Advertisment

ಅವರು ಸುಳ್ಳು ಹೇಳ್ತಿದ್ದಾರೆ: ಪಂದ್ಯಕ್ಕೂ ಮುನ್ನವೇ ಕಿವೀಸ್ ಕ್ಯಾಪ್ಟನ್​ಗೆ ಸೂರ್ಯ ತಿರುಗೇಟು!

ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಹೇಳಿಕೆಯೊಂದಕ್ಕೆ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ, ‘ಅವನು ಸುಳ್ಳು ಹೇಳುತ್ತಿದ್ದಾನೆ’ ಎಂದು ನಗುತ್ತಲೇ ಖಡಕ್ ತಿರುಗೇಟು ನೀಡಿದ್ದಾರೆ.

author-image
Ganesh Kerekuli
suryakumar yadav (2)
Advertisment

ಐಸಿಸಿ ಟಿ20 ವಿಶ್ವಕಪ್ 2026ರ ಬಹುನಿರೀಕ್ಷಿತ ಫೈನಲ್ ಪಂದ್ಯದಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಮಹಾಕದನಕ್ಕೂ ಮುನ್ನ ಉಭಯ ತಂಡಗಳ ನಾಯಕರ ನಡುವೆ ಮೈಂಡ್ ಗೇಮ್ ಹಾಗೂ ವಾಕ್ಸಮರ ಶುರುವಾಗಿದೆ.

Advertisment

ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಹೇಳಿಕೆಯೊಂದಕ್ಕೆ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ, ‘ಅವನು ಸುಳ್ಳು ಹೇಳುತ್ತಿದ್ದಾನೆ’ ಎಂದು ನಗುತ್ತಲೇ ಖಡಕ್ ತಿರುಗೇಟು ನೀಡಿದ್ದಾರೆ.

ಸ್ಯಾಂಟ್ನರ್ ಪ್ಲಾನ್ ಏನಿತ್ತು?

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬರೋಬ್ಬರಿ 253 ರನ್ ಸಿಡಿಸಿ ಅಬ್ಬರಿಸಿತ್ತು. ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ‘ಒಂದು ವೇಳೆ ಫೈನಲ್ ಪಂದ್ಯದ ಪಿಚ್ ಕೂಡ ಬ್ಯಾಟಿಂಗ್‌ಗೆ ಹೆಚ್ಚು ನೆರವಾಗುವಂತಿದ್ದರೆ, ಟೀಮ್ ಇಂಡಿಯಾವನ್ನು 250 ರನ್‌ಗಳ ಬದಲಿಗೆ 220 ರನ್‌ಗಳಿಗೆ ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಇದು ನಮಗೆ ಪಂದ್ಯ ಗೆಲ್ಲಲು ಉತ್ತಮ ಅವಕಾಶ ನೀಡುತ್ತದೆ ಎಂದಿದ್ದರು. 

ಸೂರ್ಯಕುಮಾರ್ ಕೊಟ್ಟ ನಗುವಿನೇಟು!

ಸ್ಯಾಂಟ್ನರ್ ಅವರ ಈ ಪ್ಲಾನ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ನಗುಮುಖದಿಂದಲೇ ಉತ್ತರಿಸಿದ ಸೂರ್ಯ, "ಜೂಟ್ ಬೋಲ್ ರಹಾ ಹೈ. ಅವನು ಸುಳ್ಳು ಹೇಳುತ್ತಿದ್ದಾನೆ. ನಾವು ಮೈದಾನದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತೇವೆ. ಒಂದು ವೇಳೆ ನಾವು 225 ಅಥವಾ 250 ರನ್ ಗಳಿಸಿದರೆ ಅದು ಒಳ್ಳೆಯದೇ ಎಂದು ತಮಾಷೆಯಾಗಿ ಕೌಂಟರ್ ಕೊಟ್ಟಿದ್ದಾರೆ. 

Advertisment

ಇದನ್ನೂ ಓದಿ: ಡಿವೋರ್ಸ್ ವಿವಾದದ ಬಗ್ಗೆ ವಿಜಯ್ ಮೊದಲು ಮಾತು.. ಅಭಿಮಾನಿಗಳಿಗೆ ಉತ್ತರ ಕೊಟ್ಟ ನಟ

ಮುಂದುವರಿದು ಮಾತನಾಡಿದ ಅವರು, ಆದರೆ ಕೆಲವೊಮ್ಮೆ ವಿಕೆಟ್ ಭಿನ್ನವಾಗಿ ವರ್ತಿಸುತ್ತದೆ. ಆಗ ನಾವು ಅದಕ್ಕೆ ತಕ್ಕಂತೆ ಬೇರೆ ರೀತಿಯಲ್ಲೇ ಆಡಬೇಕಾಗುತ್ತದೆ. ನಾವು ಇಷ್ಟೇ ರನ್ ಹೊಡೆಯಬೇಕು ಎಂದು ಡ್ರೆಸ್ಸಿಂಗ್ ರೂಮ್‌ನಿಂದಲೇ ಲೆಕ್ಕಾಚಾರ ಹಾಕಿಕೊಂಡು ಮೈದಾನಕ್ಕೆ ಇಳಿಯುವುದಿಲ್ಲ. ಪಿಚ್ ಏನು ಬೇಡುತ್ತದೆಯೋ ಅದರ ಆಧಾರದ ಮೇಲೆ ನಾವು ಬ್ಯಾಟ್ ಬೀಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ತವರಿನ ಒತ್ತಡದ ಬಗ್ಗೆ ಸ್ಯಾಂಟ್ನರ್ ಮಾತು

ಇದೇ ವೇಳೆ ಮಾತನಾಡಿದ ನ್ಯೂಜಿಲೆಂಡ್ ನಾಯಕ, ಭಾರತವು ತವರಿನಲ್ಲಿ, ಅದರಲ್ಲೂ ಲಕ್ಷಾಂತರ ಅಭಿಮಾನಿಗಳ ಎದುರು ಫೈನಲ್ ಆಡುತ್ತಿರುವುದರಿಂದ ಟೀಮ್ ಇಂಡಿಯಾ ಮೇಲೆ ಭಾರಿ ಒತ್ತಡವಿರುತ್ತದೆ. ಆ ಒತ್ತಡವನ್ನು ನಾವು ಬಳಸಿಕೊಳ್ಳುತ್ತೇವೆ ಮತ್ತು ಭಾರತೀಯ ಪ್ರೇಕ್ಷಕರನ್ನು ಸ್ತಬ್ಧಗೊಳಿಸುವುದು ನಮ್ಮ ಗುರಿ ಎಂದು ಸ್ಯಾಂಟ್ನರ್ ಹೇಳಿದ್ದಾರೆ.

Advertisment

ಒಟ್ಟಾರೆಯಾಗಿ ಫೈನಲ್ ಪಂದ್ಯಕ್ಕೂ ಮುನ್ನವೇ ಉಭಯ ನಾಯಕರ ನಡುವಿನ ಈ ಮೈಂಡ್ ಗೇಮ್, ಪಂದ್ಯದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅಹಮದಾಬಾದ್‌ನಲ್ಲಿ ಟ್ರೋಫಿ ಯಾರ ಮುಡಿಗೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಆ ಸ್ಟಾರ್ ಆಟಗಾರನನ್ನು ಪ್ಲೇಯಿಂಗ್ 11 ನಿಂದ ಕೈಬಿಡಿ! ಗಂಭೀರ್‌ಗೆ ಕೈಫ್ ಖಡಕ್ ಸಲಹೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs New Zealand final India vs NewZealand T20I Surya kumar Yadav
Advertisment
Advertisment
Advertisment