/newsfirstlive-kannada/media/media_files/2025/10/04/team-india-announcement-2025-10-04-14-53-21.jpg)
ಆಸ್ಟ್ರೇಲಿಯಾ ವಿರುದ್ದದ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟ
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಏಕದಿನ ಪಂದ್ಯಗಳಿಗೆ ಶುಭಮನ್ ಗಿಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕಮ್ ಬ್ಯಾಕ್ ಮಾಡಿದ್ದಾರೆ. ಆದರೇ, ರೋಹಿತ್ ಶರ್ಮಾಗೆ ತಂಡದ ಕ್ಟಾಪ್ಟನ್ ಆಗುವ ಅವಕಾಶ ಸಿಕ್ಕಿಲ್ಲ. ಶುಭಮನ್ ಗಿಲ್ ನಾಯಕತ್ವದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆಟವಾಡಬೇಕಾಗಿದೆ.
7 ತಿಂಗಳ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಏಕದಿನ ತಂಡದ ಕ್ಯಾಪ್ಟನ್ ಸ್ಥಾನದಿಂದ ರೋಹಿತ್ ಶರ್ಮಾಗೆ ಕೊಕ್ ನೀಡಲಾಗಿದೆ.
ಶುಭ್​ಮನ್​ ಗಿಲ್​ (ನಾಯಕ) ಯಶಸ್ವಿ ಜೈಸ್ವಾಲ್,
ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​(ಉಪನಾಯಕ)
ಕೆ.ಎಲ್​ ರಾಹುಲ್​, ದೃವ್​ ಜುರೇಲ್​, ಅಕ್ಷರ್​ ಪಟೇಲ್​
ನಿತೀಶ್​ ರೆಡ್ಡಿ, ಕುಲ್​​ದೀಪ್​ ಯಾದವ್​, ವಾಷಿಂಗ್ಟನ್​ ಸುಂದರ್​
ಹರ್ಷಿತ್​ ರಾಣಾ, ಪ್ರಸಿದ್ಧ್​ ಕೃಷ್ಣ, ಮೊಹಮ್ಮದ್​ ಸಿರಾಜ್​
ಆರ್ಷ್​​ದೀಪ್​ ಸಿಂಗ್​ಗೆ ತಂಡದಲ್ಲಿ ಸ್ಥಾನ
ಅಕ್ಟೋಬರ್​​ 19ರಿಂದ ಆರಂಭವಾಗಲಿರೋ 3 ಪಂದ್ಯಗಳ ಸರಣಿ
ಅಕ್ಟೋಬರ್​​ 19,23 ಹಾಗೂ 25ರಂದು ನಡೆಯಲಿರೋ ಪಂದ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.