Advertisment

ಅಮೆರಿಕ ದಾಳಿಗೆ ತತ್ತರಿಸಿದ ಬ್ಯಾಟರ್ಸ್​.. ಸಂಕಷ್ಟದಿಂದ ಟೀಂ ಇಂಡಿಯಾ ಪಾರಾಗಿದ್ದು ಹೇಗೆ..?

ವಾಂಖೆಡೆಯಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಪರದಾಟ ನಡೆಸಿದ್ರು. ಯುಎಸ್ ವೇಗಿ ಶಾಡ್ಲಿ ವ್ಯಾನ್ ಸ್ಚಾಕ್‌ವಿಕ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್ ನಡೆಸಿತು. ಮತ್ತೊಂದೆಡೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರು.

author-image
Ganesh Kerekuli
suryakumar yadav (1)
Advertisment
  • 49 ಎಸೆತಗಳಲ್ಲಿ ಅಜೇಯ 84 ರನ್​ ಸಿಡಿಸಿದ ಸ್ಕೈ
  • ಟೀಮ್ ಇಂಡಿಯಾಕ್ಕೆ ಕೈಕೊಟ್ಟ ಪವರ್ ಹಿಟ್ಟರ್ಸ್
  • ಇಶಾನ್ ಕಿಶನ್ 20 ರನ್, ತಿಲಕ್ ವರ್ಮಾ 25 ರನ್

ವಾಂಖೆಡೆಯಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಪರದಾಟ ನಡೆಸಿದ್ರು. ಯುಎಸ್ ವೇಗಿ ಶಾಡ್ಲಿ ವ್ಯಾನ್ ಸ್ಚಾಕ್‌ವಿಕ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್ ನಡೆಸಿತು. ಮತ್ತೊಂದೆಡೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರು. ಸಂಕಷ್ಟದಲ್ಲಿದ್ದ ತಂಡದ ಕೈಹಿಡಿದ್ರು. ಹಿನ್ನಡೆ ಅಣುಭವಿಸಿದ್ದ ಟೀಮ್ ಇಂಡಿಯಾ ಪಾರಾಗಿದ್ದೇಗೆ?

Advertisment

T20 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ, ಟೀಮ್ ಇಂಡಿಯಾ ಆಘಾತಕ್ಕೆ ಒಳಗಾಯ್ತು. ಯುಎಸ್​​ಎ ವಿರುದ್ಧ ಟೀಮ್ ಇಂಡಿಯಾ ಪವರ್ ಹಿಟ್ಟರ್ಸ್​, ಪವರ್​ಲೆಸ್ ಆದ್ರು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, 2ನೇ ಓವರ್​ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ: ಉದ್ಯಮಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಣ, ಆಸ್ತಿ ಪಡೆದಿದ್ದ ಲೇಡಿ ಡಿವೈಎಸ್ಪಿ ಕಲ್ಪನಾ ವರ್ಮಾ ಸಸ್ಪೆಂಡ್‌

2 ಸಿಕ್ಸರ್​​​​​​​ಗಳ ನೆರವಿನಿಂದ 20 ರನ್​ಗಳಿಸಿದ್ದ ಇಶಾನ್ ಕಿಶನ್, ಮಿಡ್ ಆಫ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ರು. ತಿಲಕ್ ವರ್ಮಾ 16 ಎಸೆತಗಳಲ್ಲಿ 25 ರನ್​ ಸಿಡಿಸಿದ್ರು. ಬಿಗ್ ಹಿಟ್ಟಿಂಗ್ ಮೊರೆಹೋದ ತಿಲಕ್,  ಮಿಡ್ ವಿಕೆಟ್​ನಲ್ಲಿ ಯುಎಸ್ ನಾಯಕ ಮೊನಕ್ ಪಟೇಲ್​​ ಕೈಗೆ ಕ್ಯಾಚ್ ನೀಡಿದ್ರು. ಶಿವಂ ದುಬೆ, ರಿಂಕು ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಸಿಂಗಲ್ ಡಿಜಿಟ್ ರನ್​​ ಸ್ಕೋರ್ ಮಾಡಿ ಪೆವಿಲಿಯನ್ ಸೇರಿಕೊಂಡ್ರು.

Advertisment

ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸ್ತಿದ್ದ ಅಕ್ಷರ್ ಪಟೇಲ್ ಸಹ, 14 ರನ್​ಗಳಿಸಿ ಹೋರಾಟ ಮುಗಿಸಿದ್ರು. ಒಂದೆಡೆ ವಿಕೆಟ್ ಪತನಗೊಳ್ತಿದ್ರೂ, ನಾಯಕ ಸೂರ್ಯಕುಮಾರ್ ಯಾದವ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಯುಎಸ್ ಬೌಲರ್​ಗಳ ದಾಳಿಗೆ ತಕ್ಕ ಉತ್ತರ ನೀಡಿದ ಸ್ಕೈ, ವಾಂಖೆಡೆಯಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ರು. 

ಬೌಂಡ್ರಿ, ಸಿಕ್ಸರ್​ಗಳ ಸುರಿಮಳೆ ಸುರಿಸಿದ ಸೂರ್ಯ, ಅಮೆರಿಕನ್ನರ ದಾಳಿಯನ್ನ ಚಿಂದಿ ಉಡಾಯಿಸಿದ್ರು. ಏಕಾಂಗಿ ಹೋರಾಟದ ಜೊತೆಗೆ ನಾಯಕನ ಆಟವಾಡಿದ ಸೂರ್ಯ, 49 ಎಸೆತಗಳಲ್ಲಿ ಅಜೇಯ 84 ರನ್​ ಸಿಡಿಸಿದ್ರು. 10 ಬೌಂಡ್ರಿ ಮತ್ತು 4 ಭರ್ಜರಿ ಸಿಕ್ಸರ್​ಗಳು, ಕ್ಯಾಪ್ಟನ್ ಸೂರ್ಯಕುಮಾರ್ ಬ್ಯಾಟಿಂಗ್​ನಿಂದ ದಾಖಲಾಯ್ತು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್​ಗಳಿಸಿತು. ಯುಎಸ್ ಪರ ವೇಗಿ ಶಾಡ್ಲಿ ವ್ಯಾನ್ ಸ್ಚಾಕ್‌ವಿಕ್ 4 ವಿಕೆಟ್ ಪಡೆದು ಮಿಂಚಿದ್ರು.

ಇದನ್ನೂ ಓದಿ: Rashibhavishya: ಹಣದ ವಿಚಾರದಲ್ಲಿ ಕಷ್ಟ, ಮೋಸ ಹೋಗ್ತೀರಿ -ಈ ರಾಶಿಯವರು ಎಚ್ಚರದಿಂದ ಇರಿ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Suryakumar Yadav profile india vs usa
Advertisment
Advertisment
Advertisment