ಮತ್ತೆ ಸುದ್ದಿಯಲ್ಲಿ ಅಯ್ಯರ್​.. T20 ತಂಡದ ನಾಯಕನಾಗಲು ಮಾಸ್ಟರ್ ಪ್ಲಾನ್..!

ಟೀಮ್ ಇಂಡಿಯಾದ ಸ್ಟೈಲಿಶ್ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ಸಮಯದಿಂದ ಟೆಸ್ಟ್ ಮತ್ತು ಟಿ20 ತಂಡದಿಂದ ದೂರವಿದ್ದ ಮುಂಬೈಕರ್, ಇದೀಗ ಆಲ್ ಫಾರ್ಮೆಟ್ ಪ್ಲೇಯರ್ ಆಗಿ ಕಮ್‌ಬ್ಯಾಕ್ ಮಾಡಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

author-image
Ganesh Kerekuli
ಚಾಂಪಿಯನ್ಸ್​ ಟ್ರೋಫಿ ಎಫೆಕ್ಟ್.. ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಭರ್ಜರಿ ಗಿಫ್ಟ್..!
Advertisment

ಟೀಮ್ ಇಂಡಿಯಾದ ಸ್ಟೈಲಿಶ್ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ಸಮಯದಿಂದ ಟೆಸ್ಟ್ ಮತ್ತು ಟಿ20 ತಂಡದಿಂದ ದೂರವಿದ್ದ ಮುಂಬೈಕರ್, ಇದೀಗ ಆಲ್ ಫಾರ್ಮೆಟ್ ಪ್ಲೇಯರ್ ಆಗಿ ಕಮ್‌ಬ್ಯಾಕ್ ಮಾಡಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಅಯ್ಯರ್ ಹೆಸರಿಲ್ಲದಿದ್ದರೂ, ಅವರು ನಡೆಸಿರುವ ತಯಾರಿ ನೋಡಿದರೆ ಅವರಿಗೆ ಅದೃಷ್ಟ ಖುಲಾಯಿಸುವ ಮುನ್ಸೂಚನೆ ಸಿಗುತ್ತಿದೆ.

ವಿಶಾಖಪಟ್ಟಣಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಶ್ರೇಯಸ್ ಅಯ್ಯರ್ ಅವರು ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟರ್ ಡ್ಯಾರೆಲ್ ಮಿಚ್ಚೆಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಮಿಚ್ಚೆಲ್ ಅವರು ಬ್ಯಾಟಿಂಗ್ ಸ್ಟಾನ್ಸ್ ಮತ್ತು ತಾಂತ್ರಿಕತೆ (Technique) ಬಗ್ಗೆ ಟಿಪ್ಸ್ ನೀಡುತ್ತಿದ್ದರೆ, ಅಯ್ಯರ್ ಅತ್ಯಂತ ಗಂಭೀರವಾಗಿ ಅದನ್ನು ಆಲಿಸುತ್ತಿದ್ದಾರೆ. ವಿಶ್ವಕಪ್ ತಂಡದಲ್ಲಿ ಇಲ್ಲದಿದ್ದರೂ ಅಯ್ಯರ್ ತೋರಿಸುತ್ತಿರುವ ಈ ರನ್ ದಾಹ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ನನ್ನ ಉಳಿಸಲು ಹೋಗಿ ಅಣ್ಣ ಬಲಿಯಾದ -ಕಮಲಾಕರ್ ಭಟ್ ಕೇಸ್​ನಲ್ಲಿ ಸಂತ್ರಸ್ತ ಕಣ್ಣೀರು..!

Shreyas iyer (4)
ಶ್ರೇಯಸ್ ಅಯ್ಯರ್

2024ರಿಂದ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ ಯಾವುದೇ ಟಿ20 ಪಂದ್ಯವನ್ನಾಡಿಲ್ಲ. ಕೇವಲ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಏಕದಿನ ತಂಡದ ಖಾಯಂ ಸದಸ್ಯರಾಗಿದ್ದರೂ, ಟಿ20ಯಲ್ಲಿ ಅವಕಾಶಕ್ಕಾಗಿ ಪರದಾಡುತ್ತಿದ್ದರು. ಇದೀಗ ವಿಶ್ವಕಪ್ ತಂಡಕ್ಕೆ ಎಂಟ್ರಿ ಕೊಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅಯ್ಯರ್ ತುದಿಗಾಲಲ್ಲಿ ನಿಂತಿದ್ದಾರೆ.

ಭವಿಷ್ಯದ ನಾಯಕತ್ವದ ಮೇಲೆ ಕಣ್ಣು?

ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಭಾರತ ಟಿ20 ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ. ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ 35 ವರ್ಷವಾಗಿದ್ದು, ಮುಂದಿನ ಅಂದರೆ 2028ರ ವಿಶ್ವಕಪ್ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಿಸಿಸಿಐ ಹೊಸ ನಾಯಕನ ಹುಡುಕಾಟ ನಡೆಸಲಿದ್ದು, ಐಪಿಎಲ್‌ನಲ್ಲಿ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರಿಗೆ ಸಾರಥ್ಯದ ಜವಾಬ್ದಾರಿ ಸಿಕ್ಕರೂ ಅಚ್ಚರಿಯಿಲ್ಲ.

ಒಟ್ಟಿನಲ್ಲಿ, ತಿಲಕ್ ವರ್ಮಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ವಿಶ್ವಕಪ್ ಟಿಕೆಟ್‌ಗಾಗಿ ಈಗ ಪೈಪೋಟಿ ಶುರುವಾಗಿದೆ. ಶ್ರೇಯಸ್ ಅಯ್ಯರ್ ಅವರ ಅನುಭವ ಮತ್ತು ನಾಯಕತ್ವದ ಗುಣ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಇದನ್ನೂ ಓದಿ: ಕೊರಿಯಾ ದೇಶದ ಗೇಮಿಂಗ್ ಆ್ಯಪ್‌ಗೆ ಮೂವರು ಹೆಣ್ಣು ಮಕ್ಕಳು ಅಡಿಕ್ಟ್- ಟಾಸ್ಕ್ ಪೂರೈಸಲು ಆತ್ಮಹತ್ಯೆಗೆ ಶರಣು!!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shreyas Iyer Team India
Advertisment