/newsfirstlive-kannada/media/media_files/2025/08/12/shubman_gill-4-2025-08-12-13-01-44.jpg)
ಏಷ್ಯಾಕಪ್ಗೂ ಮುನ್ನ ಬಿಸಿಸಿಐ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ಟೀಮ್ ಸೆಲೆಕ್ಷನ್ನ ಚರ್ಚೆಗಳು ಜೋರಾಗಿದ್ದು, ಟೆಸ್ಟ್ ನಾಯಕನಾಗಿ ಸಕ್ಸಸ್ ಕಂಡ ಗಿಲ್ಗೆ ಭರ್ಜರಿ ಗಿಪ್ಟ್ ಕೊಡಲು ಪ್ಲಾನ್ ನಡೆಯುತ್ತಿದೆ. ಭವಿಷ್ಯದ ಟೀಮ್ ಇಂಡಿಯಾ ಬಗ್ಗೆ ಯೋಚಿಸಿರೋ ಬಾಸ್ಗಳು ಹೊಸ ದಾಳ ಉರುಳಿಸಿದ್ದಾರೆ. ಯುವರಾಜ ಶುಭ್ಮನ್ ಗಿಲ್ನ ಟೀಮ್ ಇಂಡಿಯಾ ರಾಜನನ್ನಾಗಿ ಮಾಡಲು ಪರ್ಫೆಕ್ಟ್ ಪ್ಲಾನ್ ರೆಡಿಯಾಗಿದೆ.
ಈ ಯುವ ಆಟಗಾರ ನಾಯಕತ್ವಕ್ಕೆ ಸಮರ್ಥನಾ? ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಹೀಗೊಂದು ಪ್ರಶ್ನೆ ಕ್ರಿಕೆಟ್ ಲೋಕದಲ್ಲಿ ತೀವ್ರ ಚರ್ಚೆಯಾಗಿತ್ತು. ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ, ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ನಿವೃತ್ತಿ ಬಳಿಕ ಯುವ ಶುಭ್ಮನ್ ಗಿಲ್ಗೆ ಪಟ್ಟ ಕಟ್ತು. ಟೀಮ್ ಇಂಡಿಯಾದ ಭವಿಷ್ಯ, ಯುವ ಪಡೆಯನ್ನ ಕಟ್ಟೋ ಲೆಕ್ಕಾಚಾರ ಈ ನಿರ್ಧಾರದ ಹಿಂದಿದ್ವು. ಆದ್ರೂ, ಮಹತ್ವದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅನಾನುಭವಿ ಗಿಲ್ಗೆ ಪಟ್ಟ ಕಟ್ಟಿದ್ದು ತೀವ್ರ ಚರ್ಚೆಯಾಗಿತ್ತು. ಈಗ ಆ ಪ್ರವಾಸ ಅಂತ್ಯ ಕಂಡಿದೆ. ಗಿಲ್ಗೆ ಆಫರ್ ಮೇಲೆ ಆಫರ್ ಬರ್ತಿವೆ.
ಸಕ್ಸಸ್ ಕಂಡ ಗಿಲ್ಗೆ ಬಂಪರ್ ಬಹುಮಾನ.!
ಫಸ್ಟ್ ಟಾಸ್ಕ್ನಲ್ಲೇ ಯಶಸ್ಸು ಕಂಡ ಟೀಮ್ ಇಂಡಿಯಾವನ್ನ ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರದ್ದೇ ನಾಡಲ್ಲಿ ಇಂಗ್ಲೆಂಡ್ ತಂಡವನ್ನ ಹಿಮ್ಮೆಟ್ಟಿಸಿ ಅನಾನುಭವಿ ನಾಯಕ ಎನಿಸಿಕೊಂಡಿದ್ದ ನನ್ನ ಕೆಪಾಸಿಟಿ ಏನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. 25 ವರ್ಷಕ್ಕೆ ಜಗಮೆಚ್ಚಿದ ಸಾಧನೆ ಮಾಡಿದ ಗಿಲ್ಗೆ ಇದೀಗ ಭರ್ಜರಿ ಉಡುಗೊರೆ ರೆಡಿಯಾಗಿದೆ. ‘ಪ್ರಿನ್ಸ್’ ಪಟ್ಟಾಭಿಷೇಕಕ್ಕೆ ಸದ್ದಿಲ್ಲದೇ ಸಿದ್ಧತೆಗಳು ಆರಂಭವಾಗಿವೆ. ಹೊಸ ಆಟ ಶುರುವಿಟ್ಟುಕೊಂಡಿರೋ ಬಿಸಿಸಿಐ ಬಾಸ್ಗಳು ಹೊಸ ದಾಳ ಉರುಳಿಸಿದ್ದಾರೆ.
ಗಿಲ್ ಟಿ20 ಕಮ್ಬ್ಯಾಕ್ಗೆ ಮಹೂರ್ತ ಫಿಕ್ಸ್.!
ಜಲೈ 30 2024 ಶುಭ್ಮನ್ ಗಿಲ್ ಕೊನೆಯದಾಗಿ ಟಿ20 ಪಂದ್ಯವನ್ನಾಡಿದ್ದು. ಆ ಬಳಿಕ ಟಿ20 ಫಾರ್ಮೆಟ್ನಿಂದ ಶುಭ್ಮನ್ ಗಿಲ್ ಸೈಡ್ಲೈನ್ ಮಾಡಲಾಗಿತ್ತು. ಶುಭ್ಮನ್ ಟಿ20 ಕರಿಯರ್ ಖತಂ ಎಂದೇ ಎಲ್ರೂ ಭಾವಿಸಿದ್ರು. ಆದ್ರೀಗ ಇಂಗ್ಲೆಂಡ್ ಪ್ರವಾಸದ ಸಕ್ಸಸ್ ಶುಭ್ಮನ್ ಟಿ20 ಕರಿಯರ್ಗೆ ಪುನರ್ಜನ್ಮ ನೀಡಿದೆ. ಏಷ್ಯಾಕಪ್ನೊಂದಿಗೆ ಗಿಲ್ ಕಮ್ಬ್ಯಾಕ್ಗೆ ಮಹೂರ್ತ ಫಿಕ್ಸ್ ಆಗಿದೆ. ಇಷ್ಟೇ ಅಲ್ಲ, ಪ್ರಿನ್ಸ್ ಶುಭ್ಮನ್ ಗಿಲ್ಗೆ ವೈಸ್ ಕ್ಯಾಪ್ಟನ್ ಪಟ್ಟ ಕಟ್ಟಲು ಮ್ಯಾನೇಜ್ಮೆಂಟ್, ಸೆಲೆಕ್ಷನ್ ಕಮಿಟಿ ರೆಡಿಯಾಗಿದೆ.
ಏಕದಿನ ತಂಡಕ್ಕೂ ಶುಭ್ಮನ್ ಗಿಲ್ ನಾಯಕ.!
ಸದ್ಯ ಟಿ20 ತಂಡದಲ್ಲಿ ಶುಭ್ಮನ್ ಗಿಲ್ಗೆ ಉಪನಾಯಕನ ಪಟ್ಟ ಕಟ್ಟಲು ಚರ್ಚೆ ನಡೀತಿವೆ. ಆದ್ರೆ, ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗಲೇ ಬಿಸಿಸಿಐ ವಲಯದಿಂದ ಹೊರ ಬಿದ್ದ ಮತ್ತೊಂದು ಸುದ್ದಿ ನಿಮಗೆ ಗೊತ್ತಿರಬಹುದು. ರೋಹಿತ್ ಶರ್ಮಾನ ಕೆಳಗಿಳಿಸಿ ಶುಭ್ಮನ್ ಗಿಲ್ಗೆ ಪಟ್ಟಕಟ್ಟಲು ಬಿಸಿಸಿಐ ರೆಡಿಯಾಗಿದೆ ಅನ್ನೋದು. 2027ರ ವಿಶ್ವಕಪ್ ಟೂರ್ನಿಯನ್ನ ಟಾರ್ಗೆಟ್ ಮಾಡಿರುವ ಬಿಸಿಸಿಐ ಯುವ ನಾಯಕನ ಸಾರಥ್ಯದಲ್ಲಿ ಅಖಾಡಕ್ಕಿಳಿಯೋ ಪ್ಲಾನ್ ಹೊಂದಿದೆ. ಹಾಗಾಗಿ ಮುಂದಿನ ಆಸ್ಟ್ರೇಲಿಯಾ ಸರಣಿಯಿಂದಲೇ ಗಿಲ್ನ ಒನ್ಡೇ ಟೀಮ್ ಕ್ಯಾಪ್ಟನ್ ಮಾಡೋ ಬಿಸಿಸಿಐ ವಲಯದಲ್ಲಿ ಗಂಭೀರ ಚಿಂತನೆ ನಡೆದಿದೆ. ಕೋಚ್ ಗಂಭೀರ್, ಸೆಲೆಕ್ಟರ್ಸ್ ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಜನರಿಗೆ ಗುಡ್ನ್ಯೂಸ್.. ಉದ್ಯಾನ ನಗರಿಯಲ್ಲಿ ತಲೆ ಎತ್ತಲಿದೆ ಬೃಹತ್ ಸ್ಟೇಡಿಯಂ
ಟೆಸ್ಟ್ ನಾಯಕ ಗಿಲ್ಗೆ, ಸದ್ಯ ಏಕದಿನ ತಂಡದ ಸಾರಥ್ಯವನ್ನೂ ವಹಿಸೋಕೆ ಮುಂದಾಗಿದೆ. 2026ರಲ್ಲಿ ಟಿ20 ವಿಶ್ವಕಪ್ ಇರೋದ್ರಿಂದ ಎಚ್ಚರಿಕೆಯ ಹೆಜ್ಜೆ ಇಡ್ತಾ ಇರೋ ಬಾಸ್ಗಳು, ಸದ್ಯ ಗಿಲ್ನ ಉಪನಾಯಕನನ್ನಾಗಿ ಮಾತ್ರ ನೇಮಿಸಿ ವಿಶ್ವಕಪ್ ಅಂತ್ಯವಾದ ಬಳಿಕ ಗಿಲ್ ಟಿ20ಗೂ ನಾಯಕನನ್ನಾಗಿ ಮಾಡೋ ಯೋಜನೆ ಹಾಕಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಭವಿಷ್ಯದ ಬಗ್ಗೆ ಸ್ಪಷ್ಟವಾದ ಪ್ಲಾನ್ ರೂಪಿಸಿಕೊಂಡಿರೋ ಬಿಸಿಸಿಐ ಬಾಸ್ಗಳು ಗಿಲ್ಗೆ ಪಟ್ಟ ಕಟ್ಟಲು ಕಸರತ್ತು ನಡೆಸ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಗಿಲ್ ಶೀಘ್ರದಲ್ಲೇ ಟೀಮ್ ಇಂಡಿಯಾದ ಆಲ್ಫಾರ್ಮೆಟ್ ಕ್ಯಾಪ್ಟನ್ ಆಗಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ