/newsfirstlive-kannada/media/media_files/2025/08/16/rohit_sharma-2025-08-16-18-35-12.jpg)
ಭಾರತ -ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಇನ್ನೇರೆಡು ವಾರದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸಕ್ಕೆ ಇನ್ನಷ್ಟೇ ಟೀಮ್ ಇಂಡಿಯಾ ಪ್ರಕಟಿಸಬೇಕಿದೆ. ಆದ್ರೆ, ಇದೇ ಸರಣಿಯ ಬದಲಾವಣೆಯ ಪರ್ವಕ್ಕೆ ನಾಂದಿಯಾಡಲಿದೆ. ಶುಭ್​ಮನ್ ಗಿಲ್​​ಗೆ ಶುಭ ಸುದ್ದಿ ಕಾದಿದೆ.
ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಆರಂಭಗೊಳ್ಳಲಿದೆ. ಈ ಮಹತ್ವದ ಸರಣಿಗೆ ಇನ್ನಷ್ಟೇ ಟೀಮ್ ಇಂಡಿಯಾ ಪ್ರಕಟಿಸಬೇಕಿದೆ. ಈಗಾಗಲೇ ಕಾರ್ಯ ಪ್ರವೃತ್ತವಾಗಿರುವ ಸೆಲೆಕ್ಷನ್ ಕಮಿಟಿ, ತೆರೆಯ ಹಿಂದೆಯೇ ಕಸರತ್ತು ನಡೆಸ್ತಿದೆ. ಭವಿಷ್ಯದ ತಂಡ ಕಟ್ಟುವ ಲೆಕ್ಕಚಾರದಲ್ಲಿರುವ ಅಜಿತ್ ಅರ್ಗಕರ್ & ಟೀಮ್, ಇದೇ ಆಸಿಸ್​ ಸರಣಿಯಲ್ಲಿ ಮಹತ್ವದ ಬದಲಾವಣೆಗೆ ನಾಂದಿಯಾಡಲು ಮುಂದಾಗಿದೆ. ಅಷ್ಟೇ ಅಲ್ಲ, ಬಿಗ್ & ಬೋಲ್ಡ್​ ಡಿಸಿಷನ್​​​​​​​​​​​​​​​​​​​​​​​ ತೆಗೆದುಕೊಳ್ಳುವತ್ತ ಚಿಂತನೆ ನಡೆಸಿದೆ.
ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಬದಲಾವಣೆ ಪರ್ವ..!
ಟೆಸ್ಟ್​, ಟಿ20 ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾ ಬದಲಾವಣೆ ಕಂಡಿದೆ. ಈ ನಿಟ್ಟಿನಲ್ಲಿ ಏಕದಿನ ತಂಡದಲ್ಲೂ ಬದಲಾವಣೆಗೆ ಮುಂದಾಗಿರುವ ಬಿಸಿಸಿಐ, ಆಸ್ಟ್ರೇಲಿಯಾ ಪ್ರವಾಸದಲ್ಲೇ ಬದಲಾವಣೆಯ ಪರ್ವಕ್ಕೆ ನಾಂದಿಯಾಡಲು ಮುಂದಾಗಿದೆ. ಈ ನಿಟ್ಟಿನಲ್ಲೇ ಚಿಂತನ ಮಂಥನ ನಡೆಸಿರುವ ಸೆಲೆಕ್ಷನ್ ಕಮಿಟಿ, ಏಕದಿನ ತಂಡದ ನಾಯಕ ರೋಹಿತ್ ಶರ್ಮಾ​​ಗೆ ಬಿಗ್​ ಶಾಕ್​ ನೀಡಲು ಮುಂದಾಗಿದೆ. ಏಕದಿನ ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೊಕ್ ನೀಡಿ ಶುಭ್​ಮನ್ ಗಿಲ್​​ಗೆನಾಯಕತ್ವದ ಪಟ್ಟ ಕಟ್ಟುವ ಲೆಕ್ಕಚಾರದಲ್ಲಿದೆ. ಶೀಘ್ರದಲ್ಲೇ ಗುಡ್​ ನ್ಯೂಸ್​ ನೀಡಲು ಮುಂದಾಗಿರುವ ಸೆಲೆಕ್ಷನ್ ಕಮಿಟಿ, ಆಸ್ಟ್ರೇಲಿಯಾ ಪ್ರವಾಸದಿಂದಲೇ ಶುಭ್​ಮನ್ ಗಿಲ್​​ಗೆ ನಾಯಕತ್ವದ ಜವಾಬ್ದಾರಿ ವಹಿಸಲು ಪ್ಲ್ಯಾನ್ ರೂಪಿಸಿದೆ.
ಪ್ರಿನ್ಸ್​ ಶುಭ್​ಮನ್​​ ಗಿಲ್​​​ಗೆ ಸಿಗುತ್ತಾ ODI ಅಧಿಪತ್ಯ..?
ಬಿಸಿಸಿಐ ಶುಭ್​ಮನ್​​ ಗಿಲ್​ಗೆ ಏಕದಿನ ನಾಯಕತ್ವದ ಕಟ್ಟುವ ಚಿಂತನೆ ಹಿಂದೆ, 2027ರ ಏಕದಿನ ವಿಶ್ವಕಪ್ ಲೆಕ್ಕಚಾರ ಇದೆ. ಯಾಕಂದ್ರೆ, ಏಕದಿನ ವಿಶ್ವಕಪ್​​ಗೆ ಕೇವಲ 2 ವರ್ಷ ಬಾಕಿ ಇದೆ. ಹೀಗಾಗಿ ಶುಭ್​ಮನ್​​ ಗಿಲ್​​ಗೆ ಆಸ್ಟ್ರೇಲಿಯಾ ಸರಣಿಯಿಂದಲೇ ಏಕದಿನ ನಾಯಕತ್ವದ ಪಟ್ಟ ನೀಡಿದ್ರೆ. ನಾಯಕತ್ವದ ಅನುಭವದ ಜೊತೆಗೆ ಟೀಮ್ ಬಿಲ್ಡ್ ಮಾಡಲು ಟೈಮ್ ಸಿಗುತ್ತೆ. ಹೀಗಾಗಿ 2027ರ ಏಕದಿನ ವಿಶ್ವಕಪ್​ ವೇಳೆಗೆ ನಾಯಕನಾಗಿಯೂ ಮತ್ತಷ್ಟು ಪಳಗ್ತಾರೆ. ಹೀಗಾಗಿ ಆಸ್ಟ್ರೇಲಿಯಾ ಸರಣಿ ವೇಳೆಯೇ ಪಟ್ಟ ಕಟ್ಟಲು ಸಕಾಲ ಅನ್ನೋದು ಅಗರ್ಕರ್ & ಟೀಮ್​ ಲೆಕ್ಕಾಚಾರ.
ಚಾಂಪಿಯನ್ ನಾಯಕನ ಸುಲಭಕ್ಕೆ ಕೈಬಿಡುತ್ತಾ..?
ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸಕ್ಸಸ್​ ಫುಲ್ ಕ್ಯಾಪ್ಟನ್ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ. ಆದ್ರೆ, ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ವಯಸ್ಸು 40 ಆಗಿರುತ್ತೆ. ಹೀಗಾಗಿ ಫಿಟ್ನೆಸ್, ಇಂಜುರಿ ಫ್ರೀ ಆಗಿರುವುದು. ಫಾರ್ಮ್​ ಉಳಿಸಿಕೊಳ್ಳುವುದು ಬಿಗೆಸ್ಟ್ ಚಾಲೆಂಜ್. ಹೀಗಾಗಿ ಭವಿಷ್ಯದ ಲೆಕ್ಕಾಚಾರ ಹಾಕಿಯೇ ಬಿಸಿಸಿಐ, ಲಾಂಗ್ ಟರ್ಮ್​ ಕ್ಯಾಪ್ಟನ್​ ಆಗಿ 25 ವರ್ಷದ ಶುಭ್​ಮನ್​ಗೆ ಪಟ್ಟ ಕಟ್ಟಲು ಮುಂದಾಗಿದೆ. ಈ ನಿಟ್ಟಿನಲ್ಲೇ ತೆರೆಯ ಹಿಂದೆ ಕಸರತ್ತು ನಡೆಸ್ತಿದೆ. ಆದ್ರೆ, ಟಿ20 ವಿಶ್ವಕಪ್​, ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್​ ಶರ್ಮಾನ ಸುಲಭಕ್ಕೆ ಕೈಬಿಡುವುದು ಕಷ್ಟಸಾಧ್ಯ ಅನ್ನೋದು ಮರೆಯುವಂತಿಲ್ಲ.
ಶುಭ್​ಮನ್ ನಾಯಕನಾದ್ರೆ ಭುಗಿಲೇಳಲಿದೆ ಅಸಮಾಧಾನ..!?
ಸದ್ಯ ಟಿ20, ಟೆಸ್ಟ್​ನಿಂದ ದೂರ ಉಳಿದಿರುವ ರೋಹಿತ್, ಏಕದಿನ ತಂಡದಿಂದ ದೂರ ಉಳಿಯುವ ಸಮಯ ದೂರವೇನಿಲ್ಲ. ಆದ್ರೆ, 2027ರ ಏಕದಿನ ವಿಶ್ವಕಪ್​ನಲ್ಲಿ ಆಡುವ ಹೆಬ್ಬಯಕೆ ಹೊಂದಿರುವ ರೋಹಿತ್, ಗೆಲುವಿನ ವಿದಾಯ ಹೇಳುವ ಲೆಕ್ಕಚಾರದಲ್ಲಿದ್ದಾರೆ. ಇಂಥಹ ಟೈಮ್​ನಲ್ಲೇ ರೋಹಿತ್ ಶರ್ಮಾನ ನಾಯಕತ್ವದಿಂದ ಕೆಳಗಿಳಿಸಿ ಶುಭ್​ಮನ್​ಗೆ ಪಟ್ಟ ನೀಡಿದ್ರೆ, ಟೀಮ್ ಇಂಡಿಯಾದಲ್ಲಿ ಅಸಮಾಧಾನಕ್ಕೂ ನಾಂದಿಯಾಡಿದರು ಅಚ್ಚರಿ ಇಲ್ಲ. ಹೀಗಾಗಿ 2027ರ ಏಕದಿನ ವಿಶ್ವಕಪ್​​ನಲ್ಲಿ ಶುಭ್​ಮನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸಮರಕ್ಕಿಳಿಯುವ ಆಸೆ ಕೈಬಿಟ್ಟರು ಅಚ್ಚರಿ ಇಲ್ಲ.
ಭವಿಷ್ಯದ ಲೆಕ್ಕಾಚಾರದಲ್ಲಿರುವ ಬಿಸಿಸಿಐ ಶುಭ್​ಮನ್​ ಗಿಲ್​ಗೆ ನಾಯಕತ್ವ ನೀಡಲು ಸರಿಯಾದ ಸಮಯ. ಆದ್ರೆ, ಇದೇ ನೆಪದಲ್ಲಿ ರೋಹಿತ್​ ಶರ್ಮಾನ ಸೈಡ್​​ಲೈನ್ ಮಾಡಿದ್ರೆ, ತಂಡದಲ್ಲಿ ಆಂತರಿಕ ಕಲಹಗಳು ಸೃಷ್ಟಿಯಾಗೋದ್ರಲ್ಲಿ ಅನುಮಾನ ಇಲ್ಲ. ಹೀಗಾಗಿ ಬಿಸಿಸಿಐ & ಸೆಲೆಕ್ಷನ್ ಕಮಿಟಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಜಸ್ಟ್ ವೇಯ್ಟ್​ & ಸೀ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ