/newsfirstlive-kannada/media/media_files/2026/02/20/slvszm-2026-02-20-14-29-33.jpg)
T20 ವಿಶ್ವಕಪ್​ ಟೂರ್ನಿಯಲ್ಲಿ ಜಿಂಬಾಬ್ವೆ ತಂಡದ ಆರ್ಭಟಕ್ಕೆ ಶ್ರೀಲಂಕಾ ಸ್ಟನ್ ಆಗಿದೆ. ಲೀಗ್ ಸ್ಟೇಜ್​ನ ಕೊನೆಯ ಮ್ಯಾಚ್​ನಲ್ಲಿ ತವರಿನಲ್ಲೇ ಮುಖಭಂಗವಾಗಿದೆ. ಆಸ್ಟ್ರೇಲಿಯಾನ ಉಡೀಸ್​ ಮಾಡಿದ ಬಳಿಕ ಲಂಕಾ ದಹನ ಮಾಡಿದ ಜಿಂಬಾಬ್ವೆ ಸೂಪರ್​​ 8 ಹಂತಕ್ಕೆ ಕಾನ್ಫಿಡೆಂಟ್​ ಎಂಟ್ರಿ ಕೊಟ್ಟಿದೆ. ಕೊಲಂಬೋದಲ್ಲಿ ನಡೆದ ಲಂಕಾ-ಜಿಂಬಾಬ್ವೆ ಕದನ ಹೇಗಿತ್ತು?
ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಕ್ಯಾಪ್ಟನ್ ದಸುನ್ ಶನಕ ಮೊದಲು ಬ್ಯಾಟಿಂಗ್​ ಆಯ್ದುಕೊಂಡ್ರು. ನಿರೀಕ್ಷೆಯಂತೆ ಫಾತುಮ್ ನಿಸ್ಸಕಾ, ಕುಸಾಲ್​ ಪೆರೆರಾ ಸಾಲಿಡ್​ ಸ್ಟಾರ್ಟ್​ ನೀಡಿದ್ರು. 5ನೇ ಓವರ್​​ನಲ್ಲಿ ದಾಳಿಗಿಳಿದ ಬ್ಲೆಸಿಂಗ್ ಮುಝರಬಾನಿ ಜಿಂಬಾಬ್ವೆಗೆ ಮೊದಲ ಬ್ರೇಕ್ ಥ್ರೂ ನೀಡಿದ್ರು. 22 ರನ್​ಗಳಿಗೆ ಕುಸಾಲ್​ ಪೆರೆರಾ ಔಟ್​ ಆದ್ರು.
ಇದನ್ನೂ ಓದಿ:ಪ್ಯಾನ್ ನಂಬರ್ ಇಲ್ಲದೇ 10 ಲಕ್ಷ ರೂ. ಕ್ಯಾಶ್ ಠೇವಣಿ, ವಿತ್ ಡ್ರಾಗೆ ಅವಕಾಶ- ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ
ಬಳಿಕ ಬ್ಯಾಟಿಂಗ್​ಗೆ ಬಂದ ಕುಸಾಲ್ ಮೆಂಡಿಸ್​ 14 ರನ್​ಗಳಿಗೆ ಸುಸ್ತಾದ್ರು. ಪಾತುಮ್ ನಿಸ್ಸಾಂಕ ಮತ್ತೊಂದು ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. 8 ಬೌಂಡರಿ ಬಾರಿಸಿದ ನಿಸ್ಸಾಂಕ ಹಾಫ್​ ಸೆಂಚುರಿ ಸಿಡಿಸಿದ್ರು. 41 ಎಸೆತಗಳಲ್ಲಿ 62 ರನ್​ಗಳಿಸಿದ್ರು.
62 ರನ್​ಗಳಿಸಿ ನಿಸ್ಸಾಂಕ ಔಟಾದ ಬಳಿಕ ಪೆವಿಲಿಯನ್ ಪರೇಡ್​ ನಡೀತು. ಕಮಿಂದು ಮೆಂಡೀಸ್​, ದಶುನ್ ಶನಕ ಸಿಂಗಲ್ ಡಿಜಿಟ್​ ಸ್ಕೋರ್​ಗೆ ಸುಸ್ತಾದ್ರು. ಉತ್ತಮ ಆಟವಾಡಿದ ಪವನ್ ರತ್ನನಾಯಕೆ 44 ರನ್​ಗಳ ಕಾಣಿಕೆ ನೀಡಿದ್ರು. ದುಶನ್ ಹೇಮಂತಾ ಡಕೌಟ್​ ಆದ್ರೆ, ದುನೀತ್​ ವೆಲ್ಲಲಗೆ 15 ರನ್​ಗಳೊಂದಿಗೆ ಅಜೇಯರಾಗುಳಿದ್ರು.
20 ಓವರ್​ಗಳ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡ ಶ್ರೀಲಂಕಾ 178 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್​ ಕಲೆ ಹಾಕಿತು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಝರಬಾನಿ, ಗ್ರೇಮ್ ಕ್ರೆಮರ್, ಬ್ರಾಡ್ ಇವಾನ್ಸ್ ತಲಾ 2 ವಿಕೆಟ್​ ಕಬಳಿಸಿ ಶೈನ್ ಆದ್ರು. 179 ರನ್​ಗಳ ಟಾರ್ಗೆಟ್​ ಅನ್ನ ಜಿಂಬಾಬ್ವೆ ತಂಡ ಆತ್ಮವಿಶ್ವಾಸದಿಂದ ಬೆನ್ನತ್ತಿತು. ಬ್ರೇನ್​ ಬೆನ್ನೆಟ್​, ಮರುಮಾನಿ ಅದ್ಭುತ ಓಪನಿಂಗ್ ನೀಡಿದ್ರು. ಮೊದಲ ವಿಕೆಟ್​ಗೆ 69 ರನ್​ಗಳು ಹರಿದು ಬಂದ್ವು. 5 ಬೌಂಡರಿ, 1 ಸಿಕ್ಸರ್​ ಸಿಡಿಸಿದ ಮರುಮಾನಿ 34 ರನ್​ಗಳಿಸಿದ್ರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರಯಾನ್ ಬರ್ಲ್​​ ಬಿರುಸಿನ ಆಟವಾಡಿ 12 ಎಸೆತಗಳಲ್ಲೇ 23 ರನ್​ ಸಿಡಿಸಿದ್ರು. ಬಳಿಕ ನಾಯಕ ಕಣಕ್ಕಿಳಿದ ನಾಯಕ ಸಿಖಂದರ್​ ರಾಝಾ ಸಿಡಿಲಬ್ಬರದ ಆಟವಾಡಿದ್ರು. 26 ಎಸೆತ ಎದುರಿಸಿ 4 ಸಿಕ್ಸರ್​, 2 ಬೌಂಡರಿ ಬಾರಿಸಿದ ರಾಝಾ 45 ರನ್​​ಗಳ ಗೇಮ್​ ಚೈಂಜಿಂಗ್​​​ ಇನ್ನಿಂಗ್ಸ್​ ಕಟ್ಟಿದ್ರು. 3ನೇ ವಿಕೆಟ್​ಗೆ ಬೆನ್ನೆಟ್​ ಜೊತೆ 69 ರನ್​ಗಳ ಜೊತೆಯಾಟವಾಡಿದ್ರು.
ಕೊನೆಯ 2 ಓವರ್​ಗಳ ಪಂದ್ಯ ರೋಚಕ ಘಟ್ಟ ತಲುಪಿತ್ತು. 19ನೇ ಓವರ್​ನಲ್ಲಿ ಸಿಕಂದರ್ ರಾಝಾ, ತಾಶಿಂಗಾ ಮುಸೆಕಿವಾ ಬ್ಯಾಕ್​ ಬ್ಯಾಕ್ ಔಟಾದ್ರು. ಕೊನೆಯ ಓವರ್​ನಲ್ಲಿ 8 ರನ್​ ಬೇಕಾದಾಗ ಟೋನಿ ಮುನ್ಯೊಂಗ ಸಿಕ್ಸರ್​​ ಸಿಡಿಸಿದ್ರೆ, ಬೆನ್ನೆಟ್​ 3ನೇ ಎಸೆತವನ್ನ ಬೌಂಡರಿ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 63 ರನ್​ಗಳೊಂದಿಗೆ ಬೆನ್ನೆಟ್​ ಅಜೇಯರಾಗುಳಿದ್ರೆ, ಜಿಂಬಾಬ್ವೆ 6 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.
ಮೊದಲಿಗೆ ಆಸ್ಟ್ರೇಲಿಯಾದ ಗರ್ವಭಂಗ ಮಾಡಿದ ಜಿಂಬಾಬ್ವೆ ತಂಡ ಲೀಗ್ ಸ್ಟೇಜ್​ನ ಕೊನೆಯ ಮ್ಯಾಚ್​ನಲ್ಲಿ ಶ್ರೀಲಂಕಾ ತಂಡವನ್ನ ಅವರದ್ದೇ ನೆಲದಲ್ಲಿ ಮಣಿಸಿದೆ. ಆತ್ಮವಿಶ್ವಾಸದೊಂದಿಗೆ ಸೂಪರ್​-8 ಹಂತಕ್ಕೆ ಕಾಲಿಟ್ಟಿರೋ ಜಿಂಬಾಬ್ವೆ ಉಳಿದ ತಂಡಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us