/newsfirstlive-kannada/media/media_files/2025/11/22/smrit-mandana-2-2025-11-22-11-32-01.jpg)
/newsfirstlive-kannada/media/media_files/2025/11/22/smrit-mandana-2025-11-22-11-32-31.jpg)
ಸಾಂಗ್ಲಿ ಸುಂದರಿ ಮದುವೆ
ಟೀಮ್ ಇಂಡಿಯಾ ಕ್ವೀನ್ ಆರ್ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ ಮದುವೆ ಯಾವಾಗ? ಅಭಿಮಾನಿಗಳ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಿಯಕರ ಪಲಾಷ್ ಮುಚ್ಚಲ್ ಜೊತೆಗೆ ಹಸೆಮಣೆ ಏರೋಕೆ ಸಾಂಗ್ಲಿ ಸುಂದರಿ ಸಜ್ಜಾಗಿದ್ದಾರೆ. ಸಿಂಗಲ್ ಜೀವಕ್ಕೆ ಟಾಟಾ ಹೇಳಿ ಗ್ಲಾಮರ್ ಗರ್ಲ್ ನಾಳೆ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸ್ತಿದ್ದಾರೆ.
/newsfirstlive-kannada/media/media_files/2025/11/22/smrit-mandana-1-2025-11-22-11-33-15.jpg)
ನಾಳೆ ಅದ್ಧೂರಿ ವಿವಾಹ
ಟೀಮ್ ಇಂಡಿಯಾ ಬ್ಯಾಟರ್ ಸ್ಮೃತಿ ಮಂದಾನ ಅಭಿಮಾನಿಗಳಲ್ಲಿದ್ದ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಆನ್ಸರ್ ಸಿಕ್ಕಿದೆ. ಸ್ಮೃತಿ ಮಂದಾನ ಮನೆಯ ಸಂಭ್ರಮ, ಸಡಗರಕ್ಕೆಲ್ಲಾ ಕಾರಣ ಕ್ವೀನ್ ವಿವಾಹ. ಸಾಂಗ್ಲಿ ಸುಂದರಿ ಸ್ಮೃತಿ ಮಂದಾನ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ನಾಳೆ ನಡೆಯೋ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬಹುಕಾಲದ ಗೆಳೆಯ, ಪ್ರಿಯಕರ ಪಲಾಶ್ ಮುಚ್ಚಲ್ನ ಸ್ಮೃತಿ ವರಿಸಲಿದ್ದಾರೆ.
/newsfirstlive-kannada/media/media_files/2025/11/22/smrit-mandana-3-2025-11-22-11-33-45.jpg)
ಹಳದಿ ಸೆರಮನಿ ಅದ್ಧೂರಿ
ವಿವಾಹಕ್ಕೂ ಮುನ್ನ ಹಲ್ದಿ ಸೆರಮನಿ ಅದ್ಧೂರಿಯಾಗಿ ನಡೆದಿದೆ. ಕೆಲವು ಆಟಗಾರ್ತಿಯರು ಹಾಗೂ ಕುಟುಂಬಸ್ಥರು, ಆಪ್ತರು ಸಂಭ್ರಮದಿಂದ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಂದಾನ, ಪಲಾಶ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರೇ ಸೆಂಟರ್ ಆಫ್ ಅಟ್ರಾಕ್ಷನ್! ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ಶೆಫಾಲಿ ವರ್ಮಾ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ.
/newsfirstlive-kannada/media/media_files/2025/11/22/smrit-mandana-7-2025-11-22-11-34-17.jpg)
ಮಂದಾನಗೆ ಪಲಾಶ್ ಸರ್ಪ್ರೈಸ್!
ವಿವಾಹಕ್ಕೂ ಮುನ್ನ ಪ್ರೇಯಸಿ ಸ್ಮೃತಿ ಮಂದಾನಗೆ ಪಲಾಶ್ ಮುಚ್ಚಲ್ ಸರ್ಪ್ರೈಸ್ ಪ್ರಪೋಸ್ ಮಾಡಿದ್ದಾರೆ. ಮಂದಾನಾ ಕಣ್ಣಿಗೆ ಬಟ್ಟೆ ಕಟ್ಟಿ ನೆಚ್ಚಿನ ಕ್ರೀಡಾಂಗಣ ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂಗೆ ಕರೆ ತಂದು ಪಲಾಶ್ ಮುಚ್ಚಲ್ ಪ್ರಪೋಸ್ ಮಾಡಿದ್ದಾರೆ. ಮೈದಾನದ ಮಧ್ಯೆ ಮಂಡಿಯೂರಿ ರಿಂಗ್ ನೀಡಿ ಪ್ರಪೋಸ್ ಮಾಡಿದ್ದಾರೆ. ಸರ್ಪ್ರೈಸ್ ಪ್ರಪೋಸ್ಗೆ ಮಂದಾನ ಭಾವುಕರಾಗಿದ್ದಾರೆ.
/newsfirstlive-kannada/media/media_files/2025/11/22/smrit-mandana-6-2025-11-22-11-34-39.jpg)
ಶ್ರೇಯಾಂಕಾ ಡ್ಯಾನ್ಸ್
ಸ್ಮೃತಿ ಮಂದಾನ ವಿವಾಹವನ್ನ ಸಂಭ್ರಮದಿಂದ ಸೆಲಬ್ರೇಟ್ ಮಾಡಲು ಆಪ್ತ ಆಟಗಾರ್ತಿಯರು ಸಾಂಗ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮಂದಾನ ವಿವಾಹದ ಗುಟ್ಟನ್ನ ರಿವೀಲ್ ಮಾಡಿದ್ದೇ ಆಟಗಾರ್ತಿಯರೊಂದಿಗೆ. ಆಟಗಾರ್ತಿಯರ ಜೊತೆಗೆ ರೀಲ್ಸ್ ಮಾಡಿರೋ ಮಂದಾನ ವಿವಾಹ ಆಗ್ತಿರೋದನ್ನ ಸಾರ್ವಜನಿಯಕವಾಗಿ ಕನ್ಫರ್ಮ್ ಮಾಡಿದ್ದಾರೆ.
/newsfirstlive-kannada/media/media_files/2025/11/22/smrit-mandana-2025-11-22-11-35-21.jpg)
ಮೋದಿ ಪತ್ರ
ಹಸೆಮಣೆ ಏರ್ತಾ ಇರೋ ಸ್ಮೃತಿ ಮಂದಾನಗೆ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಪತ್ರ ಮುಖೇನ ಶುಭ ಕೋರಿದ್ದಾರೆ. ನಿಮ್ಮ ಮುಂದಿನ ಜೀವನ ಚನ್ನಾಗಿರಲಿ. ಇಬ್ಬರಿಗೂ ನನ್ನ ಆಶೀರ್ವಾದಗಳು ಎಂದು ಪತ್ರ ಬರೆದು ಮೋದಿ ಕಳಿಸಿದ್ದಾರೆ.
/newsfirstlive-kannada/media/media_files/2025/11/22/smrit-mandana-8-2025-11-22-11-35-47.jpg)
ಇಂದೋರ್ ಸೊಸೆ
ಬಾಲಿವುಡ್ ಮತ್ತು ಕ್ರಿಕೆಟ್ಗೂ ದೀರ್ಘಕಾಲದ ಸಂಬಂಧವಿದೆ. ಬಾಲಿವುಡ್ ನಟಿಮಣಿಯರನ್ನ ವರಿಸಿದ ಹಲವು ಟೀಮ್ ಇಂಡಿಯಾ ಕ್ರಿಕೆಟಿಗರಿದ್ದಾರೆ. ಸ್ಮೃತಿ ಮಂದಾನ ವಿಚಾರದಲ್ಲೂ ಇದೇ ರಿಪಿಟ್ ಆಗ್ತಿದೆ. ಮಹಾರಾಷ್ಟ್ರದ ಸಾಂಗ್ಲಿಯ ಸುಂದರಿ ಸ್ಮೃತಿ ಮಂದಾನ, ಇಂದೋರ್ ಸೊಸೆಯಾಗಲಿದ್ದಾರೆ. ಸ್ಮೃತಿ ವರಿಸ್ತಾ ಇರೋ ಪಲಾಷ್ ಇಂದೋರ್ನವರು. ಬಾಲಿವುಡ್ನ ಗಾಯಕ ಹಾಗೂ ಮ್ಯೂಸಿಕ್ ಡೈರೆಕ್ಟರ್.
/newsfirstlive-kannada/media/media_files/2025/11/22/smrit-mandana-4-2025-11-22-11-36-13.jpg)
ಲವ್ ಸ್ಟೋರಿ
ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮಂದಾನ ಮದುವೆಯಾಗ್ತಿರೋದು ಸರ್ಪ್ರೈಸ್ ಸುದ್ದಿ ಏನಲ್ಲ. ಕಳೆದ ಕೆಲ ವರ್ಷಗಳಿಂದಲೇ ಇವರಿಬ್ಬರು ಒಟ್ಟಾಗಿ ಓಡಾಡ್ತಿದ್ರು. ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ರು. ಇಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನ ಹಂಚಿಕೊಳ್ತಿದ್ರು. ಪಂದ್ಯಗಳ ವೇಳೆ ಸ್ಟ್ಯಾಂಡ್ನಲ್ಲಿ ಕುಳಿತು ಪಲಾಶ್ ಸ್ಮೃತಿಗೆ ಚಿಯರ್ ಮಾಡಿದ್ದೂ ಇದೆ. ಆಗಲೇ ಇಬ್ಬರೂ ಡೇಟಿಂಗ್ ನಡೆಸ್ತಿರೋ ಗುಸುಗುಸು ಬಾಲಿವುಡ್ ಹಾಗೂ ಕ್ರಿಕೆಟ್ ವಲಯದಲ್ಲಿ ಹರಿದಾಡಿತ್ತು. ಈಗ ಡೇಟಿಂಗ್ ಗಾಸಿಪ್ಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.
/newsfirstlive-kannada/media/media_files/2025/10/15/smriti-mandana-2025-10-15-11-00-29.jpg)
ಗುಟ್ಟು ಬಿಚ್ಚಿಟ್ಟಿದ್ದ ಟ್ಯಾಟೂ
ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು 4-5 ವರ್ಷದ ಹಿಂದೆ. ಸಹೋದರಿ ಪಲಾಕ್ ಮೂಲಕ ಪಲಾಶ್ ಹಾಗೂ ಸ್ಮೃತಿ ಪರಿಚಯವಾಗಿದೆ. ಆ ಬಳಿಕ ಪರಿಚಯದಿಂದ ಗೆಳೆತನ, ಗೆಳೆತನದಿಂದ ಪ್ರೀತಿ ಆಗಿತ್ತು. ಇವರಿಬ್ಬರ ಲವ್ ಗಾಸಿಪ್ ಸುದ್ದಿ ಮೊದಲು ಹಬ್ಬಿದ್ದು ಒಂದು ಟ್ಯಾಟೂನಿಂದ. ಪಲಾಶ್ ಮಚ್ಚಲ್ ಕೈ ಮೇಲೆ SM18 ಅನ್ನೋ ಟ್ಯಾಟೋ ಇದೆ. SM ಅಂದ್ರೆ ಸ್ಮೃತಿ ಮಂದಾನ, 18 ಅಂದ್ರೆ ಮಂದಾನರ ಜೆರ್ಸಿ ನಂಬರ್.
/newsfirstlive-kannada/media/media_files/2025/10/19/smriti_mandhana_1-2025-10-19-11-26-30.jpg)
ಶುಭವಾಗಲಿ
ಒಟ್ಟಿನಲ್ಲಿ, ಐತಿಹಾಸಿಕ ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ ಕ್ವೀನ್ ಫ್ಯಾನ್ಸ್ಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದ್ದಾರೆ. ವೈವಾಹಿಕ ಜೀವನದ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರೋ ಮಂದಾನಗೆ ಶುಭವಾಗಲಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us