ಅಂಡರ್ 19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ : 6ನೇ ಭಾರಿಗೆ ಅಂಡರ್‌-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ

ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದು ಬೀಗಿದೆ. ಹರಾರೆಯಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ನೂರು ರನ್ ಗಳಿಂದ ಟೀಮ್ ಇಂಡಿಯಾ ಸೋಲಿಸಿದೆ. 6ನೇ ಭಾರಿಗೆ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದಿರುವುದು ವಿಶೇಷ.

author-image
Chandramohan
Vaibhav Suryavanshi (2)

ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ

Advertisment
  • ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ
  • 6ನೇ ಭಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ


ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.   ಹರಾರೆಯಲ್ಲಿ ನಡೆದ  ವಿಶ್ವಕಪ್ ಫೈನಲ್ ಪಂದ್ಯದಲ್ಲಿ  ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬರೋಬ್ಬರಿ 411 ರನ್ ಗಳಿಸಿತ್ತು. . ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದು, ಬರೋಬ್ಬರಿ 175 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.  
ಟೀಮ್ ಇಂಡಿಯಾದ ಹಿಮಾಲಯ ಪರ್ವತ ಎತ್ತರದ ರನ್ ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡಿದೆ. 38 ಓವರ್ ಗಳಲ್ಲಿ 311 ರನ್ ಗಳಿಸಿ ಆಲ್ ಔಟ್ ಆಗಿದೆ.  ಇಂಗ್ಲೆಂಡ್ ಪರ ಫಾಲ್ಕನರ್ ಮಾತ್ರ ಸೆಂಚುರಿ ಗಳಿಸಿದ್ದು, ಉಳಿದ ಯಾವುದೇ ಬ್ಯಾಟ್ಸಮನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. 


ಅಂಡರ್ 19 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಈ ಟೂರ್ನಿಯಲ್ಲಿ  ಫೈನಲ್ ಗೂ  ಮುನ್ನ  ಇದುವರೆಗೂ ಮುಖಾಮುಖಿ ಆಗಿರಲಿಲ್ಲ. ಎರಡು ತಂಡಗಳು ಬೇರೇ ಬೆೇರೆ ಗ್ರೂಪ್ ನಲ್ಲಿದ್ದ ಕಾರಣ ಮುಖಾಮುಖಿ ಆಗಿರಲಿಲ್ಲ. ಈಗ ನೇರವಾಗಿ ಫೈನಲ್ ನಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಿದ್ದವು. ಭಾರತದ ಬಲಾಢ್ಯ ಬ್ಯಾಟಿಂಗ್ ಲೈನ್ ಆಫ್ ಶೇಕ್ ಮಾಡಲು ಇಂಗ್ಲೆಂಡ್‌ಗೆ ಸಾಧ್ಯವಾಗಿಲ್ಲ. ಟೀಮ್ ಇಂಡಿಯಾದ ಪ್ರಬಲ ಬೌಲಿಂಗ್ ನಿಂದ ಇಂಗ್ಲೆಂಡ್ ನಿರಂತರವಾಗಿ ವಿಕೆಟ್ ಕಳೆದುಕೊಂಡಿತ್ತು.  
ಕೊನೆಗೆ 40.2 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 311 ರನ್ ಗಳಿಸಿ , ನೂರು ರನ್ ಗಳಿಂದ ಸೋಲು ಅನುಭವಿಸಿತು. 
ಟೀಮ್ ಇಂಡಿಯಾ 6ನೇ ಭಾರಿಗೆ ಅಂಡರ್-19 ವಿಶ್ವಕಪ್ ಎತ್ತಿ ಹಿಡಿದಿದೆ. ಆಯುಷ್ ಮಹತ್ರೆ ನೇತೃತ್ವದ ಟೀಮ್ ಇಂಡಿಯಾ , ಟೂರ್ನಿಯಲ್ಲಿ ಒಂದೇ ಮ್ಯಾಚ್ ಅನ್ನು ಕೂಡ ಸೋತಿಲ್ಲ. ಅಜೇಯರಾಗಿ ಫೈನಲ್ ನಲ್ಲೂ ಗೆದ್ದು ಅಂಡರ್ -19 ವಿಶ್ವಕಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vaibhav Suryavanshi Under-19 World Cup 2026 Final
Advertisment