/newsfirstlive-kannada/media/post_attachments/wp-content/uploads/2025/06/SMRITI_MANDHANA.jpg)
ಬೊಂಬಾಟ್​​ ಶತಕ ಸಿಡಿಸಿದ ಪಡಿಕ್ಕಲ್​
/filters:format(webp)/newsfirstlive-kannada/media/post_attachments/wp-content/uploads/2024/02/devdutt_padikkal_1.jpg)
ವಿಜಯ್​ ಹಜಾರೆ ಟೂರ್ನಿಯಲ್ಲಿ ಕನ್ನಡಿಗ ದೇವದತ್​​ ಪಡಿಕ್ಕಲ್​ ಬೊಂಬಾಟ್​ ಶತಕ ಸಿಡಿಸಿದ್ದಾರೆ. ಜಾರ್ಖಂಡ್​ ವಿರುದ್ಧದ ಪಂದ್ಯದಲ್ಲಿ ಬಿಗ್​ ಟಾರ್ಗೆಟ್​ ಚೇಸಿಂಗ್ ವೇಳೆ ಅದ್ಭುತ ಇನ್ನಿಂಗ್ಸ್​ ಕಟ್ಟಿದ ದೇವದತ್​​ ಪಡಿಕ್ಕಲ್​, ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಲಿಸ್ಟ್​ ಎ ಕ್ರಿಕೆಟ್​ನಲ್ಲಿ 10ನೇ ಶತಕ ಪೂರೈಸಿ ಸಂಭ್ರಮಿಸಿದ್ರು. 118 ಎಸೆತಗಳನ್ನ ಎದುರಿಸಿದ ಪಡಿಕ್ಕಲ್, 7 ಸಿಕ್ಸರ್​, 10 ಬೌಂಡರಿ ಸಹಿತ 147 ರನ್​ಗಳಿಸಿದ್ರು.
ದಾಖಲೆಯ ಜಯ ಸಾಧಿಸಿದಿ ಕರ್ನಾಟಕ
ವಿಜಯ್​ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಅಹ್ಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ 413 ರನ್​ಗಳ ಬಿಗ್​ ಟಾರ್ಗೆಟ್​ ಚೇಸ್​ ಮಾಡಿ ದಾಖಲೆ ಬರೆದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಜಾರ್ಖಂಡ್​​ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 412 ರನ್​ಗಳಿಸಿತ್ತು. ಈ ಟಾರ್ಗೆಟ್​ ಬೆನ್ನತ್ತಿದ ಕರ್ನಾಟಕ ದೇವದತ್​ ಪಡಿಕ್ಕಲ್​ ಶತಕದ ಬಲದೊಂದಿಗೆ 47.3 ಓವರ್​​ಗಳಲ್ಲೇ ಗೆಲುವಿನ ದಡ ಸೇರಿತು. 5 ವಿಕೆಟ್​ ಕಳೆದುಕೊಂಡು ಗುರಿ ತಲುಪಿ ಶುಭಾರಂಭ ಮಾಡಿತು.
32 ಎಸೆತಕ್ಕೆ ಶತಕ ಸಿಡಿಸಿ ಸಕಿಬುಲ್​ ಗನಿ
ವಿಜಯ್​ ಹಜಾರೆ ಟೂರ್ನಿಯಲ್ಲಿ ಬಿಹಾರ ತಂಡದ ಬ್ಯಾಟ್ಸ್​ಮನ್​ ಸಕಿಬುಲ್​ ಗನಿ ದಾಖಲೆ ಬರೆದಿದ್ದಾರೆ. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಪೂರೈಸಿ ಅತಿ ವೇಗದ ಸೆಂಚುರಿ ಬಾರಿಸಿದ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಒಟ್ಟು 40 ಎಸೆತಗಳನ್ನ ಎದುರಿಸಿದ ಸಕಿಬುಲ್​ ಗನಿ 10 ಬೌಂಡರಿ, 12 ಸಿಕ್ಸರ್​ ಸಹಿತ ಅಜೇಯ 128 ರನ್​ಗಳಿಸಿದ್ರು.
ನ್ಯೂಜಿಲೆಂಡ್​ ODI ಸರಣಿಯಿಂದ ಬೂಮ್ರಾಗೆ ರೆಸ್ಟ್?
/filters:format(webp)/newsfirstlive-kannada/media/post_attachments/wp-content/uploads/2024/01/Bhumrah-2.jpg)
ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಿಂದ ಟೀಮ್​ ಇಂಡಿಯಾ ವೇಗಿ ಜಸ್​ ಪ್ರಿತ್​ ಬೂಮ್ರಾ ವಿಶ್ರಾಂತಿ ಪಡೆಯೋ ಸಾಧ್ಯತೆ ದಟ್ಟವಾಗಿದೆ. ಫೆಬ್ರವರಿಯಲ್ಲಿ ಆರಂಭವಾಗೋ ಟಿ20 ವಿಶ್ವಕಪ್​ ದೃಷ್ಟಿಯಿಂದ ಬೂಮ್ರಾಗೆ ರೆಸ್ಟ್​ ನೀಡಲು ಟೀಮ್​ ಮ್ಯಾನೇಜ್​ಮೆಂಟ್​ ಚಿಂತಿಸಿದೆ. ಇಂಜುರಿ ಮ್ಯಾನೇಜ್​​ಮೆಂಟ್​ ಮಾಡಲು ಸತತ ಕ್ರಿಕೆಟ್​​ನಿಂದ ಬೂಮ್ರಾನ ದೂರವಿಡಲು ಸ್ಪೆಷಲ್​ ಪ್ಲಾನ್​ ರೂಪಿಸಲಾಗಿದೆ. ಇದ್ರ ಭಾಗವಾಗಿ ಬೂಮ್ರಾ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ.
ಏಕದಿನ ಸರಣಿಯಿಂದ ವಿಲಿಯಮ್​ಸನ್​ ಔಟ್​
ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್​ ತಂಡ ಪ್ರಕಟವಾಗಿದೆ. ಆದ್ರೆ, ಅಚ್ಚರಿಯ ರೀತಿಯಲ್ಲಿ ಹಿರಿಯ ಆಟಗಾರ ಕೇನ್​ ವಿಲಿಯಮ್​ಸನ್​ ತಂಡದಿಂದ ಹೊರಬಿದ್ದಿದ್ದಾರೆ. ಸೌತ್​ ಆಫ್ರಿಕಾ ಟಿ20 ಲೀಗ್​ನಲ್ಲಿ ಕೇನ್​ ವಿಲಿಯಮ್​ಸನ್​ ಆಡ್ತಿದ್ದು, ಭಾರತದ ಎದುರಿನ ಸರಣಿಯಿಂದ ಹೊರಗುಳಿದಿದ್ದಾರೆ. ಜನವರಿ 11ರಿಂದ ಭಾರತ ನ್ಯೂಜಿಲೆಂಡ್​ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.
2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂದಾನ
/filters:format(webp)/newsfirstlive-kannada/media/media_files/2025/08/13/smriti-mandana-2025-08-13-15-32-34.jpg)
ಐಸಿಸಿ ನೂತನ ಱಂಕಿಂಗ್​ ಪಟ್ಟಿಯಲ್ಲಿ ಟೀಮ್​ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ನಂಬರ್ 1 ಸ್ಥಾನವನ್ನ ಕಳೆದುಕೊಂಡಿದ್ದಾರೆ. ಮಂದಾನ 2ನೇ ಸ್ಥಾನಕ್ಕೆ ಕುಸಿದಿದ್ದು. ಸೌತ್​ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಟ್​​ ಅಗ್ರಸ್ಥಾನಕ್ಕೇರಿದ್ದಾರೆ. 820 ರೇಟಿಂಗ್ಸ್​ನೊಂದಿಗೆ ಲಾರಾ ವೋಲ್ವಾರ್ಟ್​​ ನಂಬರ್​ 1 ಸ್ಥಾನಕ್ಕೇರಿದ್ದಾರೆ. 811 ರೇಟಿಂಗ್ಸ್​ ಹೊಂದಿರೋ ಮಂದಾನ 2ನೇ ಸ್ಥಾನದಲ್ಲಿ ಉಳಿದಿದ್ದಾರೆ.
ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಸೆಮಿಕಂಡಕ್ಟರ್ ಘಟಕಕ್ಕೆ 100 ಎಕರೆ ಭೂಮಿ ನೀಡಲು ಸಿದ್ದ ಎಂದ ಎಂ.ಬಿ.ಪಾಟೀಲ್ : HDK ಕನಸು ಈಡೇರುತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us