/newsfirstlive-kannada/media/media_files/2025/09/18/shreyanka-patil-5-2025-09-18-13-07-15.jpg)
WCPL 2025ರ ಥ್ರಿಲ್ಲಿಂಗ್ ಫೈನಲ್ ಮ್ಯಾಚ್ನಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡವು (Barbados Royals) ಗಯಾನಾ ಅಮೆಜಾನ್ ವಾರಿಯರ್ಸ್ (Guyana Amazon Warriors) ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿದೆ. ಆ ಮೂಲಕ ಸತತವಾಗಿ ಮೂರನೇ ಬಾರಿಗೆ ಕಪ್ ಎತ್ತಿದೆ. ವಿಶೇಷ ಅಂದ್ರೆ ಚಾಂಪಿಯನ್ ತಂಡದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ಇದ್ದಾರೆ.
ಪ್ರಾವಿಡೆನ್ಸ್‌ನಲ್ಲಿ ನಡೆದ 2025ರ ಮಾಸ್ಸಿ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ನ (Massy Women’s Caribbean Premier League) ರೋಚಕ ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಬಾರ್ಬಡೋಸ್ ರಾಯಲ್ಸ್ ತಂಡವು ಹ್ಯಾಟ್ರಿಕ್ ಕಪ್ನನ್ನು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಲು ಮಾಡಿದ ವಾರಿಯರ್ಸ್ ತಂಡವು 136/3 ಸ್ಕೋರ್ ಕಲೆಹಾಕಿತು. ಓಪನಿಂಗ್ ಮಾಡಿದ ಆಮಿ ಹಂಟರ್ 36 ಎಸೆತಗಳಲ್ಲಿ 29 ರನ್ ಗಳಿಸಿದರು. ಉಳಿದ ಅಗ್ರ ಕ್ರಮಾಂಕದ ಆಟಗಾರ್ತಿಯರು ಸಪೋರ್ಟ್ ನೀಡಿದರೂ, ಸವಾಲಿನ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಲಿಲ್ಲ.
ಎರಡನೇ ಇನ್ನಿಂಗ್ಸ್ನಲ್ಲಿ ರನ್ ಚೇಸ್ ಮಾಡಲು ಬೆನ್ನುಹತ್ತಿದ ರಾಯಲ್ಸ್ ತಂಡವು ಪವರ್-ಪ್ಲೇನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು, ಅದರಲ್ಲಿ ಫಾರ್ಮ್ನಲ್ಲಿದ್ದ ಚಾಮರಿ ಅಥಪತ್ತು 25 ರನ್ಗಳಿಗೆ ಔಟ್ ಆಗಿದ್ದು ತಂಡಕ್ಕೆ ಆಘಾತ ನೀಡಿತು. ಆದಾಗ್ಯೂ, ಕೈಸಿಯಾ ನೈಟ್ ಮತ್ತು ಕೋರ್ಟ್ನಿ ಜೊತೆಯಾಟದಿಂದಾಗಿ, ಬಾರ್ಬಡೋಸ್ ರಾಯಲ್ಸ್ ಸತತ ಮೂರನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಟೂರ್ನಮೆಂಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಚಾಮರಿ ಅಧಪತ್ತು ಏಳು ವಿಕೆಟ್‌ಗಳೊಂದಿಗೆ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ವಾರಿಯರ್ಸ್‌ನ ಅಶ್ಮಿನಿ ಮುನಿಸರ್ ಮತ್ತು ಲಾರಾ ಹ್ಯಾರಿಸ್ ತಲಾ ಎಂಟು ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್‌ಗಳ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.