/newsfirstlive-kannada/media/media_files/2025/10/03/sania-mirza-ex-shohib-malik-divorece-2025-10-03-18-37-27.jpg)
ಶೋಯಿಬ್ ಮಲ್ಲಿಕ್‌ರಿಂದ ಈಗ ಸಾನಾ ಜಾವೇದ್‌ಗೆ ಡಿವೋರ್ಸ್ ನೀಡಿಕೆ!
ಪಾಕಿಸ್ತಾನದ ಕ್ರಿಕೆಟ್ ಟೀಮ್ ಮಾಜಿ ಕ್ಯಾಪ್ಟನ್ ಶೋಯಿಬ್ ಮಲ್ಲಿಕ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಭಾರತದ ಟೆನ್ನಿಸ್ ದಂತಕಥೆ ಸಾನಿಯಾ ಮಿರ್ಜಾರೇ ಶೋಯಿಬ್ ಮಲ್ಲಿಕ್‌ಗೆ ಡಿವೋರ್ಸ್ ನೀಡಿದ್ದರು. ಅಂದರೇ, ಪತ್ನಿಯೇ ಪತಿಗೆ ಜೀವನಾಂಶದ ಹಣ ನೀಡಿ ವಿಚ್ಛೇದನ ಪಡೆದಿದ್ದರು. ಇಸ್ಲಾಂನಲ್ಲಿ ಪತ್ನಿಯೇ ಹೀಗೆ ಡಿವೋರ್ಸ್ ನೀಡಲು ಅವಕಾಶ ಇದೆ. ಸಾನಿಯಾ ಮಿರ್ಜಾ ಜೊತೆ ಡಿವೋರ್ಸ್ ಆದ ಬಳಿಕ ಶೋಯಿಬ್ ಮಲ್ಲಿಕ್ ಸಾನಾ ಜಾವೇದ್ ಎಂಬಾಕೆಯನ್ನು ಮದುವೆಯಾಗಿದ್ದರು. ಈಗ ಹೊಸ ಸುದ್ದಿ ಏನೆಂದರೇ, ಈ ಸಾನಾಗೂ ಶೋಯಿಬ್ ಮಲ್ಲಿಕ್ ಡಿವೋರ್ಸ್ ನೀಡುತ್ತಿದ್ದಾರಂತೆ. ಇಬ್ಬರ ನಡುವಿನ ಸಂಬಂಧವೂ ಈಗ ಹಳಸಿದೆ. ಸದ್ಯದಲ್ಲೇ ಇಬ್ಬರು ತಮ್ಮ ವಿವಾಹ ವಿಚ್ಛೇದನವನ್ನು ಘೋಷಣೆ ಮಾಡುತ್ತಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಸಾನಾ, ಶೋಯಿಬ್ ಮಲ್ಲಿಕ್‌ಗೆ ಮೂರನೇ ಹೆಂಡತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.