Advertisment

ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಸೋತ ರಿಂಕು ತಂದೆ.. ಮಗನ ಕ್ರಿಕೆಟರ್​​ ಮಾಡಲು ಪಟ್ಟ ಶ್ರಮ ಎಷ್ಟು..?

ಟಿ20 ವಿಶ್ವಕಪ್​ ಟೂರ್ನಿಯ ನಡುವೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ ರಿಂಕು ಸಿಂಗ್​ ಆಘಾತ ಎದುರಾಗಿದೆ. ರಿಂಕು ಸಿಂಗ್ ಪಾಲಿಗೆ ಎಲ್ಲವೂ ಆಗಿದ್ದ ತಂದೆ ಮಹಾಮಾರಿ ಕ್ಯಾನ್ಸರ್​ ಎದುರಿನ ಹೋರಾಟದಲ್ಲಿ ಸೋಲುಂಡಿದ್ದಾರೆ.

author-image
Ganesh Kerekuli
rinku singh father (1)
Advertisment

ಟಿ20 ವಿಶ್ವಕಪ್​ ಟೂರ್ನಿಯ ನಡುವೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ ರಿಂಕು ಸಿಂಗ್​ ಆಘಾತ ಎದುರಾಗಿದೆ. ರಿಂಕು ಸಿಂಗ್ ಪಾಲಿಗೆ ಎಲ್ಲವೂ ಆಗಿದ್ದ ತಂದೆ ಮಹಾಮಾರಿ ಕ್ಯಾನ್ಸರ್​ ಎದುರಿನ ಹೋರಾಟದಲ್ಲಿ ಸೋಲುಂಡಿದ್ದಾರೆ. ಮನೆ ಮನೆಗೆ ಗ್ಯಾಸ್​ ಡೆಲಿವರಿ ಮಾಡಿ ಮಗನ ಸ್ಟಾರ್​ ಕ್ರಿಕೆಟರ್​ ಮಾಡಿದ್ದ ರಿಂಕು ಸಿಂಗ್​ ತಂದೆ ಖಾನ್​​ಸಿಂಗ್​ ಇಹಲೋಕ ತ್ಯಜಿಸಿದ್ದಾರೆ. ರಿಂಕು ತಂದೆ ನಿಧನಕ್ಕೆ ಕ್ರಿಕೆಟ್​ ಲೋಕ ಕಂಬನಿ ಮಿಡಿದಿದೆ.

Advertisment

T20 ವಿಶ್ವಕಪ್​ ಟೂರ್ನಿಯ ನಡುವೆ ಟೀಮ್​ ಇಂಡಿಯಾ ಕ್ಯಾಂಪ್​​​ನಲ್ಲಿ ಸೂತಕದ ಛಾಯೆ ಆವರಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯ ಗೆದ್ದು ಸೆಮಿಫೈನಲ್​ ಕನಸನ್ನ ಜೀವಂತವಾಗಿರಿಸಿಕೊಂಡ ಸಮಾಧಾನದ ಬೆನ್ನಲ್ಲೇ ಆಘಾತಕಾರಿ ಸುದ್ದಿ ತಂಡಕ್ಕೆ ಅಪ್ಪಳಿಸಿದೆ. ತೀವ್ರ ಅನಾರೋಗ್ಯದಿಂದ ಬಳಲ್ತಾ ಇದ್ದ ಟೀಮ್​ ಇಂಡಿಯಾದ ಫಿನಿಷರ್​ ರಿಂಕು ಸಿಂಗ್​ ತಂದೆ ಖಾನ್​ಚಂದ್​ ಸಿಂಗ್ ಕೊನೆಯುಸಿರೆಳೆದಿದ್ದಾರೆ. 
4TH ಸ್ಟೇಜ್​ ಲಿವರ್​ ಕ್ಯಾನ್ಸರ್​​ನಿಂದ ಬಳಲ್ತಾ ಇದ್ದ ರಿಂಕು ಸಿಂಗ್ ತಂದೆ ಗ್ರೇಟರ್​ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೀತಾ ಇದ್ರು. ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನ ತೊರೆದಿದ್ದು ರಿಂಕು ಸಿಂಗ್​ ಆಸ್ಪತ್ರೆಗೆ ಭೇಟಿ ನೀಡಿ ವಾಪಾಸ್ಸಾಗಿದ್ರು. ಕಳೆದ 4-5 ದಿನಗಳಿಂದ ವೆಂಟಿಲೇಟರ್​​ನಲ್ಲಿದ್ದ ಖಾನ್​ಚಂದ್​ ಸಿಂಗ್​ ನಿನ್ನೆ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ರಿಂಕು ಸಿಂಗ್ ತಂದೆ​ ನಿಧನಕ್ಕೆ ಕ್ರಿಕೆಟ್​ ಲೋಕ ಕಂಬನಿ ಮಿಡಿದಿದೆ. 

ಇದನ್ನೂ ಓದಿ: ಇಸ್ರೇಲ್, ಅಮೆರಿಕಾದಿಂದ ಆಯತುಲ್ಲಾ ಅಲಿ ಖಮೇನಿ ಕಚೇರಿ, ಮನೆ ಮೇಲೆ ದಾಳಿ: ಇರಾನ್ ಪರಮಾಣು ಅಸ್ತ್ರ ಹೊಂದಲು ಬಿಡಲ್ಲ ಎಂದ ಟ್ರಂಪ್‌

Rinku singh father

ರಿಂಕು ಯಶಸ್ಸಿನ ಹಿಂದಿನ ದೈತ್ಯ ಶಕ್ತಿ

ಇವತ್ತು ರಿಂಕು ಸಿಂಗ್ ಕ್ರಿಕೆಟ್​​ ಲೋಕದ ಸೂಪರ್​ ಸ್ಟಾರ್​. ಟೀಮ್​ ಇಂಡಿಯಾದ ಫಿನಿಷರ್​. ಖ್ಯಾತ ದೇಶ-ವಿದೇಶಗಳಲ್ಲಿ ಪಸರಿಸಿದೆ. ಕ್ರಿಕೆಟ್​ ಲೋಕದಲ್ಲಿ ರಿಂಕು ಸಿಂಗ್​ಗೆ ಸಪರೇಟ್​ ಫ್ಯಾನ್​ ಬೇಸೆ ಇದೆ. ಕ್ರಿಕೆಟ್​ನಲ್ಲಿ ಸಕ್ಸಸ್​ ಕಂಡಂತೆ ಕೋಟಿ ಕೋಟಿ ಹಣವೂ ರಿಂಕು ಸಿಂಗ್​ ಖಜಾನೆ ಸೇರಿದೆ. ಇಂದು ರಿಂಕು ಸಿಂಗ್​ಗೆ ಸಿಕ್ಕಿರೋ ಈ ಎಲ್ಲಾ ಸಕ್ಸಸ್​ ಹಿಂದಿನ ಶಕ್ತಿ ತಂದೆ ಖಾನ್​ಚಂದ್​ ಸಿಂಗ್​. ಇವತ್ತು ರಿಂಕುಗೆ ಸಿಕ್ಕಿರೋ ಸ್ಟಾರ್​ ಪಟ್ಟ ತಂದೆ ಖಾನ್​ಚಂದ್​​ರ ತ್ಯಾಗ, ಹೋರಾಟ, ಪರಿಶ್ರಮ ಫಲ.

Advertisment

ರಿಂಕು ಸಿಂಗ್ ಹುಟ್ಟಿದ್ದು ತೀರಾ ಬಡ ಕುಟುಂಬದಲ್ಲಿ. ತಂದೆ ಖಾನ್​ಚಂದ್​ ಸಿಂಗ್​ ಮನೆ ಮನೆ ಗ್ಯಾಸ್​ ಡೆಲಿವರಿ ಮಾಡೋ ಉದ್ಯೋಗ ಮಾಡ್ತಿದ್ರು. ಇದ್ರಿಂದ ಬರ್ತಿದ್ದ ಹಣದಲ್ಲೇ 5 ಮಂದಿ ಸದಸ್ಯರು ಕುಟುಂಬ ನಡೀತಿತ್ತು. ಬರೋ ಕಡಿಮೆ ಆದಾಯದಲ್ಲೇ ಕುಟುಂಬವನ್ನ ನಡೆಸೋದಲ್ಲದೇ ಮಗನ ಕ್ರಿಕೆಟರ್​ ಆಗೋ ಕನಸಿಗೂ ನೆರವಾಗಿದ್ರು ಖಾನ್ ಚಂದ್​ ಸಿಂಗ್​. ಹಣದ ಕೊರತೆಯಾದಾಗ ಎಷ್ಟೋ ಬಾರಿ ಹಗಲು ರಾತ್ರಿ ಎನ್ನದೆ ಖಾನ್​ ಚಂದ್​ ಬೆವರು ಸುರಿಸಿ ಕೆಲಸ ಮಾಡಿದ್ದಿದೆ. 

ಇದನ್ನೂ ಓದಿ: ಶಸ್ತ್ರಾಸ್ತ್ರ ಬಿಡಿ ಇಲ್ಲವೇ ಮರಣ ನಿಶ್ಚಿತ: ಇರಾನ್ ಗೆ ಡೋನಾಲ್ಡ್ ಟ್ರಂಪ್ ನೇರ ಎಚ್ಚರಿಕೆ

ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟರ್​ ಆಗ್ತೀನಿ ಎಂದು ತಂದೆಯ ಬಳಿ ರಿಂಕು ಸಿಂಗ್​ ಹೇಳಿಕೊಂಡಾಗ ತಂದೆ ನೋ ಎಂದಿದ್ರಂತೆ. ಕುಟುಂಬದ ಬಡತನದ ಹಣಕಾಸಿನ ಸ್ಥಿತಿಗತಿಯ ಕಾರಣಕ್ಕೆ ಖಾನ್​ಸಿಂಗ್​ ಬೇಡ ಎಂದು ರಿಂಕುಗೆ ಹೇಳಿದ್ರಂತೆ. ಆ ಬಳಿಕ ಬಳಿಕ ಮಗನ ಆಟ ನೋಡಿ ಇಂಪ್ರೆಸ್​ ಆಗಿದ್ದ ಖಾನ್​ಚಂದ್​, ಮನಸ್ಸು ಬದಲಾಯಿಸಿದ್ರಂತೆ. ಕೊಡಿಟ್ಟ ಹಣವನ್ನ ನೀಡಿ ಮಗನನ್ನ ಅಕಾಡೆಮಿಗೆ ಸೇರಿದಿದ್ರು ಅಂತಾ ರಿಂಕು ಬಾಲ್ಯದ ಕೋಚ್​​ ನೆನೆಸಿಕೊಂಡಿದ್ದಾರೆ. 

Advertisment

ಶೀಟಿನ ಮನೆ.. ಒಂದು ಟಿವಿ.. ಈ ಟಿವಿ ಇರುವ ಜಾಗವೇ ಮನೆಯ ಹಾಲ್​..  ಮನೆ ಒಂದು ಸಣ್ಣ ಬೆಡ್​ ರೂಮ್​.. ಈ ಇಕ್ಕಟ್ಟಿನ ಸ್ಥಳದಲ್ಲೇ ಐದು ಸದಸ್ಯರು ನಿತ್ಯ ಜೀವನ ನಡೆಸ್ತಿದ್ರು. 3 ವರ್ಷಗಳಿಗೂ ಮುನ್ನ ಇದೇ ಹಳೇ ಮನೆಯಲ್ಲೇ ಸ್ಟಾರ್ ಕ್ರಿಕೆಟರ್ ರಿಂಕು ಸಿಂಗ್​​ ಕುಟುಂಬ ವಾಸವಾಗಿತ್ತು. ಚಿಕ್ಕಂದಿನಲ್ಲಿ ದೊಡ್ಡ ಕ್ರಿಕೆಟರ್​ ಆಗಿ ದೊಡ್ಡ ಮನೆ ಕಟ್ಟಿಸ್ತಿನಿ ಅಂದಿದ್ದ ರಿಂಕು, 2 ವರ್ಷದ ಹಿಂದೆ ಮಾತು ಈಡೇಸಿರಿಸಿದ್ರು. ತಂದೆ ಗ್ಯಾಸ್​ ಸಪ್ಲೈ ಮಾಡ್ತಿದ್ದ ಏರಿಯಾದಲ್ಲೇ ಐಷಾರಾಮಿ ಮನೆ ಕಟ್ಟಿ ತಂದೆಗೆ ಗಿಫ್ಟ್​ ನೀಡಿದ್ರು. 

ಕೆಲ ವರ್ಷಗಳ ಹಿಂದೆ ರಿಂಕು ಸಿಂಗ್‌ ಇಂಜುರಿ ತುತ್ತಾಗಿ ಫೀಲ್ಡ್​ನಿಂದ ದೀರ್ಘಕಾಲ ಹೊರಗುಳಿದಿದ್ರು. ಇದರಿಂದ ನೊಂದಿದ್ದ ಅವರ ತಂದೆ 2-3 ದಿನಗಳ ಕಾಲ ಊಟವನ್ನೇ ಬಿಟ್ಟಿದ್ರು. ಮಗನಿಗಾದ ಇಂಜುರಿಯ ನೋವು ಇದಕ್ಕೆ ಒಂದು ಕಾರಣವಾದ್ರೆ ಆರ್ಥಿಕ ಸಮಸ್ಯೆ ಇನ್ನೊಂದು ಕಾರಣ. ಕುಟುಂಬ ಆರ್ಥಿಕವಾಗಿ ರಿಂಕು ಸಿಂಗ್​ನ ಅವಲಂಬಿಸಿತ್ತು. ರಿಂಕು ಗಾಯಗೊಂಡು ಕ್ರಿಕೆಟ್‌ ಆಡದಿದ್ದಾಗ ಕುಟುಂಬಕ್ಕೆ ಆರ್ಥಿಕ ಸಮಸ್ಯೆಯನ್ನು ತಂದೊಡ್ಡಿತ್ತು. ಈ ವಿಚಾರವನ್ನ ಸ್ವತಃ ರಿಂಕು ಸಿಂಗ್‌ ಸಂದರ್ಶನವೊಂದರಲ್ಲಿ ಹೇಳಿದ್ರು. 

ರಿಂಕು ಸಿಂಗ್​ ಸಕ್ಸಸ್​ ಹಿಂದೆ ಅವ್ರ ತಂದೆಯ ಕಠಿಣ ಶ್ರಮ ಇದೆ. ನಿದ್ದೆ ಇಲ್ಲದ ರಾತ್ರಿಗಳಿವೆ. ನಿರಂತರ ಹೋರಾಟವಿದೆ. ಕಷ್ಟುಪಟ್ಟು ಹೋರಾಡಿ ಮಗನ ಕ್ರಿಕೆಟರ್​ ಮಾಡಿದ ಖಾನ್​ಚಂದ್​ಗೆ, ಯಶಸ್ಸನ್ನ ದೀರ್ಘಕಾಲ ಅನುಭವಿಸೋ ಯೋಗವೇ ಸಿಗಲಿಲ್ಲ ಅನ್ನೋದು ಬೇಸರದ ವಿಚಾರ.

Advertisment

ಇದನ್ನೂ ಓದಿ: ನಟ ದಳಪತಿ ವಿಜಯ- ಸಂಗೀತಾ ವಿವಾಹ ವಿಚ್ಛೇದನಕ್ಕೆ ನಟಿ ತ್ರಿಶಾ ಕಾರಣವೇ? ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rinku Singh
Advertisment
Advertisment
Advertisment