/newsfirstlive-kannada/media/post_attachments/wp-content/uploads/2025/05/Smriti_Mandhana.jpg)
ವಿರಾಟ್ ಕೊಹ್ಲಿ, ಸ್ಮತಿ ಮಂದಾನ ಇಂಡಿಯನ್​ ಕ್ರಿಕೆಟ್​ನ ಬೆನ್ನೆಲುಬು. ತಮ್ಮ ಆಟದಿಂದಲೇ ವಿಶ್ವ ಕ್ರಿಕೆಟ್​ ಅಭಿಮಾನಿಗಳ ಹೃದಯ ಗೆದ್ದವರು, ಟೀಮ್​ ಇಂಡಿಯಾದ ಖ್ಯಾತಿ ಹೆಚ್ಚಿಸಿದವರು. ಕೊಹ್ಲಿ ಕ್ರಿಕೆಟ್​ ಜಗತ್ತಿಗೆ ಕಿಂಗ್​ ಆದ್ರೆ, ಸ್ಮೃತಿ ಮಂದಾನ ಕ್ರಿಕೆಟ್​​ ಜಗತ್ತಿನ ಕ್ವೀನ್​. ಆದ್ರೆ, ಕ್ವೀನ್​ ಸ್ಮೃತಿ ಮಂದಾನ ಬ್ಯಾಟ್​​ ಈ ವಿಶ್ವಕಪ್​ನಲ್ಲಿ ಸೌಂಡ್​ ಮಾಡಿಲ್ಲ. ಆದ್ರೆ, ಇವತ್ತಿನ ಪಂದ್ಯದಲ್ಲಿ ಪ್ರದರ್ಶನ ನೀಡುವ ಭರವಸೆ ಇದೆ.
ನಂಬರ್​​. 18..! ಇದು ಜಸ್ಟ್​ ನಂಬರ್​ ಅಲ್ಲ. ಕ್ರಿಕೆಟ್​ ಅಭಿಮಾನಿಗಳಿಗೆ ಇದೊಂದು ಎಮೋಷನ್. ಈ ನಂಬರ್​ ಜೊತೆಗಿನ ಫ್ಯಾನ್ಸ್​ ಸಂಬಂಧ, ಸಿಕ್ಕಾಪಟ್ಟೆ ವಿಶೇಷವಾದದ್ದು. ಈ ನಂಬರ್ ನೋಡಿದ್ರೆ, ಕೇಳಿದ್ರೆ ಕ್ರಿಕೆಟ್ ಅಭಿಮಾನಿಗಳ ಕಣ್ಮುಂದೆ ಬರೋದೆ ಕಿಂಗ್ ಕೊಹ್ಲಿ. ನಂಬರ್​ -18 ಜೆರ್ಸಿ ತೊಟ್ಟು ವಿರಾಟ್ ವಿಶ್ವ ಕ್ರಿಕೆಟ್ ಲೋಕವನ್ನಾಳಿದ್ದಾರೆ. ಆಳ್ತಿದ್ದಾರೆ. ವಿಶ್ವ ಕ್ರಿಕೆಟ್ ಲೋಕದ ಕಿಂಗ್ ಆಗಿ ಮರೆದಾಡಿದ್ದಾರೆ,
ಕೊಹ್ಲಿಯ ಜೊತೆಗೆ ನಂಬರ್​​ 18 ಜೆರ್ಸಿ ತೊಟ್ಟು ಸೆನ್ಸೇಷನ್​ ಸೃಷ್ಟಿಸಿರೋ ಮತ್ತೊಬ್ಬ ಕ್ರಿಕೆಟರ್​ ಅಂದ್ರೆ ಅದು ಸ್ಮೃತಿ ಮಂದಾನ. ಮೆನ್ಸ್​ ಕ್ರಿಕೆಟ್​ನಲ್ಲಿ ಕೊಹ್ಲಿಯ ದರ್ಬಾರ್​ ನಡೆದ್ರೆ, ಮಹಿಳಾ ಕ್ರಿಕೆಟ್​ನಲ್ಲಿ ಮಂದಾನ ದರ್ಬಾರ್​ ನಡೀತಿದೆ. ವಿರಾಟ್​​, ವಿಶ್ವ ಕ್ರಿಕೆಟ್ ಲೋಕದ ಕಿಂಗ್ ಆಗಿದ್ರೆ, ಕ್ರಿಕೆಟ್ ಲೋಕದ ಕ್ವೀನ್ ಈ ಸ್ಮೃತಿ ಮಂದಾನ. ಆದ್ರೆ, ಮಂದಾನ ಈ ವಿಶ್ವಕಪ್​ನಲ್ಲಿ ಅದ್ಯಾಕೋ ಡಲ್​ ಆಗಿದ್ದಾರೆ. ಆದ್ರೆ, ಇವತ್ತಿನ ಆಸಿಸ್​ ಎದುರಿನ ಕದನದಲ್ಲಿ ಅಬ್ಬರಿಸೋದು ಪಕ್ಕಾ.!
ಕಾಂಗರೂಗಳ ಬೇಟೆಗೆ ಕ್ವೀನ್​ ಮಂದಾನ ರೆಡಿ.!
ಆಸ್ಟ್ರೇಲಿಯಾ ವಿರಾಟ್​ ಕೊಹ್ಲಿಯ ಫೇವರಿಟ್​ ಎದುರಾಳಿ. ಆಸಿಸ್​ ವಿರುದ್ಧ ಪಂದ್ಯ ಅಂದ್ರೆ ವಿರಾಟರೂಪ ದರ್ಶನವಾಗ್ತಿತ್ತು. ಸೇಮ್​ ಕೊಹ್ಲಿಯಂತೆ ಮಂದಾನ ಕೂಡ. ಆಸಿಸ್​ ವಿರುದ್ಧದ ಪಂದ್ಯ ಅಂದ್ರೆ ಮಂದಾನ ಅಬ್ಬರ ಪಕ್ಕಾ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್​ ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ.
ಈ ಸರಣಿಯಲ್ಲಿ ಸಾಲಿಡ್​ ಆಟವಾಡಿದ ಸ್ಮೃತಿ ಮಂದಾನ, ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೆ, ಇನ್ನುಳಿದ 2 ಪಂದ್ಯಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಅದರಲ್ಲೂ ಕೊನೆ ಏಕದಿನ ಪಂದ್ಯದಲ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದರು. ಆಸಿಸ್ ಬೌಲರ್​​ಗಳನ್ನು ಚೆಂಡಾಡಿದ್ದ ಸ್ಮೃತಿ, ಜಸ್ಟ್​​ 50 ಎಸೆತಗಳಲ್ಲೇ ಶತಕ ಚಚ್ಚಿದರು.
ಸೆಂಚುರಿ ಇನ್ನಿಂಗ್ಸ್​ನೊಂದಿಗೆ ಕೊಹ್ಲಿ ಹೆಸರಿನಲ್ಲಿದ್ದ ಫಾಸ್ಟೆಸ್ಟ್​ ಶತಕದ ದಾಖಲೆಯನ್ನು ಬ್ರೇಕ್​ ಮಾಡಿದರು. ಒಟ್ಟಾರೆ, ಈ ಸರಣಿಯಲ್ಲಿ ಸ್ಮೃತಿ 100ರ ಬ್ಯಾಟಿಂಗ್ ಅವರೇಜ್​ನಲ್ಲಿ 300 ರನ್​ಗಳಿಸಿದರು.
ಆಸಿಸ್ ಏಕದಿನ ಸರಣಿಯಲ್ಲಿ ಸ್ಮೃತಿ
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ 3 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಸ್ಮೃತಿ ಮಂದಾನ, 300 ರನ್ ಸಿಡಿಸಿದ್ದಾರೆ. 2 ಶತಕ, 1 ಅರ್ಧ ಶತಕ ಸಿಡಿಸಿದ ಸ್ಮೃತಿ, 138.24ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ರು.
3 ವರ್ಷಗಳಿಂದ ಮಂದಾನ ಕನ್ಸಿಸ್ಟೆಂಟ್​​ ಅಬ್ಬರ.!
ಆಸ್ಟ್ರೇಲಿಯಾ ಸರಣಿ ಮಾತ್ರವಲ್ಲ. ಕಳೆದ 3 ವರ್ಷಗಳಿಂದ ಸ್ಮೃತಿ ಬ್ಯಾಟ್​​​​​ ಕನ್ಸಿಸ್ಟೆಂಟ್​ ಆಗಿ ಸೌಂಡ್​ ಮಾಡಿದೆ. ಸರಣಿ ಸರಣಿಗೂ ಶೈನ್ ಆಗಿರುವ ಸ್ಮೃತಿ ಮಂದಾನ, ಶತಕದ ಮೇಲೆ ಶತಕ ಸಿಡಿಸ್ತಿದ್ದಾರೆ. ಮಹಿಳಾ ಕ್ರಿಕೆಟ್ ಲೋಕದ ರನ್ ಮಷಿನ್ ಆಗಿ ದಾಖಲೆಗಳನ್ನು ಬರೆಯುತ್ತಿದ್ದಾರೆ.
2023ರಿಂದ ಏಕದಿನ ಕ್ರಿಕೆಟ್​ನಲ್ಲಿ ಸ್ಮೃತಿ
2023ರಿಂದ 31 ಪಂದ್ಯಗಳನ್ನಾಡಿರುವ ಸ್ಮೃತಿ ಮಂದಾನ, 1731 ರನ್ ಗಳಿಸಿದ್ದಾರೆ. 55.86ರ ಬ್ಯಾಟಿಂಗ್ ಅವರೇಜ್​​ನಲ್ಲಿ ರನ್ ಗಳಿಸಿದ್ದು, 7 ಶತಕ, 8 ಅರ್ಧಶತಕ ಸಿಡಿಸಿದ್ದಾರೆ. ಈ ಅವಧಿಯಲ್ಲಿ ಅತ್ಯಧಿಕ ರನ್ ಕಲೆ ಹಾಕಿರುವ ವಿಶ್ವದ ಒನ್​ ಆ್ಯಂಡ್ ಒನ್ಲಿ ಬ್ಯಾಟರ್ ಸ್ಮೃತಿ.
ಶತಕಗಳ ಸರದಾರೆಯಾಗುವತ್ತ ಸ್ಮೃತಿ ಹೆಜ್ಜೆ..!
ಮಹಿಳಾ ಕ್ರಿಕೆಟ್​ನಲ್ಲಿ ಅರ್ಧಶತಕದ ಮೈಲುಗಲ್ಲು ತಲುಪುವುದೇ ಕಷ್ಟ. ಆದ್ರೆ, ಸ್ಮೃತಿಗೆ ಇದು ನೀರು ಕುಡಿದಷ್ಟು ಸಲೀಸು. ಟಾಪ್​ ರನ್ ಸ್ಕೋರರ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಸ್ಮೃತಿ, ಗರಿಷ್ಠ ಶತಕಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೆರೆಡು ಶತಕ ದಾಖಲಿಸಿದರೆ, ಆಸ್ಟ್ರೇಲಿಯಾದ ಲೆಜೆಂಡರಿ ಬ್ಯಾಟರ್ ಮೆಗ್​ ಲ್ಯಾನಿಂಗ್​ರ 15 ಶತಕಗಳ ದಾಖಲೆ ಬ್ರೇಕ್ ಆಗಲಿದೆ. ಶತಕಗಳ ಸರದಾರೆಯಾಗಿ ಮೆರೆದಾಡಲಿದ್ದಾರೆ.
ಕಳೆದ ಪಂದ್ಯದಲ್ಲಿ ಸೌತ್​ ಆಫ್ರಿಕಾ ಎದುರು ಸೋಲುಂಡಿರೋ ಇಂಡಿಯನ್ಸ್​ ವುಮೆನ್ಸ್​ ಟೀಮ್​ ಇಂದು ಗೆಲುವನ್ನ ಎದುರು ನೋಡ್ತಿದೆ. ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಬೇಕಂದ್ರೆ, ಓಪನರ್​ ಸ್ಮೃತಿ ಮಂದಾನರಿಂದ ಗುಡ್​ ಸ್ಟಾರ್ಟ್​ನ ಅಗತ್ಯತೆಯಿದೆ. ಈ ಹಿಂದಿನ ಸರಣಿಯಲ್ಲಿ ಬೊಂಬಾಟ್​ ಪರ್ಫಾಮೆನ್ಸ್​ ನೀಡಿರೋ ಕ್ವೀನ್​ ಸ್ಮೃತಿ ಇಂದೂ ಸಾಲಿಡ್​ ಇನ್ನಿಂಗ್ಸ್​​ ಕಟ್ಟಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ