/newsfirstlive-kannada/media/media_files/2025/08/24/kohli_batting-2025-08-24-14-38-45.jpg)
ವಿರಾಟ್​ ಕೊಹ್ಲಿ ಕ್ರಿಕೆಟ್ ಭವಿಷ್ಯ ಮುಂದೇನು.? ಈ ಪ್ರಶ್ನೆ ಕ್ರಿಕೆಟ್​​ ವಲಯದಲ್ಲಿ ಕಳೆದ ಕೆಲ ತಿಂಗಳಿಂದ ತೀವ್ರವಾಗಿ ಚರ್ಚೆಯಲ್ಲಿದೆ. ಈ ವಿಚಾರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಆದ್ರೆ ಕೊಹ್ಲಿ ಇದ್ಯಾವುದಕ್ಕೂ ತಲೆನೇ ಕೆಡಿಸಿಕೊಳ್ತಿಲ್ಲ. ನೀವು ಸೆಲೆಕ್ಟ್​ ಮಾಡ್ತಿರೋ.. ಬಿಡ್ತಿರೋ ಆಡೋಕೆ ನಾನಂತೂ ರೆಡಿ ಅಂತಿದ್ದಾರೆ ವಿರಾಟ್​ ಕೊಹ್ಲಿ. ವಿದೇಶದಿಂದ ವಿರಾಟ್​ ಕಳಿಸಿದ ಸಂದೇಶ ಏನು?.
ವಿಶ್ವ ಕ್ರಿಕೆಟ್ ಲೋಕದ ಹಾಟ್​ & ಟ್ರೆಂಡಿಂಗ್ ಟಾಪಿಕ್​​.! ದಿನದಿಂದ ದಿನಕ್ಕೆ ವಿರಾಟ್ ಕೊಹ್ಲಿಯ ಮುಂದಿನ ಭವಿಷ್ಯ ಏನಾಗಲಿದೆ ಎಂಬ ಚರ್ಚೆ ಜೋರಾಗ್ತಾನೇ ಇದೆ. ಮುಂದಿನ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯೇ ಕೊಹ್ಲಿ ಪಾಲಿನ ಕೊನೆಯ ಸರಣಿ ಅಂತಾ ಕೆಲವರು ಅಂತಿದ್ರೆ, ಅದಕ್ಕೂ ಮುನ್ನವೇ ಕೊಹ್ಲಿಗೆ ಕೊಕ್​ ಕೊಡಲಾಗುತ್ತೆ ಎಂಬ ಸುದ್ದಿಯೂ ಹರಿದಾಡ್ತಿದೆ. ಆದ್ರೆ, ಇದ್ಯಾವುದಕ್ಕೂ ವಿರಾಟ್​ ಕೊಹ್ಲಿ ತಲೆನೇ ಕೆಡಿಸಿಕೊಳ್ತಿಲ್ಲ.
/filters:format(webp)/newsfirstlive-kannada/media/post_attachments/wp-content/uploads/2023/08/KOHLI_BATTING.jpg)
ಲಂಡನ್​​ನಲ್ಲಿ ಮುಂದುವರೆದ ಕೊಹ್ಲಿ​ ಕಸರತ್ತು.!
ಸೀಸನ್​​-18ರ ಐಪಿಎಲ್ ಮುಕ್ತಾಯಗೊಂಡ ಬೆನ್ನಲ್ಲೇ ಪತ್ನಿ, ಮಕ್ಕಳೊಂದಿಗೆ ಬಿಡುವಿನ ಸಮಯವನ್ನ ಕಳೆಯಲು ವಿರಾಟ್​​ ಕೊಹ್ಲಿ ಲಂಡನ್​ಗೆ ಹಾರಿದ್ರು. ಅಲ್ಲಿಗೆ ಹೋದ ಬಳಿಕ ವಿಂಬಲ್ಡನ್ ಹಾಗೂ you we can ಚಾರಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಬಿಟ್ರೆ, ಬೇರಲ್ಲೂ ಸಾರ್ವಜನಿಕ ದರ್ಶನ ನೀಡಿರಲಿಲ್ಲ. ಲಾರ್ಡ್ಸ್​​ ಮೈದಾನದಿಂದ ಕೆಲವೇ ದೂರದಲ್ಲಿದ್ರೂ, ಭಾರತ-ಇಂಗ್ಲೆಂಡ್​​ ನಡುವಿನ ಟೆಸ್ಟ್​​ ಪಂದ್ಯ ನೋಡೋಕೆ ಕೂಡ ಬಂದಿರಲಿಲ್ಲ. ಆದ್ರೀಗ, ಕಳೆದೊಂದು ವಾರದಿಂದ ಅದೇ ಲಾರ್ಡ್ಸ್​​ ಮೈದಾನದಲ್ಲಿ ಕೊಹ್ಲಿ ಕಸರತ್ತು ನಡೆಸ್ತಿದ್ದಾರೆ.
ಐಕಾನಿಕ್​​ ಲಾರ್ಡ್ಸ್​ ಮೈದಾನದಲ್ಲಿ ವಿರಾಟ್​ ಅಭ್ಯಾಸ.!
ಸುಮಾರು ಒಂದೂವರೆ ತಿಂಗಳಿಂದ ಕ್ರಿಕೆಟ್​ ಬ್ಯಾಟ್​​ ಮುಟ್ಟದ ಕೊಹ್ಲಿ, ಮತ್ತೆ ಅಭ್ಯಾಸದ ಅಖಾಡದಲ್ಲಿ ಮರಳಿದ್ದಾರೆ. ಕಳೆದೊಂದು ವಾರದಿಂದ ಐಕಾನಿಕ್​ ಲಾರ್ಡ್ಸ್​ ಮೈದಾನದಲ್ಲಿ ವಿರಾಟ್​ ಕೊಹ್ಲಿಯ ಸಮಾರಭ್ಯಾಸ ನಡೀತಿದೆ. ಇನ್​​ಡೋರ್​ ನೆಟ್ಸ್​ನಲ್ಲಿ ವಿರಾಟ್​ ಕೊಹ್ಲಿ ಇಂಟೆನ್ಸಿವ್​ ಅಭ್ಯಾಸ ನಡೆಸ್ತಿದ್ದಾರೆ. ಕೊಹ್ಲಿಗೆ ಗುಜರಾತ್ ಟೈಟನ್ಸ್ ಅಸಿಸ್ಟೆಂಟ್​ ಕೋಚ್​ ನಯೀಮ್ ಅಮಿನ್ ನೆರವಾಗ್ತಿದ್ದಾರೆ. ಪ್ರತಿ ದಿನ 2 ಗಂಟೆಗಳ ಕಾಲ ವಿರಾಟ್ ಕೊಹ್ಲಿ ಕಠಿಣ ಬ್ಯಾಟಿಂಗ್​ ಅಭ್ಯಾಸ ನಡೆಸ್ತಾ ಬ್ಯಾಟಿಂಗ್​​​ ರಿಧಮ್​​ ಕಂಡುಕೊಳ್ಳೋ ಯತ್ನ ನಡೆಸ್ತಿದ್ದಾರೆ.
ಆಟ ಇನ್ನೂ ಮುಗಿದಿಲ್ಲ ಅಂದ್ರಾ ಕಿಂಗ್​ ಕೊಹ್ಲಿ..?
ಬಹು ದಿನಗಳಿಂದ ವಿರಾಟ್ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಹೇಳ್ತಾರಾ ಎಂಬ ಪ್ರಶ್ನೆ ಹರಿದಾಡುತ್ತಲೇ ಇದೆ. ವಿರಾಟ್​ ಕೊಹ್ಲಿ​ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಎಂಬ ಸುದ್ದಿ ಬಿಸಿಸಿಐ ವಲಯದಿಂದಲೇ ಹೊರಬಿದ್ದಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಿಂದ ಹೊಸ​ ಟೀಮ್ ಕಟ್ಟುವ ಚಿಂತನೆ ನಡೆಸಿರೋ ಬಿಸಿಸಿಐ, ಸೀನಿಯರ್ಸ್​ ಕೊಕ್​ ನೀಡುತ್ತೆ ಎಂಬ ಸುದ್ದಿ ದಿನೇ ದಿನೇ ಗಟ್ಟಿಯಾಗಿ ಸದ್ದು ಮಾಡ್ತಿದೆ. ಇದ್ರ ನಡುವೆ ಕೊಹ್ಲಿ ಕಳೆದೊಂದು ವಾರದಿಂದ ಕಠಿಣ ಅಭ್ಯಾಸ ನಡೆಸಿರೋ ಕೊಹ್ಲಿ, ಆಟ ಇನ್ನೂ ಮುಗಿದಿಲ್ಲ ಅನ್ನೋ ಪರೋಕ್ಷ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಹೆಂಡತಿಗೆ ಬೆಂಕಿ ಹಚ್ಚಿ ಜೀವ ತೆಗೆದ ಕೇಸ್​.. ಗಂಡನನ್ನ ಎನ್​ಕೌಂಟರ್ ಮಾಡಿದ ಪೊಲೀಸರು
/filters:format(webp)/newsfirstlive-kannada/media/media_files/2025/08/10/kohli_power-2025-08-10-13-55-50.jpg)
ವಯಸ್ಸಿನ ಕಾರಣಕ್ಕೆ ವಿರಾಟ್​ ಕೊಹ್ಲಿಯ ಏಕದಿನ ಕ್ರಿಕೆಟ್​ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡ್ತಿದೆ. ಆದ್ರೆ, ಫಾರ್ಮ್​ & ಫಿಟ್​​ನೆಸ್​ ವಿಚಾರದಲ್ಲಿ ಕೊಹ್ಲಿಯನ್ನ ಮೀರಿಸೋಕೆ ಆಗಲ್ಲ. ಅದ್ರಲ್ಲೂ ಒನ್​ ಡೇ ಫಾರ್ಮೆಟ್​​ನಲ್ಲಿ ಕೊಹ್ಲಿ ಗತ್ತು ಎಂತಾದ್ದು ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಈ ಹಿಂದಿನ ಐಸಿಸಿ ಟೂರ್ನಿಗಳಲ್ಲಿ ನೀಡಿರೋ ಪ್ರದರ್ಶನವೇ ಕೊಹ್ಲಿ ಯಾಕೆ ಏಕದಿನ ವಿಶ್ವಕಪ್​ಗೆ ಬೇಕು ಅನ್ನೋ ಪ್ರಶ್ನೆಗೆ ಉತ್ತರವಾಗಿದೆ. ಆಫ್ರಿಕಾದ ಟಫ್​ ಕಂಡಿಷನ್ಸ್​ನಲ್ಲಿ 2027ರ ಟೂರ್ನಿ ನಡೆಯೋದ್ರಿಂದ ಕೊಹ್ಲಿ ಅನುಭವ ತಂಡಕ್ಕೆ ಬೇಕಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭವಿಷ್ಯ ನಿರ್ಧಾರ.!
ಕೊಹ್ಲಿ ಲೆಜೆಂಡರಿ ಬ್ಯಾಟರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಐಪಿಎಲ್ ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿರೋ ಕೊಹ್ಲಿಗೆ ಮುಂಬರೋ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಗ್ನಿಪರೀಕ್ಷೆ ಕಾದಿದೆ. ಈ ಪ್ರವಾಸದಲ್ಲಿ ಕೊಹ್ಲಿ ಇಂಪ್ರೆಸ್ಸಿವ್​ ಪರ್ಫಾಮೆನ್ಸ್​ ನೀಡಬೇಕಿದೆ. ಈ ಪ್ರವಾಸದಲ್ಲಿ ಮಿಂಚಿದ್ರೆ ಮಾತ್ರ ಕೊಹ್ಲಿ ಸೇಫ್​ ಆಗಲಿದ್ದಾರೆ. ಫೇಲಾದ್ರೆ, 2027 ಏಕದಿನ ವಿಶ್ವಕಪ್​ ಆಡೋ ಕನಸು ಕನಸಾಗೇ ಉಳಿಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us