/newsfirstlive-kannada/media/media_files/2026/01/02/anil-kumable-2026-01-02-16-11-39.jpg)
ಬೆಂಗಳೂರು: ಕಾಲ್ತುಳಿತ ದುರಂತ ಆಗಿದೆ ಎಂಬ ಕಾರಣಕ್ಕೆ ಪಂದ್ಯಾವಳಿ ನಿಲ್ಲಿಸೋದು ಪರಿಹಾರವಲ್ಲ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು ಮತ್ತೆ ಅಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆಟವಾಡಿಸಬೇಕು. ಪಂದ್ಯಾವಳಿ ನಡೆಯಬೇಕೆಂಬುದು ಎಲ್ಲರ ಬಯಕೆ. ದುರಂತ ಆಗಬಾರದಾಗಿತ್ತು, ಹನ್ನೊಂದು ಮಂದಿ ಮೃತಪಟ್ಟಿದ್ದಾರೆ.
ಈ ನೋವು ಸಾವನ್ನಪ್ಪಿದ ಕುಟುಂಬದವರಿಗೆ ಇದೆ. ವೆಂಕಟೇಶ್ ಪ್ರಸಾದ್ ಅವರ ತಂಡ ಮತ್ತೆ ಪಂದ್ಯಾವಳಿ ನಡೆಸಲು ಏನು ಮಾಡಬೇಕೋ ಅದನ್ನ ಮಾಡುತ್ತದೆ. ಎಲ್ಲಾ ಮಾರ್ಗಸೂಚಿ ಅನ್ವಯ ಕ್ರಿಕೆಟ್ ನಡೆಸಬೇಕು ಅಂತಾ ಸರ್ಕಾರ ಹೇಳಿದೆ. ಇದಕ್ಕೆಲ್ಲಾ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ ಎಂದಿದ್ದಾರೆ.
ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ಆಯೋಜನೆಗೊಂಡಿಲ್ಲ. ಮಾತ್ರವಲ್ಲ, ದೇಸಿಯ ಟೂರ್ನಿಗಳು ಕೂಡ ನಡೆಸಲು ಅನುಮತಿ ನೀಡಲಾಗಿಲ್ಲ. ಮೊನ್ನೆ ಮೊನ್ನೆಯಷ್ಟೇ, ವಿಜಯ್ ಹಜಾರೆ ಟೂರ್ನಿಗೂ ರಾಜ್ಯ ಸರ್ಕಾರ ನೋ ಎಂದಿದೆ. ಸರ್ಕಾರ ರಚಿಸಿರುವ ತಜ್ಞರ ತಂಡ, ಟೂರ್ನಿ ನಡೆಸಲು ಚಿನ್ನಸ್ವಾಮಿ ಸಂಪೂರ್ಣವಾಗಿ ರೆಡಿಯಾಗಿಲ್ಲ ಎಂಬ ವರದಿ ಆಧಾರದ ಮೇಲೆ ಪಂದ್ಯಾವಳಿಗಳಿಗೆ ಅನುಮತಿ ನೀಡಲಾಗಿಲ್ಲ.
ಇದನ್ನೂ ಓದಿ: ಪ್ರಾಜೆಕ್ಟ್ ಚೀತಾಗೆ ಭಾರತದಲ್ಲಿ ಯಶಸ್ಸು! ಭಾರತದಲ್ಲಿ ಹುಟ್ಟಿದ್ದ 19 ಚೀತಾಗಳು, ಒಟ್ಟಾರೆ 30 ಚೀತಾಗಳ ಆವಾಸಸ್ಥಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us