/newsfirstlive-kannada/media/media_files/2026/02/01/team-india-19-2026-02-01-09-18-37.jpg)
ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ (USA) ವಿರುದ್ಧ 29 ರನ್‌ಗಳ ಜಯ ಸಾಧಿಸಿರುವ ಭಾರತ ತಂಡ, ಶುಭಾರಂಭ ಮಾಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಈಗ ತನ್ನ ಎರಡನೇ ಕಾದಾಟಕ್ಕೆ ಸಜ್ಜಾಗಿದ್ದು, ನಮಿಬಿಯಾ (Namibia) ತಂಡವನ್ನು ಎದುರಿಸಲಿದೆ.
ಭಾರತ vs ನಮಿಬಿಯಾ ಪಂದ್ಯ ಯಾವಾಗ?: ಭಾರತ ಮತ್ತು ನಮಿಬಿಯಾ ನಡುವಿನ ಈ ಹೈವೋಲ್ಟೇಜ್ ಪಂದ್ಯವು ಇದೇ ಫೆಬ್ರವರಿ 12, ಗುರುವಾರ (Thursday, Feb 12) ನಡೆಯಲಿದೆ.
ಪಂದ್ಯ ಎಲ್ಲಿ ನಡೆಯಲಿದೆ?: ಈ ಪಂದ್ಯಕ್ಕೆ ರಾಜಧಾನಿ ದೆಹಲಿಯ ಐತಿಹಾಸಿಕ ಅರುಣ್ ಜೇಟ್ಲಿ ಕ್ರೀಡಾಂಗಣ (Arun Jaitley Stadium) ಆತಿಥ್ಯ ವಹಿಸಲಿದೆ. ತವರಿನ ಬೆಂಬಲದೊಂದಿಗೆ ಭಾರತ ತಂಡ ಮತ್ತೊಂದು ಗೆಲುವು ದಾಖಲಿಸುವ ತವಕದಲ್ಲಿದೆ.
ಪಂದ್ಯದ ಸಮಯವೇನು?: ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು ಸಜೆ 07:00 ಗಂಟೆಗೆ (7:00 PM IST) ಆರಂಭವಾಗಲಿದೆ. ಸಂಜೆ 06:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ನೇರ ಪ್ರಸಾರ ಎಲ್ಲಿ?: ಟಿವಿ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network) ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಮೊಬೈಲ್/ಆನ್‌ಲೈನ್: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney+ Hotstar) ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
ದೆಹಲಿ ಪಿಚ್ ಹೇಗಿದೆ? (Pitch Report)
ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಸ್ವರ್ಗವಾಗಿದೆ. ಇಲ್ಲಿ ಬೌಂಡರಿಗಳು ಚಿಕ್ಕದಾಗಿರುವುದರಿಂದ ರನ್ ಮಳೆ ಹರಿಯುವ ಸಾಧ್ಯತೆ ಹೆಚ್ಚು. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಬಹುದು. ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆಯಿದೆ. ಆದರೂ, ಇಬ್ಬನಿ (Dew Factor) ಬಿದ್ದರೆ ಚೇಸಿಂಗ್ ಮಾಡುವ ತಂಡಕ್ಕೆ ಲಾಭವಾಗಬಹುದು. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಗೆ ಜೆಡಿಎಸ್ ಬಾಗಿಲು ಬಂದ್! ಜಿಟಿಡಿ ಹೆಸರು ಅನ್ನು ಎತ್ತಬೇಡಿ ಎಂದ ಕುಮಾರಸ್ವಾಮಿ
ಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us