Advertisment

ಜಿಂಬಾಬ್ವೆ ವಿರುದ್ಧ 256 ರನ್ ಭಾರಿಸಿದ ಟೀಮ್ ಇಂಡಿಯಾ: ಪಂದ್ಯ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಭಾರತ

ಚೆನ್ನೈನಲ್ಲಿ ನಡೆಯುತ್ತಿರುವ ಟಿ20 ವರ್ಲ್ಡ್ ಕಪ್ ಪಂದ್ಯದಲ್ಲಿ ಇಂದು ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಬರೋಬ್ಬರಿ 256 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ ಇದೆ.

author-image
Chandramohan
india and zimbambe match

ಜಿಂಬಾಬ್ವೆ ವಿರುದ್ಧ 256 ರನ್ ಗಳಿಸಿದ ಟೀಮ್ ಇಂಡಿಯಾ

Advertisment
  • ಜಿಂಬಾಬ್ವೆ ವಿರುದ್ಧ 256 ರನ್ ಗಳಿಸಿದ ಟೀಮ್ ಇಂಡಿಯಾ
  • ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ


ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 256 ರನ್ ಗಳಿಸಿದೆ. ಇದು ಟಿ20 ವರ್ಲ್ಡ್ ಕಪ್ ನಲ್ಲಿ ಎರಡನೇ ಅತಿ ಹೆಚ್ಚಿನ ಸ್ಕೋರ್‌.  ಟೀಮ್ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಇಂದಿನ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮಾರ್ಚ್ 1ರ ಪಂದ್ಯಗಳೆರಡನ್ನೂ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಇದೆ. ಈ ಎರಡೂ ಪಂದ್ಯಗಳನ್ನು ಗೆದ್ದರೇ, ಮಾತ್ರವೇ ಸೆಮಿ ಫೈನಲ್ ಗೆ ಹೋಗಲು ಸಾಧ್ಯ. ಹೀಗಾಗಿ ಇಂದಿನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತವು ಬರೋಬ್ಬರಿ 256 ರನ್ ಬಾರಿಸಿದೆ. ಬ್ಯಾಟ್ಸಮನ್ ಗಳು ಇಂದು ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಿದ ಪರಿಣಾಮ ಟೀಮ್ ಇಂಡಿಯಾವು 256 ರನ್ ಗಳ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಿದೆ. ಈಗ ಟೀಮ್ ಇಂಡಿಯಾ ಬೌಲರ್ ಗಳು ಜಿಂಬಾಬ್ವೆಯನ್ನು 140 ರನ್ ನೊಳಗೆ ಆಲ್ ಔಟ್ ಮಾಡಿದರೇ, ಭಾರತದ ನೆಟ್ ರನ್ ರೇಟ್ ಉತ್ತಮವಾಗಲು ಸಾಧ್ಯವಾಗುತ್ತೆ. ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಮಾರ್ಚ್ 1 ರಂದು ಗೆಲ್ಲಲೇಬೇಕು. 

Advertisment

india and zimbambe match (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 WORLD CUP 2026 INDIA AND ZIMBAMBE T20 MATCH
Advertisment
Advertisment
Advertisment