/newsfirstlive-kannada/media/media_files/2025/08/30/kohli-anushka-dog-2025-08-30-16-55-31.jpg)
/newsfirstlive-kannada/media/media_files/2025/08/30/sachin-with-dog-2025-08-30-16-55-46.jpg)
ಶ್ವಾನ ಮನುಷ್ಯನ ಬೆಸ್ಟ್ ಫ್ರೆಂಡ್.. ಮಕ್ಕಳಿರುವ ಮನೆಯಲ್ಲಿ ಮಕ್ಕಳ ಪ್ರೀತಿಯ ಗೆಳೆಯ. ಶ್ವಾನಗಳ ಸ್ವಾಮಿ ನಿಷ್ಠೆ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಯಾಕಂದ್ರೆ ಮನೆಯ ಹಾಗೂ ಮಾಲೀಕನ ರಕ್ಷಣೆಗೆ ಪ್ರಾಣವನ್ನೇ ತ್ಯಜಿಸಿದ ಉದಾಹರಣೆಗಳಿವೆ. ಶ್ವಾನಸಾಕಣೆ ಕೆಲವರಿಗೆ ಫ್ಯಾಶನ್, ಕೆಲವರಿಗೆ ಟೈಂ ಪಾಸ್. ಇದೇ ಶ್ವಾನಗಳು ಕೆಲ ಕ್ರಿಕೆಟರ್ಗಳ ಪಾಲಿಗೆ ರಿಲ್ಯಾಕ್ಸೇಶನ್.. ಧೋನಿಯಿಂದ ಹಿಡಿದು ಸಚಿನ್, ವಿರಾಟ್ ತನಕ ಎಲ್ಲರಿಗೂ ನಾಯಿ ಪ್ರೀಯರೇ ಅನ್ನೋದು ಓಪನ್ ಸಿಕ್ರೇಟ್.
/newsfirstlive-kannada/media/media_files/2025/08/30/kohli-anushka-dog-2025-08-30-16-56-08.jpg)
ವಿರುಷ್ಕಾ ಜೋಡಿಗೆ ಶ್ವಾನ ಅಂದ್ರೆ ಅಚ್ಚುಮೆಚ್ಚು
ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾಗೆ ಕೂಡ ನಾಯಿಗಳಂದ್ರೆ ಎಲ್ಲಿಲ್ಲದ ಇಷ್ಟ. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಶ್ವಾನಗಳ ಜೊತೆಯೇ ಹೆಚ್ಚು ಸಮಯ ಕಳೆಯುತ್ತಾರೆ. ಆಗಾಗ ಶ್ವಾನಗಳ ಜೊತೆಗಿನ ಫೋಟೋಗಳೂ ವಿಡಿಯೋಗಳು ಹಂಚಿಕೊಳ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ವಿರುಷ್ಕಾ ಜೋಡಿಯ ಸಾಕುಪ್ರಾಣಿಯ ಹೆಸರು ಡ್ಯೂಡ್.
/newsfirstlive-kannada/media/media_files/2025/08/30/gill-and-dog-2025-08-30-16-56-27.jpg)
ಗಿಲ್ ಪಾಲಿನ ಬೆಸ್ಟ್ ಫ್ರೆಂಡ್ಸ್ ಈ ಪೆಟ್ಸ್
ಗಿಲ್ಗೆ ಪೆಟ್ಸ್ ಲವರ್ ಅನ್ನೋದ್ರಲ್ಲಿ ಡೌಟಿಲ್ಲ. ಅಂಡರ್-19 ಡೇಸ್ನಿಂದಲೂ ಶ್ವಾನಗಳ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಶುಭ್ಮನ್, ನೀವು ನಿಮ್ಮನ್ನ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನ ಪ್ರೀತಿಸುವ ಏಕೈಕ ಜೀವಿ ಶ್ವಾನ ಎಂದು ಬರೆದುಕೊಂಡಿದರು. ಜಿಮ್ ಸೆಷನ್ ವೇಳೆ ಗಿಲ್ಗೆ ಸಾಥ್ ನೀಡ್ತಾವಂತೆ ಈ ಶ್ವಾನಗಳು. ಇದು ನೋಡಿದ್ರೆ ಸಾಕು. ಶುಭ್ಮನ್ಗೆ ಶ್ವಾನಗಳ ಮೇಲಿನ ಪ್ರೀತಿ ಎಷ್ಟಿಗೆ ಅನ್ನೋದು ಅರ್ಥವಾಗಲು.
/newsfirstlive-kannada/media/media_files/2025/08/30/surya-with-dog-2025-08-30-16-56-50.jpg)
ಟೆಸ್ಟ್ ಕ್ಯಾಪ್ಟನ್ ಶುಭ್ಮನ್ಗೆ ಮಾತ್ರವಲ್ಲ. ಸೂರ್ಯಕುಮಾರ್ ಯಾದವ್ಗೂ ಎಲ್ಲಿಲ್ಲದ ಪ್ರೀತಿ. ಅದು ಎಷ್ಟರ ಮಟ್ಟಿಗೆ ಅಂದ್ರೆ ಅವುಗಳ ಜೊತೆಗಿರುವುದೇ ಒಂದು ಅಡ್ವೆಂಚರ್ ಅಂತೆ. ಪ್ರತಿ ಭಾರೀ ಮನೆಯಲ್ಲಿ ಮುದ್ದು ಮಾಡುತ್ತಾ ಕಾಣಿಸಿಕೊಳ್ಳುವ ಸೂರ್ಯ, ಎರಡು ಫ್ರೆಂಚ್ ಬುಲ್ಡಾಗ್ಸ್ನ ಸಾಕಿದ್ದಾರೆ. ಅವುಗಳ ಹೆಸರು ಪಾಬ್ಲೊ ಅಂಡ್ ಒರಿಯೋ.
/newsfirstlive-kannada/media/media_files/2025/08/30/dhoni-with-dog-2025-08-30-16-57-54.jpg)
ಶ್ವಾನಗಳ ಜೊತೆಗಿನ ಆಟವೇ ಧೋನಿಗೆ ರಿಲ್ಯಾಕ್ಸ್
ಧೋನಿಗೆ ಶ್ವಾನಗಳ ಮೇಲಿನ ಪ್ರೀತಿಯನ್ನು ಬಿಡಿಸಿ ಹೇಳಬೇಕಿಲ್ಲ. ಧೋನಿ ತಮ್ಮ ನೆಚ್ಚಿನ ಫಾರ್ಮ್ ಹೌಸ್ನಲ್ಲಿ ಸಿಂಗಲ್ ಆಗಿ ಕಾಣಿಸಿಕೊಂಡಿದಕ್ಕಿಂತ ಶ್ವಾನಗಳ ಜೊತೆ ಕಾಣಿಸಿಕೊಂಡಿದ್ದೇ ಹೆಚ್ಚು. ಶ್ವಾನಗಳ ಜೊತೆ ಆಟವಾಡುತ್ತಾ? ಕಾಲ ಕಳೆಯುವ ಧೋನಿ, ಬರ್ತ್ ಡೇ ಸೆಲಬ್ರೇಷನ್ ಸಹ ಮಾಡ್ತಾರೆ. ಕೇರ್ ಮಾಡುತ್ತ ಮುದ್ದಾಡಿದ್ದಿದೆ. ರಾಂಚಿ ಫಾರ್ಮ್ ಹೌಸ್ನಲ್ಲಿ ವಿವಿಧ ತಳಿಗಳ ನಾಯಿಗಳನ್ನ ಸಾಕ್ತಿರುವ ಧೋನಿ, ಆನ್ಫೀಲ್ಡ್ನಲ್ಲೂ ಶ್ವಾನಗಳ ಜೊತೆ ಕಾಣಿಸಿಕೊಂಡಿದ್ದಿದೆ. ಆಟವಾಡಿದ್ದಿದೆ.
/newsfirstlive-kannada/media/media_files/2025/08/30/shikhar-dhwarn-2025-08-30-16-58-16.jpg)
ಕನ್ನಡಿಗ ಕೆ.ಎಲ್.ರಾಹುಲ್ ಕೂಡ ನಾಯಿ ಪ್ರಿಯರು. ರಾಹುಲ್ ಸಾಕು ನಾಯಿಯ ಹೆಸರು ಸಿಂಬಾ. ನೇಕ ತಳಿಗಳ ನಾಯಿಗಳನ್ನ ಹೊಂದಿರುವ ಕೆ.ಎಲ್.ರಾಹುಲ್, ಆಗಾಗ ಶ್ವಾನಗಳ ಜೊತೆಗಿನ ಮುದ್ದಾದ ಪೋಟೋಗಳ ಪೋಸ್ಟ್ ಮಾಡ್ತಾರೆ. ಜೀವನದಲ್ಲಿ ಏಕಾಂಗಿಯಾಗಿರುವ ಶಿಖರ್ ಧವನ್ಗೂ ಶ್ವಾನಗಳೇ ಬೆಸ್ಟ್ ಫ್ರೆಂಡ್ಸ್.