/newsfirstlive-kannada/media/media_files/2025/09/11/abhishek-sharma-and-shubman-gill-2025-09-11-13-25-03.jpg)
/newsfirstlive-kannada/media/media_files/2025/09/11/abhishek-sharma-and-shubman-gill-7-2025-09-11-13-25-27.jpg)
ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಬಲಿಷ್ಠ ಟೀಮ್ ಇಂಡಿಯಾದ ಪರ್ಫಾಮೆನ್ಸ್ ಮಾತ್ರವಲ್ಲ. ಟೀಮ್ ಇಂಡಿಯಾದ ಓಪನರ್ಸ್ ಶುಭ್ಮನ್ ಗಿಲ್ ಅಂಡ್ ಅಭಿಷೇಕ್ ಶರ್ಮಾ ಜೋಡಿ ಕೂಡ ವಿಶ್ವ ಕ್ರಿಕೆಟ್ ಗಮನ ಸೆಳೆದಿದೆ. ಇವರಿಬ್ಬರ ಆಟದ್ದು ಒಂದು ಕತೆಯಾದ್ರೆ ಇವರಿಬ್ಬರ ಗೆಳೆತನ, ಬೆಳೆದು ಬಂದ ರೀತಿಯದ್ದು ಮತ್ತೊಂದು ಕಹಾನಿ.
/newsfirstlive-kannada/media/media_files/2025/09/11/abhishek-sharma-and-shubman-gill-1-2025-09-11-13-26-58.jpg)
ಅಭಿಷೇಕ್ ಕ್ಯಾಪ್ಟನ್, ಗಿಲ್ ವೈಸ್ ಕ್ಯಾಪ್ಟನ್
ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಓಪನರ್ಗಳಾಗಿ ಕಣಕ್ಕಿಳಿದಿದ್ದು ನಿನ್ನೆಯ ಮೊದಲಲ್ಲ. ಇದು ಅಂಡರ್ 14 ದಿನಗಳಿಂದಲೂ ಇಬ್ಬರೂ ಆರಂಭಿಕ ಜೊತೆಗಾರರಾಗಿದ್ದಾರೆ. ಪಂಜಾಬ್ ಪರ ಏಜ್ ಗ್ರೂಪ್ ಕ್ರಿಕೆಟ್ನಿಂದಲೇ ಇಬ್ಬರೂ ಒಟ್ಟಾಗಿ ಆಡ್ತಿದ್ದಾರೆ. ಅಂದು ಪಂಜಾಬ್ ಅಂಡರ್ 14 ತಂಡದ ನಾಯಕನಾಗಿದ್ದ ಅಭಿಷೇಕ್ ಶರ್ಮಾ ಇಂದು ಸಾಮಾನ್ಯ ಆಟಗಾರನಾಗಿದ್ರೆ ಗಿಲ್ ಟೀಮ್ ಇಂಡಿಯಾದಲ್ಲೂ ವೈಸ್ ಕ್ಯಾಪ್ಟನ್ ಆಗೇ ಉಳಿದಿದ್ದಾರೆ ಅಷ್ಟೇ ವ್ಯತ್ಯಾಸ.
/newsfirstlive-kannada/media/media_files/2025/09/11/abhishek-sharma-and-shubman-gill-2-2025-09-11-13-27-44.jpg)
ಅಂಡರ್-14, ಅಂಡರ್ 16, ಅಂಡರ್-19 ಲೆವೆಲ್ನಲ್ಲಿ ಪಂಜಾಬ್ ತಂಡದ ಪರ ಒಟ್ಟಾಗಿ ಆಡಿದ ಇಬ್ಬರೂ ಟೀಮ್ ಇಂಡಿಯಾ ಅಂಡರ್ 19 ತಂಡಕ್ಕೂ ಒಟ್ಟಾಗೆ ಕಾಲಿಟ್ರು. 2018ರಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಗೆಲ್ತಲ್ವಾ? ಆ ವಿಶ್ವಕಪ್ ಗೆಲುವಿನಲ್ಲಿ ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಮಹತ್ವದ ಪಾತ್ರವಹಿಸಿದ್ರು.
/newsfirstlive-kannada/media/media_files/2025/09/11/abhishek-sharma-and-shubman-gill-3-2025-09-11-13-27-59.jpg)
ಪಂದ್ಯಕ್ಕೂ ಮುನ್ನ ಫಿಜ್ಜಾ ತಿಂತಿದ್ದಿದ್ದೇಕೆ?
ಕ್ರಿಕೆಟ್ ಕರಿಯರ್ನ ಆರಂಭದಲ್ಲಿ ಇವರಿಬ್ಬರಲ್ಲೂ ಒಂದು ವಿಚಿತ್ರವಾದ ನಂಬಿಕೆ ಇತ್ತು. ಪ್ರತಿ ಪಂದ್ಯಕ್ಕೂ ಆರಂಭಕ್ಕೂ ಮುನ್ನ ತಪ್ಪದೇ ಇಬ್ಬರೂ ಫಿಜ್ಜಾ ತಿಂತಿದ್ರಂತೆ. ಫಿಜ್ಜಾ ತಿಂದು ಫೀಲ್ಡ್ಗಿಳಿದ್ರೆ ನಾವು ರನ್ಗಳಿಸ್ತೀವಿ ಅನ್ನೋದು ಇಬ್ಬರಿಗಿದ್ದ ನಂಬಿಕೆಯಾಗಿತ್ತಂತೆ.
/newsfirstlive-kannada/media/media_files/2025/09/11/abhishek-sharma-and-shubman-gill-8-2025-09-11-13-28-18.jpg)
ಯುವರಾಜ್ ಸಿಂಗ್ ಗುರು
ಗಿಲ್ ಅಂಡ್ ಶರ್ಮಾ ಇಬ್ಬರೂ ಪಳಗಿದ್ದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಗರಡಿಯಲ್ಲಿ. ಅಂಡರ್19 ದಿನಗಳಿಂದಲೂ ಇಬ್ಬರೂ ಸ್ನೇಹಿತರಿಗೆ ಯುವಿಯೇ ಗುರು. ಯುವರಾಜ್ ಸಿಂಗ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ ಬಳಿಕ ಇವರಿಬ್ಬರ ಆಟವೇ ಬದಲಾಯ್ತು. ಇವರಿಬ್ಬರಿಗೂ ದೊಡ್ಡಮಟ್ಟದ ಸಕ್ಸಸ್ ಸಿಗೋಕೆ ಕಾರಣವಾಗಿದ್ದೇ ಯುವರಾಜ್ ಸಿಂಗ್ ಪಾಠಗಳು ಅಂದ್ರೆ ತಪ್ಪಾಗಲ್ಲ.
/newsfirstlive-kannada/media/media_files/2025/09/11/abhishek-sharma-and-shubman-gill-6-2025-09-11-13-28-40.jpg)
ಶುಭ್ಮನ್ ‘ಶಾಂತ’... ಅಭಿಷೇಕ್ ಶರ್ಮಾ ‘ಸೈತಾನ’
ಚಿಕ್ಕಂದಿನಿಂದಲೇ ಒಟ್ಟಾಗಿ ಬೆಳೆದಿರೋ ಇವರಿಬ್ಬರಲ್ಲಿ ಒಂದು ಡಿಫರೆನ್ಸ್ ಇದೆ. ಇಬ್ಬರ ವ್ಯಕ್ತಿತ್ವ ಸಿಕ್ಕಾಪಟ್ಟೆ ಡಿಫೆರೆಂಟ್. ಆನ್ಫೀಲ್ಡ್ ಆಗಲಿ ಆಫ್ ದ ಫೀಲ್ಡ್ ಇರಲಿ ಗಿಲ್ದ್ದು ಕೂಲ್ ಅಂಡ್ ಕಾಮ್ ನೇಚರ್. ಅಭಿಷೇಕ್ ಶರ್ಮಾ ಫುಲ್ ಅಗ್ರೆಸ್ಸಿವ್. ಆಟದ ವಿಚಾರದಲ್ಲಂತೂ ಇನ್ನೊಂದು ಕೈ ಮೇಲೆ. ಕ್ರಿಸ್ ಕಚ್ಚಿ ನಿಂತು ಅಬ್ಬರಿಸಲು ಶುರುವಿಟ್ಟುಕೊಂಡ್ರೆ ಎದುರಾಳಿ ತಂಡಕ್ಕೆ ತಡೆದುಕೊಳ್ಳೋಕೆ ಆಗಲ್ಲ. ಆರ್ಭಟ ಹಾಗಿರುತ್ತೆ.
/newsfirstlive-kannada/media/media_files/2025/09/11/abhishek-sharma-and-shubman-gill-5-2025-09-11-13-29-00.jpg)
ಗೆಳೆತನಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.. 2024ರ ಜಿಂಬಾಬ್ವೆ ಪ್ರವಾಸದ ವೇಳೆ ಅಭಿಷೇಕ್ ಶರ್ಮಾ ಫಸ್ಟ್ ಟೈಂ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಿದ್ರು. ಆಗ ಟೀಮ್ ಇಂಡಿಯಾ ನಾಯಕನಾಗಿದಿದ್ದು ಶುಭ್ಮನ್ ಗಿಲ್. ಪ್ರವಾಸದ ಫಸ್ಟ್ ಮ್ಯಾಚ್ನಲ್ಲಿ ಡೆಬ್ಯೂ ಮಾಡಿದ ಅಭಿಷೇಕ್ ಶರ್ಮಾ ಡಕೌಟ್ ಆಗಿ ನಿರಾಸೆ ಅನುಭವಿಸಿದ್ರು. ಬಳಿಕ 2ನೇ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ರು. 47 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ತನ್ನ ಆಯ್ಕೆಯನ್ನ ಸಮರ್ಥಿಸಿಕೊಂಡ್ರು. ಅಂದು ಅಭಿಷೇಕ್ ಬಳಸಿದ್ದು ಶುಭ್ಮನ್ ಗಿಲ್ ಬ್ಯಾಟನ್ನ.
/newsfirstlive-kannada/media/media_files/2025/09/11/abhishek-sharma-and-shubman-gill-4-2025-09-11-13-29-22.jpg)
ಪಂಜಾಬ್ ಅಂಡರ್ 14 ತಂಡದಲ್ಲಿದ್ದಾಗ ಟೀಮ್ ಇಂಡಿಯಾ ಪರ ಆಡೋ ಕನಸು ಕಂಡಿದ್ದ ಇಬ್ಬರು ಸ್ನೇಹಿತರು ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಈಗಾಗಲೇ ಶುಭ್ಮನ್ ಗಿಲ್ ಟೀಮ್ ಇಂಡಿಯಾ ನೆಕ್ಸ್ಟ್ ಆಲ್ಫಾರ್ಮೆಟ್ ಕ್ಯಾಪ್ಟನ್ ಆಗೋದು ಕನ್ಫರ್ಮ್ ಆಗಿದೆ. ಅಭಿಷೇಕ್ ಶರ್ಮಾ ಕೂಡ ಆಡಿದ ಕೆಲ ಪಂದ್ಯಗಳಲ್ಲೇ ಹೊಸ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಸ್ನೇಹಿತರ ಜೊತೆಯಾಟ ಟೀಮ್ ಇಂಡಿಯಾ ಪರ ಹೀಗೆ ಮುಂದುವರೆಯಲಿ.