/newsfirstlive-kannada/media/media_files/2025/10/28/shreyas-iyer-2025-10-28-21-12-57.jpg)
ಸಿಡ್ನಿ ಆಸ್ಪತ್ರೆಯಿಂದ ಡಿಸಚಾರ್ಜ್ ಆದ ಕ್ರಿಕೆಟಿಗ ಶ್ರೇಯಸ್ ಅಯ್ಯರ್
ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ಪಕ್ಕೆಲುಬು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಇದರಿಂದಾಗಿ ಸಿಡ್ನಿಯ ಆಸ್ಪತ್ರೆಯಿಂದ ಶ್ರೇಯಸ್ ಅಯ್ಯರ್ ಅವರನ್ನು ಡಿಸಚಾರ್ಜ್ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಶನಿವಾರ ದೃಢಪಡಿಸಿದೆ. ಪಕ್ಕೆಲುಬು ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಫಿಟ್ ಎಂದು ಘೋಷಿಸಲಾಗಿದೆ. ಮುಂದೆ ಕೆಲ ದಿನಗಳವರೆಗೂ ವೈದ್ಯರ ಜೊತೆ ಸಮಾಲೋಚನೆಗಳಿಗಾಗಿ ಸಿಡ್ನಿಯಲ್ಲಿಯೇ ಇರುತ್ತಾರೆ.
ಅಯ್ಯರ್ ಅವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ದೊರೆಯುವಂತೆ ಮಾಡಿದ್ದಕ್ಕಾಗಿ ಬಿಸಿಸಿಐ, ಸಿಡ್ನಿಯಲ್ಲಿರುವ ಡಾ. ಕೌರೌಶ್ ಹಘಿಗಿ ಮತ್ತು ಅವರ ತಂಡಕ್ಕೆ ಮತ್ತು ಭಾರತದ ಡಾ. ದಿನ್ಶಾ ಪಾರ್ದಿವಾಲಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾದಲ್ಲಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮಂಡಳಿಯು ದೃಢಪಡಿಸಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us