/newsfirstlive-kannada/media/media_files/2025/09/21/team_india-9-2025-09-21-19-31-27.jpg)
ಆಸ್ಟ್ರೇಲಿಯಾ ಪ್ರವಾಸದ ಟಿ20 ಸರಣಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ.
ಬಹುತೇಕ ಏಷ್ಯಾ ಕಪ್ ನಲ್ಲಿದ್ದ ತಂಡವನ್ನೇ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಉಳಿಸಿಕೊಳ್ಳಲಾಗಿದೆ. ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯಗೆ ಮಾತ್ರ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆಕ್ಟೋಬರ್ 25 ರಿಂದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಐದು ಟಿ20 ಪಂದ್ಯಗಳನ್ನು ಆಡಲಿದೆ.
ಸ್ಪೋಟಕ ಓಪನ್ನರ್ ಅಭಿಷೇಕ್ ಶರ್ಮಾಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಓಪನ್ನರ್ ಗಳು ಔಟಾದಾಗ ಕ್ರೀಸ್‌ಗೆ ಇಳಿದು ತಂಡವನ್ನು ಸೋಲಿನಿಂದ ಪಾರು ಮಾಡಿ ಗೆಲ್ಲಿಸಿದ ತಿಲಕ್ ವರ್ಮಾಗೆ ತಂಡದಲ್ಲಿ ಮತ್ತೆ ಸ್ಥಾನ ಸಿಕ್ಕಿದೆ.
ಟಿ20 ಸರಣಿಗೆ ಆಯ್ಕೆಯಾದ ಆಟಗಾರರ ವಿವರ ಹೀಗಿದೆ
ಸೂರ್ಯಕುಮಾರ್​ ನಾಯಕ, ಶುಭ್​ಮನ್​ ಗಿಲ್​ ಉಪನಾಯಕ
ಅಭಿಷೇಕ್​ ಶರ್ಮಾ, ತಿಲಕ್​ ವರ್ಮಾ, ನಿತೀಶ್​ ರೆಡ್ಡಿ
ಶಿವಂ ದುಬೆ, ಅಕ್ಷರ್​ ಪಟೇಲ್​, ಜಿತೇಶ್​ ಶರ್ಮಾ,
ಸಂಜು ಸ್ಯಾಮ್ಸನ್​, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​
ವರುಣ್​ ಚಕ್ರವರ್ತಿ, ಜಸ್​ಪ್ರಿತ್​ ಬೂಮ್ರಾ, ಆರ್ಷ್​​ದೀಪ್​
ಕುಲ್​​ದೀಪ್​ ಯಾದವ್​, ಹರ್ಷಿತ್​ ರಾಣಾ ತಂಡದಲ್ಲಿ ಸ್ಥಾನ
ಅಕ್ಟೋಬರ್​​ 25ರಿಂದ ಆರಂಭವಾಗೋ 5 ಪಂದ್ಯಗಳ ಸರಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.