/newsfirstlive-kannada/media/media_files/2025/09/21/indvspak-2-2025-09-21-22-01-48.jpg)
ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಅಖಾಡಕ್ಕೆ ಇಳಿದಿವೆ. ಟಾಸ್ ಮುಗಿದ ಮೇಲೆ ಸೂರ್ಯಕುಮಾರ್ ಅವರು ಪಾಕಿಸ್ತಾನದ ನಾಯಕನಿಗೆ ಮತ್ತೆ ಹಸ್ತಲಾಘವ ಮಾಡಲೇ ಇಲ್ಲ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಪಾಕಿಸ್ತಾನದ ನಾಯಕನಿಗೆ ದೊಡ್ಡ ಅವಮಾನ ಆದಂತೆ ಆಗುತ್ತಿದೆ ಎನ್ನಲಾಗುತ್ತಿದೆ.
ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಏಷ್ಯಾಕಪ್​ನ ಸೂಪರ್-4 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಅವರು ಟಾಸ್ ಗೆದ್ದರು. ಬಳಿಕ ಲೆಜೆಂಡರಿ ಮಾಜಿ ಆಟಗಾರ, ಕಾಮೆಂಟಟರಿ ರವಿಶಾಸ್ತ್ರಿ ಅವರು ಪ್ರತಿಕ್ರಿಯೆಗಾಗಿ ಕರೆದರು. ಈ ವೇಳೆ ರವಿಶಾಸ್ತ್ರಿ ಅವರು ಕೇಳಿದ ಪ್ರಶ್ನೆ ಸೂರ್ಯಕುಮಾರ್ ಅವರು ಉತ್ತರ ಕೊಟ್ಟು ಹೋಗುವಾಗ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಹ್ಯಾಂಡ್ ಶೇಕ್ ಮಾಡಲಿಲ್ಲ.
ಇದನ್ನೂ ಓದಿ:ಪಂದ್ಯದ ಆರಂಭದಲ್ಲೇ ಸೂರ್ಯಗೆ ಗುಡ್ ಲಕ್.. ಪಾಕ್​ ವಿರುದ್ಧ ಭಾರತದ ಪ್ಲೇಯಿಂಗ್- 11 ಹೇಗಿದೆ?
ಸೂರ್ಯಕುಮಾರ್ ಅವರು ನಾಯಕ ಸಲ್ಮಾನ್ ಅಲಿ ಆಘಾ ಜೊತೆ ಹ್ಯಾಂಡ್​ಶೇಕ್ ಮಾಡದೇ ಹೋಗುತ್ತಿರುವ ವಿಡಿಯೋ ಹಾಗೂ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ. ಇದೇ ಏಷ್ಯಾಕಪ್​ನ ಈ ಮೊದಲಿನ ಪಂದ್ಯದಲ್ಲೂ ಸೂರ್ಯಕುಮಾರ್ ಹಾಗೂ ತಂಡದ ಆಟಗಾರರು ಹ್ಯಾಂಡ್​ ಶೇಕ್ ಮಾಡಿರಲಿಲ್ಲ. ಅದರಂತೆ ಈ ಬಾರಿಯೂ ಟಾಸ್ ವೇಳೆ ಎರಡು ತಂಡದವರು ಹಸ್ತಲಾಘವ ಮಾಡಿಲ್ಲ.
ಹ್ಯಾಂಡ್​ಶೇಕ್ ಯಾಕೆ ಮಾಡುತ್ತಿಲ್ಲ
ಪಾಕಿಸ್ತಾನದ ಉಗ್ರಗಾಮಿಗಳು ಜುಲೈ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ 26 ಜನರ ಜೀವ ತೆಗೆದಿದ್ದರು. ಪ್ರವಾಸಕ್ಕೆ ಎಂದು ಹೋಗಿದ್ದ ಜನರ ಧರ್ಮ ಕೇಳಿ ಅವರನ್ನು ಮುಗಿಸಿದ್ದರು. ಇದಾದ ಮೇಲೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಒಂದು ರೀತಿಯಲ್ಲಿ ಯುದ್ಧದ ಹಂತಕ್ಕೆ ಹೋಗಿತ್ತು ಎನ್ನಬಹುದು. ಪಾಕ್ ಮಾಡಿರುವ ಹೇಡಿತನದ ಕೆಲಸಕ್ಕೆ ಪ್ರತೀಕಾರವಾಗಿ ಟೀಮ್ ಇಂಡಿಯಾ ಹೀಗೆ ಮಾಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ