/newsfirstlive-kannada/media/media_files/2026/02/22/shikar-dhawan-2026-02-22-12-15-31.jpg)
/newsfirstlive-kannada/media/media_files/2026/02/22/shikar-dhawan-1-2026-02-22-12-15-51.jpg)
ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ (Sophie Shine) ಅವರೊಂದಿಗೆ ಶಿಖರ್ ಧವನ್ ಸಪ್ತಪದಿ ತುಳಿದಿದ್ದಾರೆ.
/newsfirstlive-kannada/media/media_files/2026/02/22/chikkamagaluru-death-1-2026-02-22-12-16-09.jpg)
ದೆಹಲಿಯಲ್ಲಿ ನಡೆದ ಖಾಸಗಿ ಸಮಾರಂಭ
ಶಿಖರ್ ಧವನ್ ಮತ್ತು ಸೋಫಿ ಶೈನ್ ಅವರ ವಿವಾಹ ಸಮಾರಂಭ ದೆಹಲಿಯಲ್ಲಿ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ನಡೆದಿದೆ. ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
/newsfirstlive-kannada/media/media_files/2026/02/22/shikar-dhawan-5-2026-02-22-12-16-29.jpg)
ಸುದ್ದಿ ಬ್ರೇಕ್ ಮಾಡಿದ ಚಾಹಲ್
ಧವನ್ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದು ಟೀಂ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ (Yuzvendra Chahal). ಮದುವೆಯ ಸುಂದರವಾದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಚಾಹಲ್, ನವಜೋಡಿಗೆ ಶುಭಕೋರುವ ಮೂಲಕ ಈ ಸಿಹಿ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ.
/newsfirstlive-kannada/media/media_files/2026/02/22/shikar-dhawan-4-2026-02-22-12-16-51.jpg)
2 ವರ್ಷಗಳ ಡೇಟಿಂಗ್
ಮೊದಲ ಪತ್ನಿ ಆಯೇಷಾ ಮುಖರ್ಜಿ (Ayesha Mukherjee) ಅವರಿಗೆ ವಿಚ್ಛೇದನ ನೀಡಿದ ಬಳಿಕ ಶಿಖರ್ ಧವನ್ ಒಂಟಿಯಾಗಿದ್ದರು. ಈ ಸಮಯದಲ್ಲಿ ಅವರಿಗೆ ಪರಿಚಯವಾಗಿದ್ದೇ ಸೋಫಿ ಶೈನ್. ಕಳೆದ ಎರಡು ವರ್ಷಗಳಿಂದ ಶಿಖರ್ ಧವನ್ ಮತ್ತು ಸೋಫಿ ಶೈನ್ ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಡೇಟಿಂಗ್ ನಡೆಸುತ್ತಿದ್ದರು.
/newsfirstlive-kannada/media/media_files/2026/02/22/shikar-dhawan-3-2026-02-22-12-17-12.jpg)
ಅಭಿಮಾನಿಗಳ ಶುಭ ಹಾರೈಕೆ
ಈ ಜೋಡಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಎರಡು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಮೈದಾನದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮನ ಗೆದ್ದಿದ್ದ ಧವನ್, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದರು.
/newsfirstlive-kannada/media/media_files/2026/02/22/shikar-dhawan-8-2026-02-22-12-17-35.jpg)
ಶುಭವಾಗಲಿ
ಇದೀಗ ಅವರು ಮತ್ತೆ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವುದಕ್ಕೆ ಅವರ ಕೋಟ್ಯಂತರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us