/newsfirstlive-kannada/media/media_files/2025/12/03/ruturaj-gaikwad-1-2025-12-03-16-20-04.jpg)
ರಾಯ್​ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಕಂಬ್ಯಾಕ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಗಾಯಕ್ವಾಡ್​ ಶತಕ ಬಾರಿಸಿ ಮಿಂಚಿದ್ದಾರೆ.
ಗಾಯಕ್ವಾಡ್ 77 ಬಾಲ್​ನಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಒಟ್ಟು 83 ಬಾಲ್​ ಎದುರಿಸಿರುವ ಗಾಯಕ್ವಾಡ್, 126.51 ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬಿಸಿ 105 ರನ್​ಗಳ ಕಾಣಿಕೆ ನೀಡಿದರು. ಈ ವೇಳೆ ಎರಡು ಸಿಕ್ಸರ್, 12 ಬೌಂಡರಿ ಬಾರಿಸಿ ಮಿಂಚಿದರು.
195 ರನ್​ಗಳ ಪಾರ್ಟ್ನರ್​ಶಿಪ್
ಇನ್ನು ಗಾಯಕ್ವಾಡ್ ಹಾಗೂ ಕೊಹ್ಲಿ 195 ರನ್​ಗಳ ಪಾರ್ಟ್ನರ್​ಶಿಪ್ ಕಲೆ ಹಾಕಿದ್ದಾರೆ. 156 ಬಾಲ್​ನಲ್ಲಿ 195 ರನ್​ಗಳಿಸಿದರು. ಈ ಅವಧಿಯಲ್ಲಿ ಗಾಯಕ್ವಾಡ್, 83 ಬಾಲ್​ನಲ್ಲಿ 105 ರನ್​​ಗಳಿಸಿದರೆ, ಕೊಹ್ಲಿ 73 ಬಾಲ್​ನಲ್ಲಿ 83 ರನ್​ಗಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us