/newsfirstlive-kannada/media/media_files/2026/03/01/india-and-west-indies-match-2026-03-01-21-14-22.jpg)
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಟಿ20 ವರ್ಲ್ಡ್ ಕಪ್‌ನ ಸೂಪರ್ 8 ಕೊನೆಯ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದೆ. ವೆಸ್ಟ್ ಇಂಡೀಸ್ ತಂಡವು 20 ಓವರ್ ಗಳಲ್ಲಿ 195 ರನ್ ಗಳಿಸಿದೆ. ಭಾರತಕ್ಕೆ ಗೆಲುವಿಗೆ 196 ರನ್ ಗಳ ಟಾರ್ಗೆಟ್ ನೀಡಿದೆ. ಭಾರತವು ಸೆಮಿ ಫೈನಲ್ ಪ್ರವೇಶಿಸಲು ಈಗ ಬ್ಯಾಟಿಂಗ್ ನಲ್ಲಿ 196 ರನ್ ಗಳಿಸಲೇಬೇಕಾಗಿದೆ. ಈ ಪಂದ್ಯವೇ ಅಕ್ಷರಶಃ ಕ್ವಾರ್ಟರ್ ಫೈನಲ್ ನಂತೆ ಆಗಿದೆ. ಈ ಪಂದ್ಯದಲ್ಲಿ ಗೆದ್ದ ಟೀಮ್ ಸೆಮಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡ ಮನೆಗೆ ಹೋಗೋದು ಗ್ಯಾರಂಟಿಯಾಗಿದೆ.
ಕೊನೆಯ ಹಂತದಲ್ಲಿ ನಡೆದ ಬಿರುಬೀಸಿನ ಬ್ಯಾಟಿಂಗ್ ಪಂದ್ಯದ ದಿಕ್ಕು ಅನ್ನೇ ಬದಲಾಯಿಸಿದೆ. ಮಧ್ಯಮ ಹಂತದಲ್ಲಿ ಮೂರು ತ್ವರಿತ ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತ ಮತ್ತೆ ಪಂದ್ಯವನ್ನು ಆರಂಭಿಸುವಲ್ಲಿ ಯಶಸ್ವಿಯಾದರೂ, ಕೊನೆಯ ಐದು ಓವರ್‌ಗಳು ದುಬಾರಿಯಾಗಿ ಪರಿಣಮಿಸಿದವು. ವೆಸ್ಟ್ ಇಂಡೀಸ್ 15 ಓವರ್‌ಗಳ ನಂತರ 125/4 ಸ್ಕೋರ್ ಮಾಡಿತ್ತು, ಆದರೆ ಜೇಸನ್ ಹೋಲ್ಡರ್ ಮತ್ತು ರೋವ್‌ಮನ್ ಪೊವೆಲ್ ಅವರ ಕೊನೆಯ ಇನ್ನಿಂಗ್ಸ್‌ನ ಪ್ರಗತಿಯು ಡೆತ್ ಓವರ್‌ಗಳಲ್ಲಿ 70 ರನ್‌ಗಳನ್ನು ಗಳಿಸಲು ಕಾರಣವಾಯಿತು. ಈ ಜೋಡಿ ಕೊನೆಯವರೆಗೂ ಅಜೇಯರಾಗಿ ಉಳಿದು 5 ನೇ ವಿಕೆಟ್‌ಗೆ ಕೇವಲ 35 ಎಸೆತಗಳಲ್ಲಿ 76 ರನ್‌ಗಳನ್ನು ಸೇರಿಸಿತು.
ಅಂತಿಮವಾಗಿ 20 ಓವರ್ ಗಳಲ್ಲಿ ವೆಸ್ಟ್ ಇಂಡೀಸ್ ತಂಡವು 196 ರನ್ ಗಳಿಸಿದೆ. ಕೊನೆಯ ಓವರ್ ನಲ್ಲಿ ಜಸ್ ಪ್ರೀತ್ ಬುಮ್ರಾ, 15 ರನ್ ನೀಡಿದ್ದರು. 19ನೇ ಓವರ್ ನಲ್ಲಿ ಆರ್ಶ್ ದೀಪ್ ಸಿಂಗ್ ಬೌಲಿಂಗ್ ಮಾಡಿದ್ದು 6 ರನ್ ನೀಡಿ ರನ್ ವೇಗಕ್ಕೆ ಬ್ರೇಕ್ ಹಾಕಿದ್ದರು.
ಟೀಮ್ ಇಂಡಿಯಾಗೆ 16 ಮತ್ತು 17ನೇ ಓವರ್ ಗಳೇ ದುಬಾರಿಯಾದವು. 16ನೇ ಓವರ್ ನಲ್ಲೇ ವೆಸ್ಟ್ ಇಂಡೀಸ್ 26 ರನ್ ಬಾರಿಸಿತು. 17ನೇ ಓವರ್ ನಲ್ಲಿ 14 ರನ್ ಬಾರಿಸುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಯಿತು. 15ನೇ ಓವರ್ ವರೆಗೂ ಪಂದ್ಯದ ಮೇಲೆ ಟೀಮ್ ಇಂಡಿಯಾ ಬೌಲರ್ ಗಳು ನಿಯಂತ್ರಣ ಸಾಧಿಸಿದ್ದರು.
16 ಮತ್ತು 17ನೇ ಓವರ್ ನಲ್ಲಿ 40 ರನ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಬ್ಯಾಟ್ಸಮನ್ ಗಳು ಒಟ್ಟು ಸ್ಕೋರ್ ಅನ್ನು 195 ಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಭಾರತದ ಬ್ಯಾಟ್ಸಮನ್ ಗಳ ಮೇಲೆ ತಂಡವನ್ನು ಸೆಮಿ ಫೈನಲ್ ಗೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us