/newsfirstlive-kannada/media/media_files/2026/01/29/shreyanka-patil-4-2026-01-29-14-01-45.jpg)
ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್​ ನಾ ಡ್ರೈವರ ಹಾಡಿಗೆ ಡಾನ್ಸ್​ ಮಾಡಿದ್ದಾರೆ. ಆರ್​​ಸಿಬಿ ಇನ್​ಸೈಡರ್​​ ಶೋನಲ್ಲಿ ಮಿಸ್ಟರ್​ ನ್ಯಾಗ್ಸ್​ ಜೊತೆಗೆ ಶ್ರೇಯಾಂಕಾ ಡಾನ್ಸ್​ ಮಾಡಿದ್ದಾರೆ. ರೋಲರ್​ ಮೇಲೆ ಕುಳಿತು ಇಬ್ಬರೂ ಡಾನ್ಸ್​ ಮಾಡಿದ ವಿಡಿಯೋವನ್ನ ಆರ್​​ಸಿಬಿ ಹಂಚಿಕೊಂಡಿದೆ. ಡಾನ್ಸ್​ ವಿಡಿಯೋವನ್ನ ಫ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ.
ಗೆಲುವಿನ ಹಳಿಗೆ ಮರಳುತ್ತಾ ಆರ್​​ಸಿಬಿ..?
WPL ಸೀಸನ್​ನ 4ರ 18ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ವಡೋದರಾದಲ್ಲಿ ಇಂದು ನಡೆಯೋ ಮಹತ್ವದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಅಜೇಯವಾಗಿ ಪ್ಲೇ ಆಫ್​​ಗೆ ಪ್ರವೇಶಿಸಿದ ಆರ್​​ಸಿಬಿ ಸತತ 2 ಪಂದ್ಯ ಸೋತಿದ್ದು, ಗೆಲುವಿನ ಹಳಿಗೆ ಮರಳೋ ಯತ್ನದಲ್ಲಿದೆ. ಪ್ಲೇ ಆಫ್​ ರೇಸ್​ನಲ್ಲಿ ಉಳಿಯಬೇಕಂದ್ರೆ ಯುಪಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.
ರಿಚಾ ಘೋಷ್​ ಭರ್ಜರಿ ಅಭ್ಯಾಸ
ಯುಪಿ ವಾರಿಯರ್ಸ್​ ವಿರುದ್ಧದ ಇಂದಿನ ಪಂದ್ಯಕ್ಕೆ ಆರ್​​ಸಿಬಿ ಬ್ಯಾಟರ್​​ ರಿಚಾ ಘೋಷ್​​ ಸಿದ್ಧತೆ ಜೋರಾಗಿದೆ. ಕೊಟಂಬಿ ಮೈದಾನದ ನೆಟ್ಸ್​ನಲ್ಲಿ​ ಸುದೀರ್ಘ ಕಾಲ ಅಭ್ಯಾಸ ನಡೆಸಿ ಮಹತ್ವದ ಪಂದ್ಯಕ್ಕೆ ರಿಚಾ ಘೋಷ್​ ಸಜ್ಜಾಗಿದ್ದಾರೆ. ಅಭ್ಯಾಸದ ವೇಳೆ ಬಿಗ್​ ಶಾಟ್​ಗಳನ್ನ ಬಾರಿಸಿ ಯುವ ಆಟಗಾರ್ತಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಧೀಢೀರ್ ಮುಂದೂಡಿಕೆ : ಕಾಂಗ್ರೆಸ್ ನಲ್ಲಿ ಮೂಢದ ಒಮ್ಮತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us