/newsfirstlive-kannada/media/media_files/2026/02/12/siraj-bumrah-2026-02-12-11-35-27.jpg)
ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ವೇಗಿಗಳ ನಡುವೆ ಫೈಟ್​ ಶುರುವಾಗಿದೆ. ಒಂದು ಸ್ಥಾನಕ್ಕಾಗಿ ಜಸ್​ಪ್ರಿತ್​ ಬೂಮ್ರಾ, ಸಿರಾಜ್​ ಪೈಪೋಟಿಗೆ ಬಿದ್ದಿದ್ದಾರೆ. ಟೀಮ್ ಮ್ಯಾನೇಜ್​ಮೆಂಟ್​ಗೂ ಯಾರನ್ನ ಆಡಿಸಬೇಕು ಅನ್ನೋ ಗೊಂದಲ ಶುರುವಾಗಿದೆ. ಬೂಮ್ರಾ ಸ್ಥಾನಕ್ಕೆ ಕುತ್ತು ಬಂದಿರೋದ್ಯಾಕೆ?
T20 ವಿಶ್ವಕಪ್​ ಟೂರ್ನಿಯ 2ನೇ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಸೆಲೆಕ್ಷನ್​ ಹೆಡ್ಡೇಕ್​ ಶುರುವಾಗಿದೆ. ಅದೃಷ್ಟದ ಅವಕಾಶದಲ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ಮೊಹಮ್ಮದ್​ ಸಿರಾಜ್​ ಯುಎಸ್​ಎ ವಿರುದ್ಧ ಮಿಂಚಿನ ಪರ್ಫಾಮೆನ್ಸ್​​ ನೀಡಿದ್ರು. ಮೊಹಮ್ಮದ್ ಸಿರಾಜ್​ ಸಾಲಿಡ್​ ಪ್ರದರ್ಶನ ಇದೀಗ ಕ್ಯಾಪ್ಟನ್-ಕೋಚ್​ಗೆ ಹೊಸ ಟೆನ್ಶನ್​ ತಂದಿಟ್ಟಿದೆ.
2ನೇ ಪಂದ್ಯಕ್ಕೂ ಮುನ್ನ ಸೆಲೆಕ್ಷನ್​ ಟೆನ್ಶನ್
ಅನಾರೋಗ್ಯಕ್ಕೆ ತುತ್ತಾಗಿದ್ದ ವೇಗಿ ಜಸ್​​ಪ್ರಿತ್​ ಬೂಮ್ರಾ ವಾಂಖೆಡೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ರು. ಬೂಮ್ರಾ ಅಲಭ್ಯತೆಯಲ್ಲಿ ಪ್ಲೇಯಿಂಗ್​ ಇಲೆವೆನ್​ಗೆ ಎಂಟ್ರಿ ಕೊಟ್ಟ ಮೊಹಮ್ಮದ್​ ಸಿರಾಜ್​ 3 ವಿಕೆಟ್​ ಕಬಳಿಸಿ ಮ್ಯಾಜಿಕ್​ ಮಾಡಿದ್ರು. ಇದೀಗ 2ನೇ ಪಂದ್ಯಕ್ಕೂ ಮುನ್ನ ಬೂಮ್ರಾ ಫಿಟ್​ ಆಗಿದ್ದು, ಪ್ಲೇಯಿಂಗ್​ ಇಲೆವೆನ್​ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಬೂಮ್ರಾ VS ಸಿರಾಜ್​ ಫೈಟ್​ ನಡೀತಿದೆ. ನೋ ಡೌಟ್​ ಬೂಮ್ರಾ ವಿಶ್ವದ ಶ್ರೇಷ್ಠ ಟಿ20 ಬೌಲರ್​.! ಆದ್ರೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಬೂಮ್ರಾಗಿಂತ ಸಿರಾಜೇ ಬೆಸ್ಟ್​.! ರೀಸೆಂಟ್​ ಸರಣಿಯಲ್ಲಿ ಬೂಮ್ರಾ ಫುಲ್​ ಡಲ್​ ಆಗಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಕಿರಾತಕ! ವಿಡಿಯೋ ವೈರಲ್
/filters:format(webp)/newsfirstlive-kannada/media/media_files/2025/10/22/siraj-arshadeep-2025-10-22-10-13-32.jpg)
ಟಿ20 ವಿಶ್ವಕಪ್​ಗೂ ಮುನ್ನ ಆಡಿದ ಪ್ರಿಪರೇಟರಿ ಸರಣಿ ನ್ಯೂಜಿಲೆಂಡ್​ ವಿರುದ್ಧ ಜಸ್​ಪ್ರಿತ್​ ಬೂಮ್ರಾ ಆಟವೇ ನಡೀಲಿಲ್ಲ. ಬೂಮ್ರಾ ಬೌಲಿಂಗ್​ ದಾಳಿಯನ್ನ ಸರಣಿಯಲ್ಲಿ ನ್ಯೂಜಿಲೆಂಡ್​ ಬ್ಯಾಟರ್ಸ್​ ಚಿಂದಿ ಉಡಾಯಿಸಿದ್ರು. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣ ನೀಡಿ ಒಂದು ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡ ಬೂಮ್ರಾ, ಆಡಿದ 4 ಪಂದ್ಯಗಳಲ್ಲಿ ನೀಡಿದ್ದು ಹೀನಾಯ ಪ್ರದರ್ಶನ. 15 ಓವರ್​​ ಬೌಲಿಂಗ್​ ಮಾಡಿ ಕೇವಲ 4 ವಿಕೆಟ್​ ಕಬಳಿಸಿದ ಬೂಮ್ರಾ, ಬರೋಬ್ಬರಿ 142 ರನ್​ ಬಿಟ್ಟು ಕೊಟ್ರು.
ಆಸಿಸ್​​, ಆಫ್ರಿಕಾ ವಿರುದ್ಧವೂ ಬೂಮ್ರಾ ಪರದಾಟ
ನ್ಯೂಜಿಲೆಂಡ್​ ಸರಣಿಗೂ ಮುನ್ನ ನಡೆದ ಎರಡು ಸರಣಿಗಳಲ್ಲೂ ಬೂಮ್ರಾ ಬೌಲಿಂಗ್​ ಸಾಧಾರಣವಾಗಿತ್ತು. ಆಸ್ಟ್ರೇಲಿಯಾದ ಪೇಸ್​ & ಬೌನ್ಸಿ ಟ್ರ್ಯಾಕ್​ನಲ್ಲೂ ಯಾರ್ಕರ್​ ಸ್ಪೆಷಲಿಸ್ಟ್​ ನೀರಸ ಪರ್ಫಾಮೆನ್ಸ್​ ನೀಡಿದ್ರು. ಆಡಿದ 5 ಪಂದ್ಯಗಳಿಂದ ಕೇವಲ 3 ವಿಕೆಟ್​ ಕಬಳಿಸಿದ್ರು. ಆಸಿಸ್​ ಪ್ರವಾಸದ ಬಳಿಕ ತವರಿನಲ್ಲಿ ನಡೆದ ಸೌತ್​ ಆಫ್ರಿಕಾ ಸರಣಿಯಲ್ಲೂ ಬೂಮ್ರಾ ಆಟ ನಡೆಯಲಿಲ್ಲ. ಸೌತ್​ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಪಂದ್ಯಗಳನ್ನಾಡಿದ ಬೂಮ್ರಾ, ಒಟ್ಟು 11 ಓವರ್​ ಬೌಲಿಂಗ್​ ಮಾಡಿದ್ರು. ಕೇವಲ 4 ವಿಕೆಟ್​ ಕಬಳಿಸಿದ ಬೂಮ್ರಾ, 8.86ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ರು.
ಬೂಮ್ರಾ ಬೌಲಿಂಗ್ ಸಾಧಾರಣ
ಕಳೆದ ಏಷ್ಯಾಕಪ್​ ಟೂರ್ನಿಯಲ್ಲೂ ಜಸ್​​​ಪ್ರಿತ್​ ಬೂಮ್ರಾ ಬೌಲಿಂಗ್​ ಅಷ್ಟಕಷ್ಟೆ. ದುಬೈನಲ್ಲಿ ದರ್ಬಾರ್​ ನಡೆಸ್ತಾರೆ ಅನ್ನೋ ಅಪಾರ ನಿರೀಕ್ಷೆಯಿಟ್ಟಿದ್ದ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ರು. 5 ಪಂದ್ಯ ಬೌಲಿಂಗ್​ ಮಾಡಿದ ಬೂಮ್ರಾ ಕೇವಲ 7 ವಿಕೆಟ್​ ಉರುಳಿಸಿದ್ರು. ಯುಎಇ ಬೌಲರ್​ ಜುನೈದ್​ ಸಿದ್ಧಕಿ ಅನ್ನೋ ಯುವ ವೇಗಿಯೇ 3 ಪಂದ್ಯಕ್ಕೆ 9 ವಿಕೆಟ್​ ಕಬಳಿಸಿದ ಟೂರ್ನಮೆಂಟ್​ನಲ್ಲಿ ಬೂಮ್ರಾ 7 ವಿಕೆಟ್​ಗೆ ಸುಸ್ತಾದ್ರು.
ಸತತವಾಗಿ 4 ಸರಣಿಗಳಿಂದ ಜಸ್​​ಪ್ರಿತ್​ ಬೂಮ್ರಾ ಟ್ರ್ಯಾಕ್​ ತಪ್ಪಿದ್ದಾರೆ. ಸಿರಾಜ್​ ಕಮ್​ಬ್ಯಾಕ್​ ಪಂದ್ಯದಲ್ಲೇ 3 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಕ್ಯಾಪ್ಟನ್​ & ಕೋಚ್​ಗೆ ಬೂಮ್ರಾ VS ಸಿರಾಜ್​ ಇಬ್ಬರಲ್ಲಿ ಯಾರನ್ನ ಆಡಿಸೋದು ಅನ್ನೋ ಟೆನ್ಶನ್ ಕಾಡ್ತಿದೆ. ಫಾರ್ಮ್​ನಲ್ಲಿ ಇಲ್ಲದಿದ್ರೂ, ನಮೀಬಿಯಾ ಎದುರು ಬೂಮ್ರಾನೇ ಕಣಕ್ಕಿಳಿಸೋದು ಬಹುತೇಕ ಕನ್​ಫರ್ಮ್​.! ಇಲ್ಲೂ ವೈಫಲ್ಯ ಕಂಡ್ರೆ ಬೂಮ್ರಾ ಸ್ಥಾನಕ್ಕೆ ಕುತ್ತು ಬರೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:‘ರಾಜಕಾರಣ ಮಾಡೋಕೆ ಬಂದಿದ್ದೀನಿ, ಗಾಳಿ ಕುಡಿಯೋಕಲ್ಲ : ಸೋನಿಯಾ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us