Advertisment

ಗೆಲ್ಲಲೇಬೇಕಾದ ಪಂದ್ಯದಲ್ಲೂ ಟೀಮ್ ಇಂಡಿಯಾ ಫೀಲ್ಡಿಂಗ್ ವೈಫಲ್ಯ: ಅಭಿಷೇಕ್ ಶರ್ಮಾರಿಂದ 2 ಕ್ಯಾಚ್ ಡ್ರಾಪ್, ಬ್ಯಾಟಿಂಗ್ ವೈಫಲ್ಯ

ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಕೊನೆಯ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಆದರೇ, ಇಂಥ ಮಹತ್ವದ ಪಂದ್ಯದಲ್ಲೂ ಟೀಮ್ ಇಂಡಿಯಾ ಆಟಗಾರರು ಫೀಲ್ಡಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ರನ್ ಔಟ್ ಅವಕಾಶ ಕೈ ಚೆಲ್ಲಿದ್ದರು. ಕ್ಯಾಚ್ ಡ್ರಾಪ್ ಮಾಡಿದ್ದರು.

author-image
Chandramohan
india fielding failure (1)

ಭಾರತದಿಂದ ಕಳಪೆ ಫೀಲ್ಡಿಂಗ್ ಪ್ರದರ್ಶನ

Advertisment
  • ಭಾರತದಿಂದ ಕಳಪೆ ಫೀಲ್ಡಿಂಗ್ ಪ್ರದರ್ಶನ
  • ಅಭಿಷೇಕ್ ಶರ್ಮಾರಿಂದ 2 ಕ್ಯಾಚ್ ಡ್ರಾಪ್
  • ವರುಣ್ ಚಕ್ರವರ್ತಿಯಿಂದ ರನ್ ಔಟ್ ಅವಕಾಶ ಮಿಸ್
  • 16 ಮತ್ತು 17ನೇ ಓವರ್ ನಲ್ಲಿ ಹೆಚ್ಚು ರನ್ ಕೊಟ್ಟ ಟೀಮ್ ಇಂಡಿಯಾ


ಮಸ್ಟ್​ ವಿನ್​ ಮ್ಯಾಚ್​ನಲ್ಲೂ ಟೀಮ್​ ಇಂಡಿಯಾ ಆಟಗಾರರದ್ದೇ ಮತ್ತದೇ ಯಡವಟ್ಟು. ಕಳಪೆ ಫೀಲ್ಡಿಂಗ್​ ಮಾಡಿ ಇಂಡಿಯನ್​ ಟೀಮ್​ ಕೈ ಸುಟ್ಟುಕೊಳ್ತು. ಫೀಲ್ಡಿಂಗ್​ ವೈಫಲ್ಯದ ನಡುವೆಯೂ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​​ಪ್ರಿತ್​​ ಬೂಮ್ರಾ ಮಾನ ಉಳಿಸಿದ್ರು. ಆದ್ರೂ ಕೊನೆಯಲ್ಲಿ ವೆಸ್ಟ್​ ಇಂಡೀಸ್​​ ಕಾಂಪಿಟೇಟಿವ್ ಸ್ಕೋರ್​ ಕಲೆ ಹಾಕುವಲ್ಲಿ ಯಶಸ್ವಿಯಾಯ್ತು. 
ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ವೆಸ್ಟ್​ ಇಂಡೀಸ್​​ ತಂಡಕ್ಕೆ ಆರಂಭದಲ್ಲೇ ಲಕ್ ಕೈ ಹಿಡಿಯಿತು. ವರುಣ್​ ಚಕ್ರವರ್ತಿ ರನೌಟ್​ ಅವಕಾಶವನ್ನ ಮಿಸ್​ ಮಾಡಿದ್ರು. 5ನೇ ಓವರ್​ನಲ್ಲಿ ಅಭಿಷೇಕ್​ ಶರ್ಮಾ ಸಿಂಪಲ್​ ಕ್ಯಾಚ್​ ಡ್ರಾಪ್ ಮಾಡಿದ್ರು. ರೋಸ್ಟನ್​ ಚೇಸ್​​ಗೆ ಆರಂಭದಲ್ಲೇ 2 ಜೀವದಾನ ಸಿಗ್ತು.
ಅದೃಷ್ಠದ ಅವಕಾಶವನ್ನ ಬಳಸಿಕೊಂಡ ವಿಂಡೀಸ್ ಓಪನರ್ಸ್ ಉತ್ತಮ ಓಪನಿಂಗ್ ನೀಡಿದ್ರು. ಪವರ್​ ಪ್ಲೇನಲ್ಲಿ ಡಿಸೆಂಟ್​ ಆಟವಾಡಿದ ರೋಸ್ಟನ್ ಚೇಸ್​​, ಶಾಯ್​ ಹೋಪ್ ವಿಕೆಟ್​ ನಷ್ಟವಿಲ್ಲದೇ 45 ರನ್​ಗಳಿಸಿದ್ರು. 
9ನೇ ಓವರ್​​ನಲ್ಲಿ ದಾಳಿಗಿಳಿದ ವರುಣ್​ ಚಕ್ರವರ್ತಿ 5ನೇ ಎಸೆತದಲ್ಲೇ ಬ್ರೇಕ್​ಥ್ರೂ ನೀಡಿದ್ರು. ವರುಣ್​ ಚಕ್ರವರ್ತಿ ಮ್ಯಾಜಿಕಲ್​ ಎಸೆತಕ್ಕೆ ಶಾಯ್​ ಹೋಪ್ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದ್ರು. 
ಭಾರತದ ಸ್ಟಾರ್ ಅಟಗಾರ ಅಭಿಷೇಕ್ ಶರ್ಮಾ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 2 ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ ಬ್ಯಾಟಿಂಗ್ ನಲ್ಲೂ ಅಭಿಷೇಕ್ ಶರ್ಮಾ ವೈಫಲ್ಯ ಅನುಭವಿಸಿದ್ದಾರೆ. ಕೇವಲ 10 ರನ್‌ಗೆ ಅಭಿಷೇಕ್ ಶರ್ಮಾ ಔಟ್ ಆಗಿ ಪೆವಿಲಿಯನ್ ಸೇರಿದ್ದರು.  ಅಭಿಷೇಕ್ ಶರ್ಮಾ ಮೇಲೆ ಭಾರಿ ನಿರೀಕ್ಷೆ ಇದ್ದು ಅವೆಲ್ಲಾ ಹುಸಿಯಾಗುತ್ತಿವೆ. ಹೊಡಿ ಬಡಿ ಆಟಕ್ಕೆ ಹೆಸರಾದ ಅಭಿಷೇಕ್ ಶರ್ಮಾ, ಕ್ರೀಸ್‌ಗೆ ಕಚ್ಚಿಕೊಂಡು ವಿರಾಟ್ ಕೊಹ್ಲಿಯಂತೆ ಆಟವಾಡುವುದನ್ನು ರೂಢಿಸಿಕೊಳ್ಳಬೇಕು. 

Advertisment

india fielding failure




12ನೇ ಓವರ್​ನಲ್ಲಿ ವಿಂಡೀಸ್​ಗೆ ಬೂಮ್ರಾ ಡಬಲ್ ಶಾಕ್​ ನೀಡಿದ್ರು. 2 ಸಿಕ್ಸರ್​, 1 ಬೌಂಡರಿ ಬಾರಿಸಿ 12 ಎಸೆತಕ್ಕೆ 27 ರನ್​ಗಳಿಸಿ ಡೆಂಜರಸ್​ ಎನಿಸಿದ್ದ ಶಿಮ್ರಾನ್ ಹೆಟ್ಮೆಯರ್ ವಿಕೆಟ್​ ಎಗರಿಸಿದ್ರು. ಹೆಟ್ಮೆಯರ್​​ ಬೆನ್ನಲ್ಲೇ ರೋಸ್ಟನ್​ ಚೇಸ್​ಗೂ ಪೆವಿಲಿಯನ್​ ದಾರಿ ತೋರಿಸಿದ್ರು. 
ಸಾಲಿಡ್​ ಫಾರ್ಮ್​ನಲ್ಲಿದ್ದ ಶೆಫ್ರೆನ್​ ರುದರ್​​ಫೋರ್ಡ್​ ಆಟ ಟೀಮ್​ ಇಂಡಿಯಾ ಮುಂದೆ ನಡೆಯಲಿಲ್ಲ. 14 ರನ್​ಗಳಿಸಿದ್ದ ವೇಳೆ ರುದರ್​​ಫೋರ್ಡ್​​​​​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ನಲ್ಲಿ ಸಂಜು ಸ್ಯಾಮ್ಸನ್​ಗೆ ಕ್ಯಾಚ್​​ ನೀಡಿ ನಿರ್ಗಮಿಸಿದ್ರು. 
15ನೇ ಓವರ್​ ಬಳಿಕ ವಿಂಡೀಸ್​ ಬ್ಯಾಟರ್ಸ್​ ಗೇರ್​ ಶಿಫ್ಟ್​ ಮಾಡಿದ್ರು. ರೋವ್​ಮನ್ ಪೊವೆಲ್​, ಜೇಸನ್ ಹೋಲ್ಡರ್​ ಬಿರುಸಿನ ಆಟವಾಡಿದ್ರು. ಆರ್ಷ್​​ದೀಪ್ ಸಿಂಗ್​ ಹಾಕಿದ 16ನೇ ಓವರ್​ ಒಂದರಲ್ಲೇ 24 ರನ್​ ಚಚ್ಚಿದ್ರು. 
19 ಎಸೆತಗಳನ್ನ ಎದುರಿಸಿದ ರೋವ್​​ಮನ್​ ಪೊವೆಲ್​ 3 ಬೌಂಡರಿ, 2 ಸಿಕ್ಸರ್​ ಸಹಿತ 19 ಎಸೆತಗಳಲ್ಲೇ ಅಜೇಯ 34 ರನ್​ಗಳಿಸಿದ್ರು. ಜೇಸನ್​ ಹೋಲ್ಡರ್​ 22 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ ಸಹಿತ 37 ರನ್​ಗಳಿಸಿದ್ರು. 
ಪೊವೆಲ್​ - ಹೋಲ್ಡರ್​ 5ನೇ ವಿಕೆಟ್​ಗೆ 35 ಎಸೆತಗಳಲ್ಲಿ 76 ರನ್​ಗಳ ಜೊತೆಯಾಟವಾಡಿದ್ರು. ಇದ್ರ ನೆರವಿನೊಂದಿಗೆ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ವೆಸ್ಟ್​ ಇಂಡೀಸ್​​ 195 ರನ್​ಗಳ ಕಾಂಪಿಟೇಟಿವ್​ ಸ್ಕೋರ್​ ಕಲೆ ಹಾಕಿತು. 

ವಸಂತ್ ಮಳವತ್ತಿ. ಸ್ಪೋರ್ಟ್ಸ್​ ಬ್ಯೂರೋ. ನ್ಯೂಸ್​ ಫಸ್ಟ್​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

india won against west indies in t20 world cup match sanju samson batting Hero team india fielding failures
Advertisment
Advertisment
Advertisment