ಅಂಡರ್ 19 ವಿಶ್ವಕಪ್ ಗೆಲುವಿನ ಹೊಸ್ತಿಲಲ್ಲಿ ಟೀಮ್ ಇಂಡಿಯಾ : ಇನ್ನೊಂದು ವಿಕೆಟ್ ಪಡೆಯೋದು ಬಾಕಿ

ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಹರಾರೆಯಲ್ಲಿ ನಡೆಯುತ್ತಿದೆ. ಭಾರತ ಮೊದಲು ಬ್ಯಾಟಿಂಗ್ ನಡೆಸಿ 411 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ. ವೈಭವ್ ಸೂರ್ಯವಂಶಿ ಬರೋಬ್ಬರಿ 175 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ತಂಡ ಈಗಾಗಲೇ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

author-image
Chandramohan
Vaibhav Suryavanshi (2)
Advertisment

ಅಂಡರ್ 19 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿ ಇದೆ.  ಹರಾರೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ  ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬರೋಬ್ಬರಿ 411 ರನ್ ಗಳಿಸಿದೆ. ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದು, ಬರೋಬ್ಬರಿ 175 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.  
ಟೀಮ್ ಇಂಡಿಯಾದ ಹಿಮಾಲಯ ಪರ್ವತ ಎತ್ತರದ ರನ್ ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡಿದೆ. 37 ಓವರ್ ಗಳಲ್ಲಿ 280 ರನ್ ಗಳಿಸಿದ್ದು, ಪ್ರಮುಖ 9 ವಿಕೆಟ್ ಗಳನ್ನು ಕಳೆದುಕೊಂಡಿದೆ. ಬಾಲಂಗೋಚಿಗಳಷ್ಟೇ ಬ್ಯಾಟಿಂಗ್ ನಡೆಸಲು ಉಳಿದಿದ್ದಾರೆ. 
ಅಂಡರ್ 19 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಈ ಟೂರ್ನಿಯಲ್ಲಿ  ಫೈನಲ್ ಗೂ  ಮುನ್ನ  ಇದುವರೆಗೂ ಮುಖಾಮುಖಿ ಆಗಿರಲಿಲ್ಲ. ಎರಡು ತಂಡಗಳು ಬೇರೇ ಬೆೇರೆ ಗ್ರೂಪ್ ನಲ್ಲಿದ್ದ ಕಾರಣ ಮುಖಾಮುಖಿ ಆಗಿರಲಿಲ್ಲ. ಈಗ ನೇರವಾಗಿ ಫೈನಲ್ ನಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಿವೆ. ಭಾರತದ ಬಲಾಢ್ಯ ಬ್ಯಾಟಿಂಗ್ ಲೈನ್ ಆಫ್ ಶೇಕ್ ಮಾಡಲು ಇಂಗ್ಲೆಂಡ್‌ಗೆ ಸಾಧ್ಯವಾಗಿಲ್ಲ. ಟೀಮ್ ಇಂಡಿಯಾದ ಪ್ರಬಲ ಬೌಲಿಂಗ್ ನಿಂದ ಇಂಗ್ಲೆಂಡ್ ನಿರಂತರವಾಗಿ ವಿಕೆಟ್ ಕಳೆದುಕೊಂಡಿತ್ತು. 
ಭಾರತದ ಗೆಲುವಿಗೆ ಇನ್ನೊಂದೇ ವಿಕೆಟ್ ಪಡೆಯೋದು ಮಾತ್ರ ಬಾಕಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Under-19 World Cup 2026 Final
Advertisment