ಪಾಕ್ ವಿರುದ್ಧದ ಪಂದ್ಯಕ್ಕೂ ಕೈಕೊಟ್ಟ ಅಭಿಷೇಕ್..? ಹೇಗಿದೆ ಆರೋಗ್ಯ..?

ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಆರೋಗ್ಯದ ಬಗ್ಗೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

author-image
Ganesh Kerekuli
abhishek sharma (9)
Advertisment

ಫೆಬ್ರವರಿ 15 (ಭಾನುವಾರ) ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ (T20 World Cup 2026) ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಆರೋಗ್ಯದ ಬಗ್ಗೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಹೊಟ್ಟೆಯ ಸೋಂಕು, ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್

ಹೊಟ್ಟೆಯ ಸೋಂಕಿನಿಂದ (Stomach Infection) ಬಳಲುತ್ತಿದ್ದ ಅಭಿಷೇಕ್ ಶರ್ಮಾ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರು ಬುಧವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುರುವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾದ ಅಭ್ಯಾಸದ ಅವಧಿಯಲ್ಲಿ ಅಭಿಷೇಕ್ ಭಾಗವಹಿಸಿಲ್ಲ. ಅನಾರೋಗ್ಯದ ಕಾರಣ ಅವರು ತೂಕ ಕಳೆದುಕೊಂಡಿದ್ದು, ಇನ್ನೂ ಅಶಕ್ತರಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲೇ KSRTC ಬಸ್ ಸೀಜ್ ಮಾಡಿಸಿದ ಕೋರ್ಟ್; ಅಷ್ಟಕ್ಕೂ ಆಗಿದ್ದೇನು..?

ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ನಮೀಬಿಯಾ ವಿರುದ್ಧದ ಪಂದ್ಯದ ಟಾಸ್ ವೇಳೆ ಮಾತನಾಡಿದ್ದ ನಾಯಕ ಸೂರ್ಯಕುಮಾರ್ ಯಾದವ್, "ಅಭಿಷೇಕ್ ಶರ್ಮಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಫಿಟ್ನೆಸ್ ಮರಳಿ ಪಡೆಯಲು ಇನ್ನೂ ಒಂದು ಅಥವಾ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು" ಎಂದು ಸುಳಿವು ನೀಡಿದ್ದರು. ಇದು ಪಾಕ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಆಡುವುದು ಅನುಮಾನ ಎಂಬುದನ್ನು ಪುಷ್ಟೀಕರಿಸಿದೆ. ಅಭಿಷೇಕ್ ಗೈರಾದರೆ, ನಮೀಬಿಯಾ ವಿರುದ್ಧದ ಪಂದ್ಯದಂತೆ ಸಂಜು ಸ್ಯಾಮ್ಸನ್ ಅವರು ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ವರುಣ್ ಚಕ್ರವರ್ತಿ ವಿಶ್ವಾಸ

ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಮಾತ್ರ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. "ನಾನು ಅಭಿಷೇಕ್ ಜೊತೆ ಮಾತನಾಡಿದ್ದೇನೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಇಂದು ಸ್ವಲ್ಪ ಅಭ್ಯಾಸವನ್ನೂ ಮಾಡಿದ್ದಾರೆ ಎಂದಿದ್ದಾರೆ. ಅಭಿಷೇಕ್ ಶರ್ಮಾ ಪಾಕ್ ವಿರುದ್ಧ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬುದು ಕೊಲಂಬೊದಲ್ಲಿ ನಡೆಯಲಿರುವ ಟ್ರೈನಿಂಗ್ ಸೆಷನ್ ಮೇಲೆ ನಿರ್ಧಾರವಾಗಲಿದೆ. ಸಾಮಾನ್ಯವಾಗಿ ನೆಟ್ಸ್‌ನಲ್ಲಿ 75 ರಿಂದ 90 ನಿಮಿಷ ಬ್ಯಾಟಿಂಗ್ ಮಾಡುವ ಅಭಿಷೇಕ್, ಅಲ್ಲಿ ದೀರ್ಘಕಾಲ ಬ್ಯಾಟ್ ಬೀಸಿದರೆ ಮಾತ್ರ ಅವರು ಫಿಟ್ ಆಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

ಒಟ್ಟಿನಲ್ಲಿ ಭಾನುವಾರ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ‘ಗೇಮ್ ಚೇಂಜರ್’ ಅಭಿಷೇಕ್ ಕಣಕ್ಕಿಳಿಯುತ್ತಾರಾ ಅಥವಾ ವಿಶ್ರಾಂತಿ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಟ್ರಯಾಂಗಲ್ ಲವ್ ಕೇಸ್.. ನಡುರಸ್ತೆಯಲ್ಲೇ 19 ವರ್ಷದ ಯುವತಿ ಗುಂಡೇಟಿಗೆ ಬಲಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Abhishek Sharma sports
Advertisment