/newsfirstlive-kannada/media/media_files/2026/01/05/smriti-mandana-2-2026-01-05-13-39-56.jpg)
/newsfirstlive-kannada/media/media_files/2026/01/05/smriti-mandana-3-2026-01-05-13-40-07.jpg)
RCBಗೆ ಮಂದಾನ ರಾಯಲ್ ಎಂಟ್ರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ WPL ಅಖಾಡಕ್ಕೆ ಧುಮುಕಿದ್ದಾರೆ. ಮುಂಬೈನಲ್ಲಿ ಮಂದಾನ ಆರ್ಸಿಬಿ ತಂಡವನ್ನ ಕೂಡಿಕೊಂಡಿದ್ದಾರೆ. ತಂಡ ಸೇರಿದ ಬೆನ್ನಲ್ಲೇ ಫೋಟೋಶೂಟ್ನಲ್ಲಿ ಸ್ಮೃತಿ ಮಂದಾನ ಭಾಗಿಯಾಗಿದ್ದು, ಸ್ಟೈಲಿಷ್ ಪೋಸ್ ಕೊಟ್ಟು ಮಿಂಚಿದ್ದಾರೆ. ಬಳಿಕ ಅಭ್ಯಾಸದಲ್ಲೂ ಮಂದಾನ ಭಾಗಿಯಾಗಿದ್ದು, ನೆಟ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
/newsfirstlive-kannada/media/media_files/2026/01/05/harmanpreet-kaur-2026-01-05-13-42-32.jpg)
ಹರ್ಮನ್ಪ್ರೀತ್ಗೆ ಅದ್ಧೂರಿ ಸ್ವಾಗತ
ಸೀಸನ್ 4ರ WPL ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರಿತ್ ಕೌರ್ ಮುಂಬೈ ಇಂಡಿಯನ್ಸ್ ತಂಡವನ್ನ ಕೂಡಿಕೊಂಡಿದ್ದಾರೆ. ಮುಂಬೈನಲ್ಲಿರೋ ಟೀಮ್ ಹೋಟೆಲ್ಗೆ ಬಂದ ಹರ್ಮನ್ಪ್ರಿತ್ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಆಟಗಾರ್ತಿಯರು ಹಾಗೂ ಸಪೋರ್ಟ್ ಸ್ಟಾಪ್ ತಬ್ಬಿಕೊಂಡು ಆತ್ಮೀಯವಾಗಿ ನಾಯಕಿಯನ್ನ ಸ್ವಾಗತಿಸಿದ್ದಾರೆ. ಕೊನೆಯಲ್ಲಿ ಎಲ್ಲಾ ಸೇರಿ ಬಾಂಗ್ರಾ ಸ್ಟೆಪ್ಸ್ ಹಾಕಿದ್ದಾರೆ.
/newsfirstlive-kannada/media/media_files/2026/01/05/sophie-devine-2026-01-05-13-46-04.jpg)
ಧುರಂದರ್ ಹಾಡಿಗೆ ಸೋಫಿ ಡಿವೈನ್ ರೀಲ್ಸ್
WPL ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದ ಮಾಜಿ ನಾಯಕಿ ಸೋಫಿ ಡಿವೈನ್ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ಗುಜರಾತ್ ಜೈಂಟ್ಸ್ ತಂಡವನ್ನ ಕೂಡಿಕೊಂಡ ಬೆನ್ನಲ್ಲೇ ರೀಲ್ಸ್ ಮಾಡಿ ಮಸ್ತಿ ಮಾಡಿದ್ದಾರೆ. ಧುರಂದರ್ ಚಿತ್ರದ ಫಸ್ಲಾ ಸಾಂಗ್ಗೆ ಸೋಫಿ ಡಿವೈನ್ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋವನ್ನ ಗುಜರಾತ್ ಜೈಂಟ್ಸ್ ತಂಡ ಹಂಚಿಕೊಂಡಿದ್ದು, ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
/newsfirstlive-kannada/media/media_files/2026/01/05/meg-lanning-2026-01-05-13-47-31.jpg)
ಯುಪಿ ವಾರಿಯರ್ಸ್ಗೆ ಮೆಗ್ ಲ್ಯಾನಿಂಗ್ ನಾಯಕಿ
ಮಹಿಳಾ ಪ್ರೀಮಿಯರ್ ಲೀಗ್ ಸೀಸನ್ 4ಕ್ಕೆ ಹೊಸ ನಾಯಕಿಯನ್ನ ಯುಪಿ ವಾರಿಯರ್ಸ್ ತಂಡ ಘೋಷಣೆ ಮಾಡಿದೆ. ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ಗೆ ತಂಡದ ನಾಯಕತ್ವವನ್ನ ನೀಡಿದೆ. ಕಳೆದ 3 ಸೀಸನ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮುನ್ನಡೆಸಿದ್ದ ಮೆಗ್ ಲ್ಯಾನಿಂಗ್, 3 ಸೀಸನ್ನಲ್ಲೂ ಫೈನಲ್ವರೆಗೆ ಕೊಂಡೊಯ್ದಿದ್ರು. ಆಸ್ಟ್ರೇಲಿಯಾದ ನಾಯಕಿಯಾಗಿ 3 T20 ವಿಶ್ವಕಪ್, 1 ಏಕದಿನ ವಿಶ್ವಕಪ್ ಗೆದ್ದ ದಾಖಲೆಯನ್ನ ಮೆಗ್ ಲ್ಯಾನಿಂಗ್ ಹೊಂದಿದ್ದಾರೆ.
/newsfirstlive-kannada/media/media_files/2026/01/05/meg-lanning-1-2026-01-05-13-48-33.jpg)
ಕಮ್ಬ್ಯಾಕ್ಗೆ ಸಜ್ಜಾದ ಹೀಲಿ ಮ್ಯಾಥ್ಯೂಸ್
ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿ ಹೀಲಿ ಮ್ಯಾಥ್ಯೂಸ್ ಮೈದಾನಕ್ಕೆ ಮರಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ಗೆ ಅಭ್ಯಾಸ ಆರಂಭಿಸಿರೋ ವೆಸ್ಟ್ ಇಂಡೀಸ್ ಆಟಗಾರ್ತಿ ಮುಂಬೈನ ವಾಂಖೆಡೆ ಮೈದಾನದ ನೆಟ್ಸ್ನಲ್ಲಿ ದೀರ್ಘ ಕಾಲ ಬ್ಯಾಟಿಂಗ್ ನಡೆಸಿದ್ದಾರೆ. 2025ರ ಅಂತ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಹೀಲಿ ಮ್ಯಾಥ್ಯೂಸ್ ಸರ್ಜರಿಗೆ ಒಳಗಾಗಿದ್ರು. ಹೀಗಾಗಿ, ಕೆರಬಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್ನಿಂದ ಹೊರಗುಳಿದಿದ್ದ ಹೀಲಿ ಮ್ಯಾಥ್ಯೂಸ್ WPLನೊಂದಿಗೆ ಕಮ್ಬ್ಯಾಕ್ ಎದುರು ನೋಡ್ತಿದ್ದಾರೆ.
/newsfirstlive-kannada/media/media_files/2026/01/03/cricketer-mustafizur-rehaman-out-of-ipl-2026-01-03-11-59-33.jpg)
ಬಾಂಗ್ಲಾದೇಶದಲ್ಲಿ IPL ಬ್ಯಾನ್.?
ವೇಗಿ ಮುಸ್ತಫಿಜುರ್ ರೆಹಮಾನ್ಗೆ ಐಪಿಎಲ್ನಿಂದ ಗೇಟ್ಪಾಸ್ ನೀಡಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಐಪಿಎಲ್ ಬ್ಯಾನ್ ಮಾಡಲು ಬಾಂಗ್ಲಾದೇಶ ಸರ್ಕಾರ ಮುಂದಾಗಿದೆ. ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್, ಬಾಂಗ್ಲಾದೇಶ ಆಟಗಾರನಿಗೆ ಮಾಡಲಾದ ಅವಮಾನಕ್ಕೆ ಪ್ರತೀಕಾರವಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಐಪಿಎಲ್ನಿಂದ ಮುಸ್ತಫಿಜುರ್ ಕೈ ಬಿಡುವಂತೆ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಬಿಸಿಸಿಐ, ಬಾಂಗ್ಲಾ ವೇಗಿಗೆ ಗೇಟ್ಪಾಸ್ ನೀಡಿತ್ತು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us