/newsfirstlive-kannada/media/media_files/2025/11/14/washington-sundar-2-2025-11-14-11-53-14.jpg)
/newsfirstlive-kannada/media/media_files/2025/11/14/washington-sundar-2025-11-14-11-53-35.jpg)
ಸುಂದರ ಪ್ರೇಮ ಕಹಾನಿ
ಭಾರತೀಯ ಕ್ರಿಕೆಟ್ನಲ್ಲಿ ಮತ್ತೆ ಪ್ರೀತಿ-ಪ್ರೇಮದ ಸದ್ದು ಜೋರಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರೂಮರ್ಡ್ ಗರ್ಲ್ ಫ್ರೆಂಡ್ ಜೊತೆಗೆ ಪದೇ ಪದೇ ಕಾಣಿಸಿಕೊಳ್ತಿರೋದು ಈಗ ಹಳೆ ವಿಚಾರ. ಇದೀಗ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರದಿ. ಸುಂದರ್ ಪ್ರೇಮ್ ಕಹಾನಿ ಇದೀಗ ಕ್ರಿಕೆಟ್ ಲೋಕದಲ್ಲೀಗ ಹಲ್ಚಲ್ ಎಬ್ಬಿಸಿದೆ. ತಮಿಳುನಾಡಿನ ಆಲ್ರೌಂಡರ್, ಸುಂದರಿಯೊಬ್ಬಳ ಜೊತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಜೋರಾಗಿ ಹಬ್ಬಿದೆ. ಅಂದ್ಹಾಗೆ ಆ ಸುಂದರಿಯ ಹೆಸರು ಸಾಹಿಬಾ ಬಾಲಿ.
/newsfirstlive-kannada/media/media_files/2025/11/14/washington-sundar-4-2025-11-14-11-54-00.jpg)
ಸುಂದರಿ ಯಾರು ಗೊತ್ತಾ.?
ವಾಷಿಂಗ್ಟನ್ ಸುಂದರ್-ಸಾಹಿಬಾ ಬಾಲಿಯ ಡೇಟಿಂಗ್ ಸುದ್ದಿ ಸಖತ್ ಸದ್ದು ಮಾಡ್ತಿದೆ. ಕ್ರಿಕೆಟ್ ಫೀಲ್ಡ್ನಿಂದ ಹೊರಗೆ ಬಂದ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳೋಕೆ ಇಷ್ಟ ಪಡದ ಸುಂದರ್ ಗುಟ್ಟಾಗೇ ಸಾಹಿಬಾ ಬಾಲಿ ಜೊತೆಗೆ ಸುತ್ತಾಟ ನಡೆಸ್ತಿದ್ದಾರಂತೆ. ಸುಂದರ್ ಆಪ್ತ ಮೂಲಗಳಿಂದಲೇ ಈ ಸುದ್ದಿ ಹೊರಬಿದ್ದಿದೆ. ಅಂದ್ಹಾಗೆ ಈ ಸಾಹಿಬಾ ಬಾಲಿ ಬಾಲಿವುಡ್ನ ಆ್ಯಕ್ಟರ್ & ಸ್ಪೋರ್ಟ್ಸ್ ಪ್ರೆಸೆಂಟರ್. ಸದ್ಯ ಐಸಿಸಿ, ಸ್ಟಾರ್ ಸ್ಪೋರ್ಟ್ಸ್ ಹಾಗೂ ಸೋನಿ ಸ್ಪೋರ್ಟ್ಸ್ ಚಾನೆಲ್ಗಳ ಆ್ಯಂಕರ್ ಆಗಿ ಕೆಲಸ ಮಾಡ್ತಿದ್ದಾರೆ. ಐಪಿಎಲ್ನ ಪಂಜಾಬ್ ಕಿಂಗ್ಸ್ ತಂಡದ ಇನ್ಸೈಡರ್ ಶೋನ ಹೋಸ್ಟ್.
/newsfirstlive-kannada/media/media_files/2025/11/14/washington-sundar-8-2025-11-14-11-54-28.jpg)
ಡೇಟಿಂಗ್ ರೂಮರ್ಸ್
ಸಾಹಿಬಾ ಜೊತೆಗೆ ಸುಂದರ್ ಹೆಸ್ರು ಕೇಳಿ ಬರ್ತಿರೋದು ಇದೇ ಮೊದಲೇನಲ್ಲ. ಇದೇ ವರ್ಷ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವೇಳೆ ಇಬ್ಬರ ಹೆಸರು ಸಖತ್ ಸದ್ದು ಮಾಡಿತ್ತು. ಟೂರ್ನಿಯ ವೇಳೆ ಕಾಫಿ ಶಾಪ್ ಒಂದರಲ್ಲಿ ಸುಂದರ್-ಸಾಹಿಬಾ ಜೊತೆಗೆ ಕಾಣಿಸಿಕೊಂಡಿದ್ರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು ಮತ್ತು ಆಗಲೇ ಡೇಟಿಂಗ್ ರೂಮರ್ಸ್ ಬಿರುಗಾಳಿಯಂತೆ ಹಬ್ಬಿತ್ತು.
/newsfirstlive-kannada/media/media_files/2025/11/14/washington-sundar-7-2025-11-14-11-54-56.jpg)
ಟೆಸ್ಟ್ ಸರಣಿಯ ವೇಳೆ ಪರಿಚಯ
ದುಬೈನಲ್ಲಿ ಸುತ್ತಾಟ ನಡೆಸಿದ್ದ ಈ ಜೋಡಿಯ ಪರಿಚಯವಾಗಿದ್ದು ಕಳೆದ ವರ್ಷದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾದಲ್ಲಿ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಸುಂದರ್ ತಂಡದೊಂದಿಗಿದ್ರೆ, ಬ್ರಾಡ್ಕಾಸ್ಟಿಂಗ್ ಟೀಮ್ ಜೊತೆಗೆ ಸಾಹಿಬಾ ಇದ್ರು. ಈ ಪ್ರವಾಸದ ವೇಳೆಯೇ ಇವರಿಬ್ಬರ ನಡುವೆ ಪರಿಚಯವಾಗಿ, ಸ್ನೇಹ ಶುರುವಾಗಿದ್ದು ಎಂಬ ಸುದ್ದಿಯಿದೆ. ಆ ಸ್ನೇಹವೇ ಇದೀಗ ಪ್ರೀತಿಯ ರೂಪ ಪಡೆದುಕೊಂಡಿದೆ ಎನ್ನಲಾಗ್ತಿದೆ.
/newsfirstlive-kannada/media/media_files/2025/11/14/washington-sundar-6-2025-11-14-11-55-24.jpg)
ಬಾಲಿವುಡ್ನಲ್ಲೂ ಸಂಚಲನ
ಸುಂದರ್ ಮನಗೆದ್ದಿರೋ ಸಾಹಿಬಾ ಬಾಲಿವುಡ್ನ ಅಂಗಳದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕಬೀರ್ ಸಿಂಗ್, ಸುಲ್ತಾನ್ ಚಿತ್ರಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ರು. ಲೈಲಾ ಮಜ್ನು, ತಾನಾವ್, ಡಿಯರ್ ಮಾಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಮ್ಯೂಸಿಕ್ ಆಲ್ಬಂಗಳಲ್ಲಿಯೂ ಸಾಹಿಬಾ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/11/14/washington-sundar-5-2025-11-14-11-56-17.jpg)
ಜರ್ನಿ ಸಖತ್ ಇಂಟರೆಸ್ಟಿಂಗ್
ಈ ಸಾಹಿಬಾ ಬಾಲಿಯ ಜರ್ನಿ ಸಖತ್ ಇಂಟರೆಸ್ಟಿಂಗ್ ಆಗಿದೆ. ಈಕೆಗೆ ಆರಂಭದಲ್ಲಿ ಆಸಕ್ತಿ ಇದ್ದದ್ದು ಬ್ಯುಸಿನೆಸ್ ಮೇಲೆ. ಹೀಗಾಗಿ ಡೆಲ್ಲಿ ಯುನಿವರ್ಸಿಟಿಯಲ್ಲಿ ಎಕಾನಾಮಿಕ್ಸ್ ಡಿಗ್ರಿ ಪಡೆ ಸಾಹಿಬಾ, ಡರ್ಹಾಮ್ ಯುನಿವರ್ಸಿಟಿ ಆಫ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಮಾಸ್ಟರ್ಸ್ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ. ಆ ಬಳಿಕ ಜೋಮ್ಯಾಟೋ ಫುಡ್ ಡಿಲೆವರಿ ಆ್ಯಪ್ನಲ್ಲಿ ಬ್ರ್ಯಾಂಡ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ರು.
/newsfirstlive-kannada/media/media_files/2025/11/14/washington-sundar-3-2025-11-14-11-56-41.jpg)
ಜೊಮ್ಯಾಟೋದಲ್ಲಿ ಕೆಲಸ
ಎರಡುವರೆ ವರ್ಷ ಜೊಮ್ಯಾಟೋದಲ್ಲಿ ಕೆಲಸ ಮಾಡಿದ ಸಾಹಿಬಾ ಬಾಲಿಗೆ ಅದೇನಾಯ್ತೋ ಗೊತ್ತಿಲ್ಲ. ಸಡನ್ ಆಗಿ ಆ್ಯಕ್ಟಿಂಗ್ ಮೇಲೆ ಇಂಟರೆಸ್ಟ್ ಬಂದು ಕೆಲಸ ಬಿಟ್ಟು ಬಾಲಿವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ರು. ಬಳಿಕ ಈಗ ಬಾಲಿವುಡ್ನೂ ಬಿಟ್ಟು ಸ್ಪೋರ್ಟ್ಸ್ ಪ್ರೆಸೆಂಟರ್ ಆಗಿ ಸ್ಪೋರ್ಟ್ಸ್ ಚಾನೆಲ್ ಸೇರಿದ್ದಾರೆ. ಸಾಹಿಬಾ ಬಾಲಿ ಮಾತ್ರವಲ್ಲ.. ತೆಲುಗು ನಟಿ ವರ್ಷಿನಿ ಸುಂದರಾಜನ್ ಜೊತೆಗೂ ಸುಂದರ್ ಹೆಸ್ರು ತಳುಕು ಹಾಕಿಕೊಂಡಿತ್ತು. ಕಳೆದ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ನೋಡೋಕೆ ಬಂದಿದ್ದಕ್ಕೆ ಹೀಗೊಂದು ಗಾಸಿಪ್ ಹಬ್ಬಿತ್ತು.
/newsfirstlive-kannada/media/media_files/2025/11/14/washington-sundar-1-2025-11-14-11-57-12.jpg)
ಎಲ್ಲರಿಗೂ ಸರ್ಪ್ರೈಸ್ ಶಾಕ್
ಕ್ರಿಕೆಟರ್ಸ್ ಅಂಡ್ ಸ್ಪೋರ್ಟ್ಸ್ ಪ್ರೆಸೆಂಟರ್ ಲವ್ ಕತೆ ಹೊಸದೇನಲ್ಲ. ಗಪ್ಚುಪ್ ಆಗಿ ಲವ್ ಮಾಡಿ ಹಸೆಮಣೆ ಏರಿದ ಜಸ್ಪ್ರೀತ್ ಬೂಮ್ರಾ - ಸಂಜನಾ ಗಣೇಶನ್ ಎಲ್ಲರಿಗೂ ಸರ್ಪ್ರೈಸ್ ಶಾಕ್ ನೀಡಿದ್ರು. ಆ ಪ್ರೇಮ್ ಕಹಾನಿಯೂ ಬಹುತೇಕ ಹೀಗೆ ಇತ್ತು. ಅದೇ ರೀತಿ ಇದೀಗ ಸುಂದರ್-ಸಾಹಿಬಾ ಪ್ರೇಮಕಾವ್ಯ ಶುರುವಾದಂತಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us