/newsfirstlive-kannada/media/media_files/2026/01/30/gambhir-sanju-2026-01-30-12-12-30.jpg)
ಟಿ-20 ವಿಶ್ವಕಪ್​​ನಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಟೀಮ್ ಇಂಡಿಯಾ ಪರದಾಡ್ತಿದೆ. ತಂಡಕ್ಕೆ ಉತ್ತಮ ಸ್ಟಾರ್ಟ್ ಸಿಗದ ಕಾರಣ ಸೂರ್ಯಕುಮಾರ್ ಯದವ್ ಪಡೆಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ಆರಂಭಿಕರ ವೈಫಲ್ಯದಿಂದ ಮೆನ್​​​-ಇನ್-ಬ್ಲೂ ಪಡೆ ಸೆಮಿಫೈಲ್​​ ಎಂಟ್ರಿಗೆ ಹರಸಾಹಸ ನಡೆಸ್ತಿದೆ.
ಪವರ್​ ಪ್ಲೇನಲ್ಲಿ ಫ್ಲಾಪ್, ಮೊಮೆಂಟಮ್ ಇಲ್ಲದೇ ಪರದಾಟ. ಮಿಡಲ್ ಆರ್ಡರ್ ಬ್ಯಾಟರ್​ಗಳ ಮೇಲೆ ಒತ್ತಡ. ದಿಕ್ಕುತಪ್ಪಿಸಿದ ಆರಂಭಿಕರ ವೈಫಲ್ಯ. ಹೌದು, ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸ್ಟಾರ್ಟಿಂಗ್ ಟ್ರಬಲ್​, ತಂಡವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಪರಿಣಾಮ ಸೂರ್ಯಕುಮಾರ್ ಯಾದವ್​ ಪಡೆ ಮೆಗಾ ಟೂರ್ನಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ, 8 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕರು ಫೇಸ್ ಮಾಡಿದ್ದು ಕೇವಲ 1.2 ಓವರ್ ಮಾತ್ರ.
ಇದನ್ನೂ ಓದಿ:ನವ ವಧು ರಶ್ಮಿಕಾಗೆ ಕುಟುಂಬದ ಬಳೆ, ಆಭರಣ ನೀಡಿದ ವಿಜಯ ದೇವರಕೊಂಡ ತಾಯಿ ಮಾಧವಿ: ನಾಳೆ ವಿವಾಹ
ಎದುರಾಳಿ - ನಮೀಬಿಯಾ
ನಮೀಬಿಯಾ ವಿರುದ್ಧ ಟೀಮ್ ಇಂಡಿಯಾ ಆರಂಭಿಕರು 25 ರನ್​ಗಳಿಸಿದ್ದೇ, ಇದುವರೆಗೂ ಹೈಯೆಸ್ಟ್ ಪಾರ್ಟ್ನರ್​ಶಿಪ್. ಆದ್ರೆ ಈ ಜೊತೆಯಾಟ ಕೇವಲ ಕೇವಲ 2 ಓವರ್​ಗೆ ಮಾತ್ರ ಸೀಮಿತವಾಗಿತ್ತು.
ಎದುರಾಳಿ - ಪಾಕಿಸ್ತಾನ
ಬದ್ಧವೈರಿ ಪಾಕ್ ವಿರುದ್ಧ ಟೀಮ್ ಇಂಡಿಯಾ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿತ್ತು. ಜೊತೆಯಾಟ ಬಂದಿದ್ದು ಕೇವಲ 1 ರನ್ ಮಾತ್ರ.
ಎದುರಾಳಿ - ನೆದರ್ಲೆಂಡ್ಸ್​
ಡಚ್ಚರ ವಿರುದ್ಧ ಸೂರ್ಯಕುಮಾರ್ ಯಾದವ್ ಪಡೆಗೆ, ಮತ್ತೆ ಅದೇ ಸಮಸ್ಯೆ ಎದುರಾಯ್ತು. ಕೇವಲ ಮೂರೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ, ರನ್ ಅಕೌಂಟೇ ಓಪನ್ ಮಾಡ್ಲಿಲ್ಲ.
ಎದುರಾಳಿ - ಸೌತ್ ಆಫ್ರಿಕಾ
ಸೂಪರ್-8 ಹಂತದ ಮೊದಲ ಪಂದ್ಯದಲ್ಲೂ ಟೀಮ್ ಇಂಡಿಯಾ ಆರಂಭಿಕರು ಎಡವಿದ್ರು. ಕೇವಲ 4 ಎಸೆತ ಎದುರಿಸಿದ ಓಪನರ್ಸ್ 4 ರನ್​ಗಳಿಸಿ ತಂಡದ ಮೇಲೆ ಒತ್ತಡ ಹಾಕಿದ್ರು.
ಕಳೆದೈದು ಪಂದ್ಯಗಳಿಂದ ಟೀಮ್ ಇಂಡಿಯಾ ಓಪನರ್ಸ್​, ಪದೇ ಪದೇ ಎಡವುತ್ತಿದ್ದಾರೆ. ಇನ್ನಾದ್ರೂ ಆರಂಭಿಕರು ಎಚ್ಚೆತ್ತುಕೊಳ್ಳದೇ ಇದ್ರೆ, ತಂಡ ಸೆಮೀಸ್ ಪ್ರವೇಶಿಸೋದೂ ಅನುಮಾನವಾಗಲಿದೆ.
ಇದನ್ನೂ ಓದಿ: ಭಾರತದ 4 ಐಟಿ ದಿಗ್ಗಜ ಕಂಪನಿಗಳ ಮೌಲ್ಯವನ್ನು ಮೀರಿಸಿದ ಆಂಥ್ರೋಪಿಕ್ ಎಐ ಕಂಪನಿ!! : 5 ವರ್ಷದಲ್ಲಿ ಸಾಧನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us