Advertisment

ಟಾಸ್ ಗೆದ್ದ ಕ್ಯಾಪ್ಟನ್​ ಸೂರ್ಯಕುಮಾರ್.. ಪ್ಲೇಯಿಂಗ್​-11, ಯಾವ ಪ್ಲೇಯರ್ಸ್​ಗೆ ಚಾನ್ಸ್​?

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ ಪಂದ್ಯದಲ್ಲಿ ಒಮಾನ್ ವಿರುದ್ಧ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

author-image
Bhimappa
SURYAKUMAR_DUBE (1)
Advertisment

ಏಷ್ಯಾ ಕಪ್​ನ 12ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದುಕೊಂಡು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎದುರಾಳಿ ಒಮಾನ್ ಫೀಲ್ಡಿಂಗ್ ಮಾಡಲಿದೆ.

Advertisment

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ ಪಂದ್ಯದಲ್ಲಿ ಒಮಾನ್ ವಿರುದ್ಧ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹಾಗೂ ಒಮಾನ್ ಇದೇ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿವೆ. ಈಗಾಗಲೇ ಸೂರ್ಯಕುಮಾರ್ ನೇತೃತ್ವದ ತಂಡ ಎರಡು ಟೀಮ್​ಗಳನ್ನು ಸೋಲಿಸಿದೆ. ಒಮಾನ್ ತಂಡ ಆಡಿದ ಎರಡು ತಂಡಗಳಲ್ಲಿ ಸೋಲುಂಡಿದೆ.  

ಭಾರತ ತಂಡ ಸೂರ್ಯಕುಮಾರ್ ನೇತೃತ್ವದಲ್ಲಿ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣಕ್ಕೆ ಇಳಿದಿದ್ದು ಅಭಿಷೇಕ್ ಶರ್ಮಾ, ಶುಭ್​ಮನ್​ ಗಿಲ್ ಮತ್ತೆ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.​ ಆದರೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸ್ಲಾಟ್​ ಬಿಟ್ಟುಕೊಟ್ಟಂತೆ ಆಗಿದೆ.​ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಸೂರ್ಯಕುಮಾರ್ ಕ್ರೀಸ್​ಗೆ ಆಗಮಿಸುವರು. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ​ ಆಲ್​ರೌಂಡರ್​ಗಳಾಗಿ ತಂಡದ ಬಲವಾಗಿದ್ದಾರೆ. 

SURYAKUMAR_OMAN

ಬ್ಯಾಟಿಂಗ್​​ನಲ್ಲಿ ಯಾವುದೇ ಬದಲಾವಣೆಯನ್ನು ನಾಯಕ ಸೂರ್ಯಕುಮಾರ್ ಮಾಡಿಲ್ಲ. ಆದರೆ ಬೌಲಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿಗೆ ತಂಡದಿಂದ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ಯುವ ವೇಗಿಗಳಾದ ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್​ಗೆ ಅವಕಾಶ ನೀಡಲಾಗಿದೆ. ಇನ್ನು ತಂಡದಲ್ಲಿ ಸ್ಪಿನ್ನರ್​ಗಳಾದ ಕುಲ್​ದೀಪ್ ಯಾದವ್ ಮತ್ತೆ ಮ್ಯಾಜಿಕ್ ಮಾಡಬಹುದು. ಅಕ್ಷರ್ ಪಟೇಲ್ ಕಮಾಲ್ ಮಾಡಲಿದ್ದಾರೆ.  

Advertisment

ಟೀಮ್ ಇಂಡಿಯಾ ಪ್ಲೇಯಿಂಗ್​- 11 

ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Surya kumar Yadav IND vs OMAN Asia Cup 2025
Advertisment
Advertisment
Advertisment