Advertisment

ಟೀಮ್ ಇಂಡಿಯಾಗೆ ಶಾಕ್​ ಮೇಲೆ ಶಾಕ್.. ಗಿಲ್​ ಔಟ್​ ಆದ ಬೆನ್ನಲ್ಲೇ​ ಕೊಹ್ಲಿ ಮತ್ತೊಮ್ಮೆ ಡಕೌಟ್​!

ಕ್ಯಾಪ್ಟನ್ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್​ಗೆ ಇಳಿಯಿತು. ಇದರಿಂದ ಓಪನರ್ ಆಗಿ ರೋಹಿತ್ ಶರ್ಮಾ ಹಾಗೂ ನಾಯಕ ಗಿಲ್ ಕ್ರೀಸ್​ಗೆ ಆಗಮಿಸಿದ್ದರು.

author-image
Bhimappa
VIRAT_KOHLI (3)
Advertisment

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ನಾಯಕ ಶುಭ್​ಮನ್ ಗಿಲ್ ಔಟ್ ಆದ ಬೆನ್ನಲ್ಲೇ ಕಿಂಗ್ ಕೊಹ್ಲಿ ಸತತ 2ನೇ ಬಾರಿಗೆ ಡಕೌಟ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ. 

Advertisment

ಆಸ್ಟ್ರೇಲಿಯಾದ ಅಡಿಲೇಡ್ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕ್ಯಾಪ್ಟನ್ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್​ಗೆ ಇಳಿಯಿತು. ಇದರಿಂದ ಓಪನರ್ ಆಗಿ ರೋಹಿತ್ ಶರ್ಮಾ ಹಾಗೂ ನಾಯಕ ಗಿಲ್ ಕ್ರೀಸ್​ಗೆ ಆಗಮಿಸಿದ್ದರು. ಉತ್ತಮ ಬ್ಯಾಟಿಂಗ್ ಮುಂದುವರಿಸುವ ಭರವಸೆಯಲ್ಲಿದ್ದ ಈ ಜೋಡಿ ಬೇಗನೇ ಪೆವಿಲಿಯನ್ ಹಾದಿ ಹಿಡಿಯಿತು.

ಇದನ್ನೂ ಓದಿ:ಗಿಲ್​ಗೆ ಒಲಿಯದ ಆರಂಭದ ಅದೃಷ್ಟ; ಮತ್ತೆ ಟೀಮ್ ಇಂಡಿಯಾ ಫಸ್ಟ್​ ಬ್ಯಾಟಿಂಗ್​, ಪ್ಲೇಯಿಂಗ್- 11?

VIRAT_KOHLI_NEW

9 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದ್ದ ಶುಭ್​ಮನ್ ಗಿಲ್ ಅವರು 6.1 ಓವರ್​ನಲ್ಲಿ ಶಾಟ್ ಮಾಡಲು ಹೋದರು. ಆದರೆ ಬಾಲ್ ಮಿಚೆಲ್ ಮಾರ್ಷ್​​ ಕೈ ಸೇರಿತು. ಈ ವೇಳೆ ತಂಡದ ಮೊತ್ತ 17 ರನ್ ಅಷ್ಟೇ ಆಗಿತ್ತು. ನಾಯಕ ಗಿಲ್ ಔಟ್ ಆದ ಬಳಿಕ ಕ್ರೀಸ್​ಗೆ ಆಗಮಿಸಿದ ಕಿಂಗ್ ಕೊಹ್ಲಿ ಬ್ಯಾಟಿಂಗ್​​ನಲ್ಲಿ ಮತ್ತೊಮ್ಮೆ ಎಡವಿ ಬಿದ್ದು ದೊಡ್ಡ ತಪ್ಪು ಮಾಡಿದರು. 

Advertisment

ಜೇವಿಯರ್ ಬಾರ್ಟ್ಲೆಟ್ ಹಾಕಿದ 6.5ನೇ ಬಾಲ್​ ಅನ್ನು ಹೊಡೆಯಲು ಹೋದ ವಿರಾಟ್​ ಕೊಹ್ಲಿ ಎಲ್​​ಬಿಡಬ್ಲುಗೆ ಬಲಿಯಾದರು. ಬಾಲ್ ಮಿಡ್ಲ್​ ವಿಕೆಟ್​ ನೇರ ಇದ್ದಿದ್ದರಿಂದ ವಿರಾಟ್ ಕೊಹ್ಲಿ ಔಟ್​ ಸ್ಪಷ್ಟವಾಗಿತ್ತು. ಇದರಿಂದ ಈ ಸರಣಿಯಲ್ಲಿ ಮತ್ತೊಮ್ಮೆ ವಿರಾಟ್​ ಕೊಹ್ಲಿ ಡಕೌಟ್ ಆಗಿದ್ದು ಫ್ಯಾನ್ಸ್​ಗೆ ಭಾರೀ ಬೇಸರ ಮೂಡಿಸಿದೆ. ಈ ಪಂದ್ಯದಲ್ಲಿ 4 ಬಾಲ್ ಆಡಿದ್ದ ಕೊಹ್ಲಿ ಸೊನ್ನೆ ಸುತ್ತಿದರು. ಸದ್ಯ ಕ್ರೀಸ್​ನಲ್ಲಿ ರೋಹಿತ್ ಶರ್ಮಾ 19, ಶ್ರೇಯಸ್ ಅಯ್ಯರ್ ಇದ್ದು ತಂಡದ ಮೊತ್ತ 29 ಆಗಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohit Sharma-Virat Kohli Virat Kohli
Advertisment
Advertisment
Advertisment