/newsfirstlive-kannada/media/media_files/2025/10/16/vk-tw-2025-10-16-13-31-47.jpg)
ವಿರಾಟ್​ ಕೊಹ್ಲಿ (Virat Kohli) ಭಾರತ ಕ್ರಿಕೆಟ್ ಲೋಕದ ಅಗ್ರಗಣ್ಯ ಆಟಗಾರ. ಪಾಲಿಟಿಕ್ಸ್ ಎನ್ನವ ಪೆಡಂಭೂತ ಇಂತಹ ದಿಗ್ಗಜ ಆಟಗಾರರಿಗೂ ಬಿಟ್ಟಿಲ್ಲ. ವಿರಾಟ್​ನ ಆ ಒಂದು ಟ್ವೀಟ್​ ಕೋಟ್ಯಾಂತರ ಅಭಿಮಾನಿಗಳಿಗೆ ಸಂತಸ ತಂದಿದೆ. ಅಷ್ಟಕ್ಕೂ ಆ ಟ್ವೀಟ್​ನ ಒಳ ಅರ್ಥವೇನು ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸತತ ಏಳು ತಿಂಗಳ ಬಳಿಕ ವಿರಾಟ್ ಕೊಹ್ಲಿ, ಏಕದಿನ ತ್ರಿಕೋನ ಸರಣಿಯಾಡಲು ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಈಗಾಗಲೇ ಟಿ20 ಹಾಗು ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ಸ್ಟಾರ್ ಪ್ಲೇಯರ್​ಗೆ ಇದೇ ಕೊನೆ ಸರಣಿಯಾಗಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿದೆ.
ಎಲ್ಲಿಂದ ಶುರುವಾಯ್ತು ಪಾಲಿಟಿಕ್ಸ್..?
ಅದ್ಯಾವಾಗ ಟೀಮ್ ಇಂಡಿಯಾಗೆ ಕೋಚ್ ಆಗಿ ಗೌತಮ್ ಗಂಭೀರ್ ಹಾಗು ಆಯ್ಕೆ ಸಮಿತಿಗೆ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ ಬಂದ್ರೊ, ಅಲ್ಲಿಂದ ದಿನೇ ದಿನೇ ರೋ-ಕೊ ಜೋಡಿಯನ್ನು ಕಡೆಗಣಿಸಲಾರಂಭಿಸಿದರು. ಇದಕ್ಕೆ ಕಾಕತಾಳಿಯವೆಂಬಂತೆ ವಿರಾಟ್ ಕೊಹ್ಲಿ ಟೆಸ್ಟ್ ಹಾಗು ಟಿ20 ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.
ಟ್ವೀಟ್ ಮೂಲಕ ಟಕ್ಕರ್ ಕೊಟ್ರಾ?
ಹೌದು.. ಈ ವಿವಾದಗಳ ಬೆನ್ನಲ್ಲೆ ವಿರಾಟ್ ಕೊಹ್ಲಿ ನಿಗೂಢ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಕೊಹ್ಲಿ ‘The only time you truly fail, is when you decide to give up’ (ನೀವು ವಿಫಲ ಆಗೋದೇ ಬೇರೆಯವರಿಗೆ ಅವಕಾಶ ಬಿಟ್ಟುಕೊಟ್ಟಾಗ) ಎಂದು ಬರೆದಿದ್ದಾರೆ. ಈ ಪೋಸ್ಟ್​ ಅವರ ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್ ಕೊಟ್ಟಿದೆ. ಇದನ್ನು ಓದಿದ ಕೆಲವರು, ವಿರಾಟ್ ಖಂಡಿತವಾಗಿಯೂ 2027ರ ವಿಶ್ವಕಪ್ ಆಡಲಿದ್ದಾರೆ. ಅದರ ಕುರಿತಾಗಿಯೇ ಕೊಹ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಅರ್ಥೈಸಿಕೊಂಡಿದ್ದಾರೆ.
The only time you truly fail, is when you decide to give up.
— Virat Kohli (@imVkohli) October 16, 2025
ಆಸ್ಟ್ರೇಲಿಯಾ ತ್ರಿಕೋನ ಏಕದಿನ ಸರಣಿಯನ್ನಾಡಲು ರೋ-ಕೊ ಜೋಡಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮ ಆಟದ ಮೂಲಕ ವಿರೊಧಿಗಳಿಗೆ ತಕ್ಕ ಉತ್ತರ ಕೊಡ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.