IPL​ ದ್ವೇಷ.. ಶ್ರೇಯಸ್ ಅಯ್ಯರ್​ನ ಟೀಮ್ ಇಂಡಿಯಾದಿಂದ ಹೊರಗಿಟ್ಟ ಕೋಚ್ ಗಂಭೀರ್!

ಶ್ರೇಯಸ್ ಅಯ್ಯರ್​ ಅಂದರೆ, ಸಿಡಿಮಿಡಿಗೊಳ್ಳುವ ಹೆಡ್​ ಕೋಚ್​ ಗೌತಮ್ ಗಂಭೀರ್ ಅವರು ಟೆಸ್ಟ್ ತಂಡದಲ್ಲೂ ಸ್ಥಾನ ನೀಡಲಿಲ್ಲ. ಇದು ಅಲ್ಲದೇ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವ ಏಷ್ಯಾಕಪ್​​ಗೂ ಸ್ಥಾನ ನೀಡದೇ ಗಿಲ್​ಗೆ ಮಣೆ ಹಾಕಿದ್ದಾರೆ.

author-image
Bhimappa
Shreyas_iyer_gambhir
Advertisment

ಟೀಮ್ ಇಂಡಿಯಾದಲ್ಲಿ ರಾಜಕೀಯದ ಚದುರಂಗದಾಟಕ್ಕೆ ಬದಲಿಯಾದ ಕ್ರಿಕೆಟರ್​ಗಳು ಹಲವರಿದ್ದಾರೆ. ಈ ಪೈಕಿ ಒಬ್ಬರು ಶ್ರೇಯಸ್ ಅಯ್ಯರ್. ಟೀಮ್ ಇಂಡಿಯಾ ಪರ ಆಡುವ ಎಲ್ಲಾ ಅರ್ಹತೆ ಇದ್ದರೂ, ಹೆಡ್​ ಕೋಚ್ ಗಂಭೀರ್ ಫೇವರಿಟಿಸಮ್​​ನಲ್ಲಿ ಬೆಂದು ಬಳಲುತ್ತಿದ್ದಾರೆ. 

ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಅನೌನ್ಸ್​ ಆಗಿದೆ. ಟೀಮ್ ಇಂಡಿಯಾ ಅನೌನ್ಸ್ ಆಗಿದ್ದೆ ಆಗಿದ್ದು, ಸೆಲೆಕ್ಷನ್ ಕಮಿಟಿ & ಟೀಮ್ ಮ್ಯಾನೇಜ್​ಮೆಂಟ್ ವಿರುದ್ಧ ಫ್ಯಾನ್ಸ್​ ಮಾತ್ರವಲ್ಲ. ದಿಗ್ಗಜ ಆಟಗಾರರು ಮುಗಿಬಿದ್ದಿದ್ದಾರೆ. ಇದಕ್ಕೆ ಕಾರಣ ಮುಂಬೈಕರ್ ಶ್ರೇಯಸ್ ಅಯ್ಯರ್​​​​​​​​​​​​​​​​​​​​​​​​​​​​.

KL_RAHUL_SHREYAS_IYER (1)

2024ರಿಂದಲೂ ಶ್ರೇಯಸ್​ ಕಂಡರೆ ಗಂಭೀರ್​ಗೆ ಎಲ್ಲಿಲ್ಲದ ದ್ವೇಷ..!

ಏಷ್ಯಾಕಪ್​​ನಲ್ಲಿ ಯಾರಿಗೆ ಸ್ಥಾನ ಸಿಗುತ್ತೋ ಇಲ್ವೋ, ಆದ್ರೆ, ಏನೇ ಲೆಕ್ಕಾಚಾರ ಹಾಕಿದ್ರೂ, ಶ್ರೇಯಸ್​ ಅಯ್ಯರ್​​ಗೆ ಸ್ಥಾನ ನೀಡಲೇಬೇಕಿತ್ತು. ಇನ್​ಫ್ಯಾಕ್ಟ್​_ ಎಂಥಹ ಕ್ರಿಕೆಟ್ ಪಂಡಿತನಾಗಲಿ, ಊರಿನ ಕಟ್ಟೆ ಮೇಲೆ ಕೂತು ಕ್ರಿಕೆಟ್ ಬಗ್ಗೆ ಡಿಬೇಟ್ ನಡೆಸೋ ಗಲ್ಲಿ ಕ್ರಿಕೆಟರ್​ಗಳಾಗಲಿ, ಶ್ರೇಯಸ್ ಅಯ್ಯರ್​ಗೆ ಫಸ್ಟ್ ಪ್ರಿಪ್ರೆನ್ಸ್ ನೀಡ್ತಿದ್ರು. ರಾಜಕೀಯದ ಚದುರಂಗದಾಟಕ್ಕೆ ಶ್ರೇಯಸ್​ ಅಯ್ಯರ್​ ಬಲಿಯಾಗಿದ್ದಾರೆ. ಏಷ್ಯಾಕಪ್​​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳದಂತಾಗಿದೆ. ಇದಕ್ಕೆಲ್ಲಾ ಕಾರಣ ಹೆಡ್ ಕೋಚ್ ಗಂಭೀರ್​​ ರಾಜಕೀಯದಾಟ.

2024ರ ಐಪಿಎಲ್​​ ನೆನಪಿರಬೇಕು. ಈ ಐಪಿಎಲ್​ನಲ್ಲಿ ಶ್ರೇಯಸ್ ಅಯ್ಯರ್​ ನಾಯಕತ್ವದ ಕೆಕೆಆರ್ ಗೆದ್ದು ಬೀಗಿತ್ತು. ಆದ್ರೆ, ಗೆಲುವಿನ ಕ್ರೆಡಿಟ್​ ತೆಗೆದುಕೊಂಡಿದ್ದು ಮಾತ್ರ ಅವತ್ತು ಕೆಕೆಆರ್ ಮೆಂಟರ್ ಆಗಿದ್ದ ಗೌತಮ್ ಗಂಭೀರ್. ಅವತ್ತು ಗಂಭೀರ್ ಕ್ರೆಡಿಟ್ ಮಾತ್ರವೇ ತೆಗೆದುಕೊಂಡಿರಲಿಲ್ಲ, ಶ್ರೇಯಸ್ ಬಗ್ಗೆ ದ್ವೇಷವೂ ಬೆಳಸಿಕೊಂಡಿದ್ದರು. ಇದೇ ಕಾರಣಕ್ಕೆ ನಾಯಕನಾಗಿ ಶ್ರೇಯಸ್ ಕೆಕೆಆರ್  ಬಿಟ್ಟಿದ್ದು. 

ದ್ವೇಷ ತೀರಿಸಿಕೊಳ್ಳಲು ಶ್ರೇಯಸ್ ಅಯ್ಯರ್​ಗೆ ಮತ್ತೆ ಅನ್ಯಾಯ..?

ಶ್ರೇಯಸ್ ಅಂದ್ರೆ, ಸಿಡಿಮಿಡಿಗೊಳ್ಳುವ ಹೆಡ್​ ಕೋಚ್​ ಗಂಭೀರ್, ಟೆಸ್ಟ್ ತಂಡದಲ್ಲೂ ಸ್ಥಾನ ನೀಡಲಿಲ್ಲ. ಅಷ್ಟೇ ಯಾಕೆ.? ಈಗ ಏಷ್ಯಾಕಪ್​​ ಸೀನ್​ನಲ್ಲೇ ಇರದ ಗಿಲ್​ಗೆ ಮಣೆಹಾಕಿದ್ರು. ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಸೂರ್ಯ ಹಾಗೂ ಶುಭ್​ಮನ್​ಗೆ ನಾಯಕ, ಉಪನಾಯಕ ಪಟ್ಟ ಕಟ್ಟಿದ್ರು. ಇಂಟ್ರೆಸ್ಟಿಂಗ್ ಅಂದ್ರೆ, ಕೊನೆಯ ಕ್ಷಣದ ಏಷ್ಯಾಕಪ್​​ನಿಂದ ಔಟಾಗಿದ್ದ ಶುಭ್​ಮನ್, ಕೊನೆ ಕ್ಷಣದಲ್ಲಿ ತಂಡಕ್ಕೆ ಎಂಟ್ರಿಯಾದರು. ಮತ್ತೆ ಉಪ ನಾಯಕ ಪಟ್ಟವೂ ನೀಡಿದರು. ಇದೆಲ್ಲವೂ ಗಂಭೀರ್, EGO FULFILL ಮಾಡೋಕೆ ಮಾಡಿದ ಕೆಲ್ಸ ಅನ್ನೋದ್ರಲ್ಲಿ ಡೌಟೇ ಇಲ್ಲ.

ಇದು ದೊಡ್ಡ ಅನ್ಯಾಯ

ಶ್ರೇಯಸ್ ಅಯ್ಯರ್ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ತಂಡದಿಂದ ಹೊರಗಿದ್ದರು. ನಿಮ್ಮನ್ನು ಚಾಂಪಿಯನ್ಸ್ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಶುಭಮನ್ ಗಿಲ್ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ ಎಂದು ನೀವು ವಾದಿಸಿದರೆ, ಶ್ರೇಯಸ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ..? ಶ್ರೇಯಸ್ ಏನು ತಪ್ಪು ಮಾಡಿದ್ದಾರೆ. ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ್ದರು. ತಂಡವನ್ನ ಗೆಲ್ಲಿಸಿದ್ದರು. ಅವರನ್ನ ಹರಾಜಿಗೆ ಕಳುಹಿಸಲಾಗಿತ್ತು. 2014ರ ನಂತರ ಪಂಜಾಬ್ ಕಿಂಗ್ಸ್‌ ತಂಡವನ್ನ ಫೈನಲ್‌ಗೆ ಕರೆದೊಯ್ದಿದ್ದರು. ಶಾರ್ಟ್ ಬಾಲ್ ಸಮಸ್ಯೆಯನ್ನ ಪರಿಹರಿಸಿಕೊಂಡಿದ್ದರು. ಇದು ಅವರಿಗೆ ದೊಡ್ಡ ಅನ್ಯಾಯವಾಗಿದೆ.

ಆರ್​. ಅಶ್ವಿನ್, ಮಾಜಿ ಕ್ರಿಕೆಟರ್

ಅವರಿಗೆ ಫೇವರಿಸಂ.. ಶ್ರೇಯಸ್​​ಗೆ ಯಾಕಿಲ್ಲ ತಂಡದಲ್ಲಿ ಸ್ಥಾನ..?

ಗಿಲ್ ಮಾತ್ರವಲ್ಲ, ರಿಂಕು ಸಿಂಗ್, ಶಿವಂ ದುಬೆ ಸಹ ಶ್ರೇಯಸ್ ಅಯ್ಯರ್​​​ಗೆ ಸರಿದೂಗಲ್ಲ. ಆದ್ರೆ, ಶಿವಂ ದುಬೆ, ರಿಂಕು ಸಿಂಗ್​ ಆಯ್ಕೆಯಲ್ಲಿ ಫೇವರಿಸಂ ಮಾಡಿದ ಗಂಭೀರ್, 3ನೇ ವೇಗಿಯ ಆಯ್ಕೆಗೆ ಸರಿ ಹೊಂದದ ಹರ್ಷಿತ್ ರಾಣಾಗೂ ಚಾನ್ಸ್​ ನೀಡದರು. ಆದ್ರೆ, ಸ್ಪಿನ್ & ಪೇಸರ್​ಗಳನ್ನ ಸಮಾನವಾಗಿ ದಂಡಿಸುವ ಶ್ರೇಯಸ್​, ಗಂಭೀರ್​ಗೆ ಕಾಣಲಿಲ್ವಾ? ಐಪಿಎಲ್, ದೇಶಿ ಕ್ರಿಕೆಟ್​​ನಲ್ಲಿ ಟನ್ ಗಟ್ಟಲೇ ರನ್ ಹೊಡೆಯುತ್ತಿರುವ ಶ್ರೇಯಸ್​​ಗೆ ಸ್ಥಾನಕ್ಕೆ ಅರ್ಹರು ಎಂಬ ಪರಿಜ್ಞಾನ ಇಲ್ವಾ..?

ಭಾರತದ ದರ್ಬಾರ್​.. ICC Rankings​ ನಲ್ಲಿ ಗಿಲ್, ರೋಹಿತ್, ಕೊಹ್ಲಿ ಕಮಾಲ್

2024ರಿಂದ ಶ್ರೇಯಸ್​ ಅಯ್ಯರ್ ಪ್ರದರ್ಶನ

ಟೂರ್ನಿಗಳುರನ್​​   ಸರಾಸರಿ   ಸ್ಟ್ರೈಕ್​ರೇಟ್​  
ರಣಜಿ 480    68.690.2
ಮುಷ್ತಾಕ್ ಆಲಿ           345   49.3188.5
ವಿಜಯ್ ಹಜಾರೆ        325 325131.6 
ಚಾಂ. ಟ್ರೋಫಿ            243   48.679.41
ಐಪಿಎಲ್604   46.4 169.5


ನನಗೆ ಅರ್ಥವಾಗುತ್ತಿಲ್ಲ. ಶ್ರೇಯಸ್ ಅಯ್ಯರ್ 20 ಸದಸದ್ಯರ ತಂಡದಲ್ಲಿ ಆಯ್ಕೆ ಆಗದಿರಲು ಕಾರಣ ಏನೆಂದು ತಿಳಿಯುತ್ತಿಲ್ಲ. ನಾನು ಆಯ್ಕೆಯಾಗಿರುವ 15 ಆಟಗಾರರ ಬಗ್ಗೆ ಮಾತನಾಡುತ್ತಿಲ್ಲ. ಆದ್ರೆ, 20 ಜನರ ಬಗ್ಗೆಯೇ ಮಾತನಾಡುತ್ತಿದ್ದೇನೆ. ಟಿ20 ದೃಷ್ಟಿಕೋನದಿಂದ ಶ್ರೇಯಸ್ ಆಯ್ಕೆದಾರರ ಯೋಜನೆಯಲ್ಲಿಲ್ಲ ಎಂಬುದುವುದು ಸ್ಪಷ್ಟ.

ಅಭಿಷೇಕ್ ನಾಯರ್, ಕೆಕೆಆರ್ ಸಹಾಯಕ ಕೋಚ್

ಟಿ20, ಏಕದಿನ, ಟೆಸ್ಟ್​ ಕ್ರಿಕೆಟ್​, ಹೀಗೆ 3 ಫಾರ್ಮೆಟ್​ನಲ್ಲಿ ಶ್ರೇಯಸ್ ಅಯ್ಯರ್ ಅಬ್ಬರಿಸಿದ್ದಾರೆ. ಆದ್ರೆ, ಆಟಕ್ಕೆ ತಕ್ಕ ಪ್ರತಿಫಲ ಮಾತ್ರ ಟೀಮ್ ಇಂಡಿಯಾದಲ್ಲಿ ಸಿಗ್ತಿಲ್ಲ. ಇದು ನಿಜಕ್ಕೂ ಶ್ರೇಯಸ್ ಅಯ್ಯರ್​ಗೆ ಆಗ್ತಿರುವ ಅನ್ಯಾಯವಲ್ದೇ ಮತ್ತೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Gautam Gambhir Asia Cup 2025 Gautam Gambhir India head coach
Advertisment