Advertisment

ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​.. ಆಸ್ಟ್ರೇಲಿಯಾ ವಿರುದ್ಧದ ಗಿಲ್​ ಪಡೆಯ ಪ್ಲೇಯಿಂಗ್​- 11 ಹೇಗಿದೆ?

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಏಕದಿನ ಸರಣಿಗಳನ್ನು ಆಡುತ್ತಿತ್ತು. ಆದರೆ ಮುಂದಿನ 2027ರ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ನಾಯಕತ್ವವನ್ನು ಯುವ ಬ್ಯಾಟರ್​ ಶುಭ್​ಮನ್​ ಗಿಲ್​ಗೆ ಬಿಸಿಸಿಐ ವಹಿಸಿದೆ.

author-image
Bhimappa
KOHLI_ROHIT
Advertisment

ಟೀಮ್ ಇಂಡಿಯಾ ಜೊತೆಗಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ಕ್ಯಾಪ್ಟನ್ ಮಿಚೆಲ್ ಮಾರ್ಷ್​ ಅವರು ಫೀಲ್ಡಿಂಗ್​ ಆಯ್ಕೆ ಮಾಡಿದ್ದಾರೆ. ಹೀಗಾಗಿ ಶುಭ್​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ. 

Advertisment

ಆಸ್ಟ್ರೇಲಿಯಾದ ಪರ್ತ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ. ಭಾರತದ ಪರ ಓಪನರ್ ಆಗಿ ಲೆಜೆಂಡರಿ ಬ್ಯಾಟರ್ ರೋಹಿತ್ ಶರ್ಮಾ ಬರಲಿದ್ದು ನಾಯಕ ಗಿಲ್ ಜೊತೆಯಾಗಲಿದ್ದಾರೆ. ವಿರಾಟ್ ಕೊಹ್ಲಿ ಅವರು ಮೂರನೇ ಬ್ಯಾಟರ್ ಆಗಿ ಕ್ರೀಸ್​ ಆಗಮಿಸಲಿದ್ದಾರೆ.  

GILL_MARSHAL

ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲವಾದ ಶಕ್ತಿಯಾಗಿ ಹೊರಹೊಮ್ಮಬೇಕಿದೆ. ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ತಂಡದಲ್ಲಿ ಅಯ್ಯರ್ ಹಾಗೂ ರಾಹುಲ್ ಅವರ ಪಾತ್ರ ಅತ್ಯಂತ ಮುಖ್ಯವಾಗಿದೆ ಎನ್ನಬಹುದು. ಆಲ್​ರೌಂಡರ್​ಗಳಾಗಿ ಮೂವರು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. 

ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಆಲ್​ರೌಂಡರ್​ಗಳಾಗಿ ಕಣದಲ್ಲಿ ಇದ್ದಾರೆ. ನಿತೀಶ್ ಕುಮಾರ್ ಇದೇ ಮೊದಲ ಬಾರಿಗೆ ಏಕದಿನ ತಂಡಕ್ಕೆ ಡೆಬ್ಯು ಮಾಡಿರುವುದು ವಿಶೇಷ. ಬೌಲಿಂಗ್ ಪಡೆ ಮೊಹಮ್ಮದ್ ಸಿರಾಜ್ ನೇತೃತ್ವದಲ್ಲಿ ಶಕ್ತಿಯುತವಾಗಿದೆ. ಇದಕ್ಕೆ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಸಾಥ್ ನೀಡಲಿದ್ದಾರೆ. 

Advertisment

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಏಕದಿನ ಸರಣಿಗಳನ್ನು ಆಡುತ್ತಿತ್ತು. ಆದರೆ ಮುಂದಿನ 2027ರ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ನಾಯಕತ್ವವನ್ನು ಯುವ ಬ್ಯಾಟರ್​ ಶುಭ್​ಮನ್​ ಗಿಲ್​ಗೆ ಬಿಸಿಸಿಐ ವಹಿಸಿದೆ. ಆಸ್ಟ್ರೇಲಿಯಾ ತಂಡವನ್ನು ಇಷ್ಟು ದಿನ ಮುನ್ನಡೆಸಿದ್ದ ನಾಯಕ ಪ್ಯಾಟ್​ ಕಮಿನ್ಸ್​ ಭಾರತದ ಜೊತೆಗಿನ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಕಮಿನ್ಸ್​ ಬದಲಿಗೆ ಕ್ಯಾಪ್ಟನ್ಸಿಯನ್ನು ಮಿಚೆಲ್ ಮಾರ್ಷ್​ಗೆ ವಹಿಸಲಾಗಿದೆ. 

ಟೀಮ್ ಇಂಡಿಯಾದ ಪ್ಲೇಯಿಂಗ್​- 11

ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Rohit Sharma-Virat Kohli Virat Kohli IND vs AUS
Advertisment
Advertisment
Advertisment