿನ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್, ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಒಲಿಂಪಿಕ್ ಹೈಜಂಪ್ ಪದಕ ವಿಜೇತ ನಿಶಾದ್ ಕುಮಾರ್ ಸೇರಿದಂತೆ ಭಾರತೀಯ ಕ್ರೀಡಾ ಚಾಂಪಿಯನ್‌ಗಳನ್ನು ಭೇಟಿಯಾಗಲಿದ್ದಾರೆ.

ಮೆಸ್ಸಿ ಸಂಜೆ 6:15 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಸುಮಾರು ರಾತ್ರಿ 8:00 ಗಂಟೆಗೆ ಭಾರತದಿಂದ ನಿರ್ಗಮಿಸಲಿದ್ದಾರೆ . 
ಲಿಯೋನಲ್ ಮೆಸ್ಸಿ  ಭಾರತದಲ್ಲಿ ಕೋಲ್ಕತ್ತಾ, ಹೈದರಾಬಾದ್, ಮುಂಬೈ ಬಳಿಕ ದೆಹಲಿಗೆ ಭೇಟಿ ನೀಡಿ ಸ್ವದೇಶಕ್ಕೆ ವಾಪಸಾಗುವರು. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment