/newsfirstlive-kannada/media/media_files/2026/02/07/abhishek-sharma-8-2026-02-07-17-29-10.jpg)
ವಿಶ್ವಕಪ್​ಗೂ ಮುನ್ನ ಇಂಡಿಯನ್ ಓಪನರ್​​ ಅಭಿಷೇಕ್ ಶರ್ಮಾ ಆರಾಧನೆಯೇ ನಡೆದಿತ್ತು. ಬಿಗ್ ಟೂರ್ನಮೆಂಟ್​ ಈತನೇ ಟೀಮ್​ ಇಂಡಿಯಾ ಮ್ಯಾಚ್​ ವಿನ್ನರ್​ ಎಂಬ ಭವಿಷ್ಯ ನುಡಿಯಲಾಗಿತ್ತು. ಆದ್ರೆ, ಆ ಭವಿಷ್ಯ ಹುಸಿಯಾಗಿದೆ. ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಅಭಿಷೇಕ್ ಸುಳ್ಳಾಗಿಸಿದ್ದಾರೆ. ಪಂಜಾಬ್ ಬ್ಯಾಟರ್ ಪರದಾಟ ಟೀಮ್​ ಇಂಡಿಯಾವನ್ನೂ ಸಂಕಷ್ಟಕ್ಕೆ ದೂಡಿದೆ.
ಡಿಸ್ಟ್ರಕ್ಟೀವ್, ಡೆಡ್ಲಿ, ಡೇಂಜರಸ್, ಎಕ್ಸ್​​ಪ್ಲೋಸಿವ್, ಫಿಯರ್​ಲೆಸ್, ಅಗ್ರೆಸಿವ್..! ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನ ಯಾರನ್ನ ಟೀಮ್​ ಇಂಡಿಯಾ ರಿಯಲ್ ಸ್ಟ್ರೆಂಥ್​, ಗೇಮ್ ಚೇಂಜರ್​​ ಎಂದೆಲ್ಲಾ ಹಾಡಿ ಹೊಗಳಲಾಗಿತ್ತೋ, ಆತ ಅಖಾಡದಲ್ಲಿ ಠುಸ್​ ಪಟಾಕಿಯಾಗಿದ್ದಾನೆ. ಬಿಗ್​ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾ ಸ್ಟ್ರೆಂಥ್​ ಆಗಬೇಕಿದ್ದ ಆಟಗಾರ ವೀಕ್ನೆಸ್​ ಆಗಿದ್ದಾನೆ.
ಎದುರಾಳಿ - USA
ಸೊನ್ನೆಗೆ ಸುಸ್ತಾದ ಅಭಿಷೇಕ್​ ಶರ್ಮಾ
ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲೇ ಅಭಿಷೇಕ್​ ಶರ್ಮಾ ಸೊನ್ನೆ ಸುತ್ತಿದ್ರು. ಯುಎಸ್​​ಎ ತಂಡ ಹೆಣೆದಿದ್ದ ರಣವ್ಯೂಹದಲ್ಲಿ ಬಿದ್ದ ಅಭಿಷೇಕ್ ಮೊದಲ ಎಸೆತದಲ್ಲೇ ಬಿಗ್​ ಶಾಟ್​ ಪ್ಲೇ ಮಾಡೋಕೆ ಹೋಗಿ ಔಟಾದ್ರು.
ಎದುರಾಳಿ - ಪಾಕಿಸ್ತಾನ
4 ಎಸೆತ, 0 ರನ್​.. 2ನೇ ಡಕೌಟ್​
ಅನಾರೋಗ್ಯಕ್ಕೆ ತುತ್ತಾಗಿ ನಮೀಬಿಯಾ ಎದುರಿನ 2ನೇ ಪಂದ್ಯದಿಂದ ಹೊರಗುಳಿದಿದ್ದ ಅಭಿಷೇಕ್​ ಶರ್ಮಾ, ಪಾಕ್ ಎದುರು ಕಮ್​ಬ್ಯಾಕ್​ ಮಾಡಿದ್ರು. ಆದ್ರೆ, ಇಲ್ಲೂ ಅಕೌಂಟ್​ ಓಪನ್ ಮಾಡಲಿಲ್ಲ. 4 ಎಸೆತ ಎದುರಿಸಿದ ಅಭಿಷೇಕ್​ ಮತ್ತೊಂದು ಡಕೌಟ್​ ಆಗಿ ನಿರ್ಗಮಿಸಿದ್ರು.
ಎದುರಾಳಿ - ನೆದರ್ಲೆಂಡ್ಸ್​
3 ಎಸೆತ, 0 ರನ್.. ಸತತ 3ನೇ ಡಕೌಟ್​
ನೆದರ್ಲೆಂಡ್ಸ್​ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಾದ್ರೂ, ಅಭಿಷೇಕ್ ಖಾತೆ ತೆರೆಯಬಹುದು ಅಂತ ಅಭಿಮಾನಿಗಳು ಕಾಯ್ತಿದ್ರು. ಆದ್ರೆ ಅಲ್ಲೂ ಅಭಿಯದ್ದು ಅದೇ ಆಟ, ಪರದಾಟ..!
ಎದುರಾಳಿ - ಸೌತ್​ ಆಫ್ರಿಕಾ
15 ರನ್​ಗೆ ಅಭಿಷೇಕ್ ಆಟ ಅಂತ್ಯ
ಸೌತ್​ ಆಫ್ರಿಕಾ ಎದುರಿನ ಸೂಪರ್​-8 ಮ್ಯಾಚ್​ನಲ್ಲಿ ಕೊನೆಗೂ ಅಭಿಷೇಕ್ ಅಕೌಂಟ್​ ಓಪನ್ ಮಾಡಿದ್ರು. ಆದ್ರೆ, ಬಿಗ್​ ಇನ್ನಿಂಗ್ಸ್​ ಕಟ್ಟಲಿಲ್ಲ. ಜಸ್ಟ್​ 15 ರನ್​ಗೆ ಅಭಿಷೇಕ್ ಆಟ ಅಂತ್ಯವಾಯ್ತು.
ಅಭಿಷೇಕ್​ ಶರ್ಮಾ ವೈಫಲ್ಯಕ್ಕೆ ಕಾರಣ ಏನು.?
ಸತತ ವೈಫಲ್ಯ ಕಂಡ ಬೆನ್ನಲ್ಲೇ ಅಭಿಷೇಕ್​ ಶರ್ಮಾಗೆ ಏನಾಯ್ತು ಎಂಬ ಪ್ರಶ್ನೆ ಸಹಜವಾಗೇ ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಮೊದಲು ಸಿಕ್ಕಿರೋ ಉತ್ತರವೇ ಪ್ರೆಶರ್​.! 25 ವರ್ಷದ ಯುವ ಆಟಗಾರ ಮೊದಲನೇ ಬಾರಿ ಬಿಗ್ ಟೂರ್ನಮೆಂಟ್​ ಆಡ್ತಿದ್ದಾರೆ. ಈತನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಫ್ಯಾನ್ಸ್​ ಹಾಗೂ ಮ್ಯಾನೇಜ್​​ಮೆಂಟ್​ ವಲಯದ ನಿರೀಕ್ಷೆ ಅಭಿಷೇಕ್​ಗೆ ಒತ್ತಡವಾಗಿ ಪರಿಣಮಿಸಿದೆ.
ಅಲ್ಟ್ರಾ ಅಗ್ರೆಸ್ಸಿವ್​ ಅಪ್ರೋಚ್​, ಸ್ಪಿನ್​ಗೆ ಸರೆಂಡರ್​.!
ಅಭಿಷೇಕ್​ ಶರ್ಮಾಗೆ ಮುಳುವಾಗ್ತಿರೋದೆ ಬ್ಯಾಟಿಂಗ್ ಅಪ್ರೋಚ್​. ಮೊದಲ ಎಸೆತದಿಂದಲೇ ಬಿಗ್​ ಶಾಟ್​ ಬಾರಿಸೋಕೆ ಹೋಗಿ ಅಭಿಷೇಕ್ ಕೈ ಸುಟ್ಟುಕೊಳ್ತಿದ್ದಾರೆ. ಸತತವಾಗಿ 3 ಡಕೌಟ್​ ಆಗಿರೋದಕ್ಕೆ ಈ ಅಪ್ರೋಚ್​ ಪ್ರಮುಖವಾದ ಕಾರಣವಾಗಿದೆ. ಇನ್ನು, ಟೂರ್ನಿಯಲ್ಲಿ ಸ್ಪಿನ್ ವೀಕ್​ನೆಸ್ ಕೂಡ​ ಎಕ್ಸ್​ಪೋಸ್​ ಆಗಿದೆ. ಆಡಿದ 4 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಸ್ಪಿನ್ ಬಲೆಗೆ ಬಿದ್ದಿದ್ದಾರೆ.
ಅಭಿಷೇಕ್ ಶರ್ಮಾ ಔಟ್​.! ಸಂಜು ಸ್ಯಾಮ್ಸನ್ ಇನ್​.?
ಸೌತ್​ ಆಫ್ರಿಕಾ ವಿರುದ್ಧದ ಸೋಲು ಇದೀಗ ಟೀಮ್ ಇಂಡಿಯಾವನ್ನ ಸಂಕಷ್ಟಕ್ಕೆ ದೂಡಿದೆ. ಸೆಮಿಫೈನಲ್​ ಪ್ರವೇಶಕ್ಕೆ ಉಳಿದ ಪಂದ್ಯಗಳಲ್ಲಿ ಭರ್ಜರಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಫ್ಲಾಪ್ ಶೋ ನೀಡಿರೋ ಅಭಿಷೇಕ್ ಸ್ಥಾನಕ್ಕೆ ಕುತ್ತು ಬಂದಿದೆ. ಮುಂದಿನ ಪಂದ್ಯದಿಂದ ಅಭಿಷೇಕ್​ ಶರ್ಮಾನ ಡ್ರಾಪ್​ ಮಾಡಿ, ಸಂಜು ಸ್ಯಾಮ್ಸನ್​ಗೆ ಚಾನ್ಸ್​ ನೀಡೋ ಬಗ್ಗೆ ಗಂಭೀರವಾದ ಚರ್ಚೆಗಳು ಮ್ಯಾನೇಜ್​ಮೆಂಟ್​ ವಲಯದಲ್ಲಿ ನಡೆದಿದೆ. ಟೂರ್ನಿಗೂ ಮುನ್ನ ಗೇಮ್​ ಚೇಂಜರ್​ ಅನಿಸಿದ್ದ ಆಟಗಾರನಿಗೆ ಇದೀಗ ಬೆಂಚ್​ ಬಿಸಿ ಮಾಡೋ ಪರಿಸ್ಥಿತಿ ಎದುರಾಗಿದೆ.
/filters:format(webp)/newsfirstlive-kannada/media/media_files/2026/01/29/abhishekh-sharma-1-2026-01-29-12-38-09.jpg)
ವಸಂತ್ ಮಳವತ್ತಿ. ಸ್ಪೋರ್ಟ್ಸ್ ​ಬ್ಯೂರೋ, ನ್ಯೂಸ್​​ ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us