/newsfirstlive-kannada/media/media_files/2025/09/14/suryakumar_pak-2025-09-14-23-41-01.jpg)
ಏಷ್ಯಾ ಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಇದರ ನಡುವೆ ಪಹಲ್ಗಾಮ್ ದಾಳಿಯ ಪ್ರತೀಕಾರ ಎನ್ನುವಂತೆ ಟೀಮ್ ಇಂಡಿಯಾ ಆಟಗಾರರು, ಪಾಕಿಸ್ತಾನದ ಪ್ಲೇಯರ್ಗಳ ಜೊತೆ ಹ್ಯಾಂಡ್ ಶೇಕ್ ಮಾಡಲಿಲ್ಲ.
ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಪಂದ್ಯದಲ್ಲಿ ಟಾಸ್ ಹಾಕಿದ ಮೇಲೆ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಹ್ಯಾಂಡ್ ಶೇಕ್ ಮಾಡಬೇಕಿತ್ತು. ಆದರೆ ಸೂರ್ಯಕುಮಾರ್ ಅವರು ಪರಸ್ಪರ ಹಸ್ತಲಾಘವ ಮಾಡಲು ನಿರಾಕರಣೆ ಮಾಡಿದರು. ರಾಜಕೀಯ ಉದ್ವಿಗ್ನತೆ ಮತ್ತು ಪಂದ್ಯವನ್ನು ಬಹಿಷ್ಕರಿಸಬೇಕೆಂಬ ಕರೆಗಳ ನಡುವೆ, ಇಬ್ಬರು ನಾಯಕರು ಹಣಾಹಣಿಯಲ್ಲಿ ಹ್ಯಾಂಡ್ ಶೇಕ್ ಮಾಡಲಿಲ್ಲ.
ಕೊನೆಯಲ್ಲಿ ಪಂದ್ಯವನ್ನು ಗೆಲ್ಲಿಸಿದ ಸೂರ್ಯಕುಮಾರ್ ಅವರು ಪಾಕ್ ಆಟಗಾರರಿಗೆ ಥ್ಯಾಂಕ್ಸ್ ಕೊಡಲಿಲ್ಲ. ಕೇವಲ ಶಿವಂ ದುಬೆ ಜೊತೆ ಮಾತ್ರ ಹ್ಯಾಂಡ್ ಶೇಕ್ ಮಾಡುತ್ತ ಡ್ರೆಸಿಂಗ್ ರೂಮ್ನತ್ತ ಆಗಮಿಸಿದರು. ಹಾಗೇ ಕೊನೆಯಲ್ಲಿ ಸೂರ್ಯಕುಮಾರ್ ಅವರು ಮಾತನಾಡುವಾಗ ಈ ಗೆಲುವು, ಪಹಲ್ಗಾಮ್ನಲ್ಲಿ ಮಡಿದವರಿಗೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
2025ರ ಏಪ್ರಿಲ್ನಲ್ಲಿ ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು 26 ಭಾರತೀಯ ನಾಗರಿಕರ ಜೀವ ಬಲಿ ಪಡೆದಿದ್ದರು. ಇದು ಈಗ ಮತ್ತಷ್ಟು ತೀವ್ರಗೊಂಡಂತೆ ಆಗಿದೆ. ಈ ಪಂದ್ಯ ಆರಂಭಕ್ಕೂ ಮೊದಲೇ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಹೀಗಾಗಿ ಟಾಸ್ ಹಾಕುವಾಗ ಹಾಗೂ ಪಂದ್ಯ ಗೆದ್ದ ಮೇಲೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಹ್ಯಾಂಡ್ ಶೇಕ್ ಮಾಡಲಿಲ್ಲ. ಸೂರ್ಯಕುಮಾರ್ ಮಾತ್ರವಲ್ಲ, ಬದಲಾಗಿ ಟೀಮ್ ಇಂಡಿಯಾ ಯಾವೊಬ್ಬ ಆಟಗಾರನು ಪಾಕ್ ಆಟಗಾರರ ಜೊತೆ ಹ್ಯಾಂಡ್ಶೇಕ್ ಮಾಡಲಿಲ್ಲ. ಇದರಿಂದ ಪಾಕ್ಗೆ ಮತ್ತೊಮ್ಮೆ ದೊಡ್ಡ ಅವಮಾನ ಆದಂತೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ