Advertisment

ಸವಾಲುಗಳನ್ನ ಮೆಟ್ಟಿನಿಂತಿದ್ದೇಗೆ ಜಮ್ಮು & ಕಾಶ್ಮೀರ ಕ್ರಿಕೆಟ್.?: ಜಮ್ಮು ಕ್ರಿಕೆಟ್ ಯಶಸ್ಸಿಗೆ ಅಸಲಿ ಕಾರಣ ಯಾರು..?

ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಿಂದ ಗುಂಡಿನ ಸದ್ದು ಕೇಳುತ್ತಲೇ ಇದೆ. ಕ್ರಿಕೆಟ್ ಬ್ಯಾಟ್, ಬಾಲ್ ಸದ್ದುಗೆ ಸರಿಯಾದ ಅವಕಾಶ, ಪೋತ್ಸಾಹವೇ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಸಂಕಷ್ಟ, ಸವಾಲುಗಳನ್ನು ಮೆಟ್ಟಿ ನಿಂತು ಜಮ್ಮು ಕಾಶ್ಮೀರ ಕ್ರಿಕೆಟ್ ತಂಡ ಈಗ ರಣಜಿ ಚಾಂಪಿಯನ್ ಆಗಿದೆ. ಇದು ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ಡೀಟೈಲ್ಸ್ ಓದಿ.

author-image
Chandramohan
RANAJI TROPHY WON BY KASHMIR TEAM
Advertisment

ಚೊಚ್ಚಲ ರಣಜಿ ಟ್ರೋಫಿ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡ, ದೇಸಿ ಕ್ರಿಕೆಟ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಫೈನಲ್​ ಪಂದ್ಯದಲ್ಲಿ ಬಲಿಷ್ಟ ಕರ್ನಾಟಕ ತಂಡವನ್ನ ಮಣಿಸಿದ ಜಮ್ಮು, ಕ್ರಿಕೆಟ್​​ ಅಭಿಮಾನಿಗಳ ಮನ ಗೆದ್ದಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ಈ ಐತಿಹಾಸಿಕ ಸಾಧನೆಯ ಹಿಂದೆ ರೋಚಕ ಕಥೆ ಇದೆ..! ಆ ಇಂಟ್ರಸ್ಟಿಂಗ್ ಸ್ಟೊರಿಯನ್ನ ನೋಡೋಣ, ಈ ಸ್ಪೆಷಲ್ ರಿಪೋರ್ಟ್​ನಲ್ಲಿ..!
ಸದಾ ಗುಂಡಿನ ಸದ್ದು..! ಪೊಲೀಸ್ ಮತ್ತು ಉಗ್ರರ ನಡುವೆ ರಣಭೀಕರ ಯುದ್ಧ..! ರಾಜಕೀಯ ಕೆಸರೆರಚಾಟ..! ಅಮಾಯಕರ ಮೇಲೆ ನಿರಂತರ ದಾಳಿ..! ಬದ್ಧವೈರಿ ಪಾಕಿಸ್ತಾನದಿಂದ, ಮನ ಶಾಂತಿ ಕದಡುವ ಘನ ಘೋರ ದಾಳಿ..! ಜಮ್ಮು ಮತ್ತು ಕಾಶ್ಮೀರ ಅಂದಾಗ ನೆನಪಾಗೋ ಸಾಮಾನ್ಯ ಸಂಗತಿಗಳಿವು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಜಮ್ಮು ಮತ್ತು ಕಾಶ್ಮೀರ ತಂಡ, ಇದೀಗ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಅದು ಬಾಂಬ್ ದಾಳಿ ಅಥವಾ ಯುದ್ಧದಿಂದಲ್ಲ..! ಕ್ರಿಕೆಟ್​​ನಿಂದ..!  ಹೌದು..! ಇತಿಹಾಸದಲ್ಲೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದಿರುವ ಜಮ್ಮು ಮತ್ತು ಕಾಶ್ಮೀರ ತಂಡ, ದಾಖಲೆ ನಿರ್ಮಿಸಿದೆ. ಬ್ಯಾಟ್, ಬಾಲ್​ನಿಂದ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.
ಆರಂಭದಲ್ಲಿ ಸೌಲಭ್ಯಗಳಿಗಾಗಿ ಪರದಾಟ..!
ರಾಜಕೀಯದಿಂದ ತತ್ತರಿಸಿತು ಜಮ್ಮು ಕ್ರಿಕೆಟ್..!
ದಶಕಗಳ ಕಾಲ ಜಮ್ಮು ಮತ್ತು ಕಾಶ್ಮೀರ ತಂಡ, ರಣಜಿ ಟ್ರೋಫಿಯಲ್ಲಿ ಪಾರದಾಟ ನಡೆಸಿತು. ಕಾರಣ ಸೌಲಭ್ಯಗಳ ಕೊರತೆ.! ಹೌದು..! ಆಟಗಾರರಿಗೆ ಅಭ್ಯಾಸ ಮಾಡಲು ಟರ್ಫ್ ವಿಕೆಟ್ಸ್ ಇಲ್ಲ..! ಪಂದ್ಯವಾಡಲು ಕ್ವಾಲಿಟಿ ಗ್ರೌಂಡ್​​ಗಳು ಇರಲಿಲ್ಲ..! ಸಂಸ್ಥೆಯ ಬೆಂಬಲವೂ ಇರಲಿಲ್ಲ.! ಇದೆಲ್ಲದರ ನಡುವೆ ರಾಜಕೀಯದಿಂದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತತ್ತರಿಸಿದ್ದು, ಸುಳ್ಳಲ್ಲ.  
2013-14 ಜಮ್ಮು ಕ್ರಿಕೆಟ್​​ನಲ್ಲಿ ಭಾರೀ ಬದಲಾವಣೆ...!
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್​​ಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದೇ, 2013-14ರ ರಣಜಿ ಸೀಸನ್​​ನಲ್ಲಿ. ಅ ಸೀಸನಲ್ಲಿ ಜೆ ಌಂಡ್ ಕೆ ತಂಡ, ಪ್ರಪ್ರಥಮ ಬಾರಿಗೆ ನಾಕೌಟ್ ಸ್ಟೇಜ್​ಗೆ ಎಂಟ್ರಿ ಕೊಟ್ಟಿತ್ತು. ರಣಜಿ ಕ್ರಿಕೆಟ್​ನ ಸಕ್ಸಸ್​​​ಫುಲ್ ತಂಡ ಎನಿಸಿಕೊಂಡಿದ್ದ ಮುಂಬೈ ಮತ್ತು ಹೈದ್ರಾಬಾದ್​ ತಂಡಗಳಿಗೆ ಶಾಕ್ ನೀಡಿದ ಜಮ್ಮು ಮತ್ತು ಕಾಶ್ಮೀರ ತಂಡ, ಅಂದು ಇಡೀ ರಾಷ್ಟ್ರದ ಗಮನ ಸೆಳೆದಿತ್ತು.
ಜಮ್ಮುಗೆ ವರವಾಯ್ತು ಲೋಕಲ್ ಟ್ಯಾಲೆಂಟ್..!
ಕಠಿಣ ಪರಿಸ್ಥಿಗಳಲ್ಲೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟಿಗರು, ಟ್ರೈನಿಂಗ್ ಮಾತ್ರ ನಿಲ್ಲಿಸಲೇ ಇಲ್ಲ. ಇದ್ದ ಅಲ್ಪ ಸ್ವಲ್ಪ ಸೌಲಭ್ಯಗಳಲ್ಲೇ ಖುಷಿಯಿಂದ ಅಭ್ಯಾಸ ನಡೆಸಿದ್ರು. ಅದ್ರಲ್ಲೂ ಲೋಕಲ್ ಟ್ಯಾಲೆಂಟೆಡ್ ಕ್ರಿಕೆಟಿಗರು, ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್​ನಲ್ಲಿ ಭಾಗವಹಿಸಿದ್ರು. ಜೊತೆಗೆ ಫರ್ವೀಝ್ ರಸೂಲ್​ರಂತಹ ನಾಯಕತ್ವದ ಗುಣ ಉಳ್ಳ ಆಟಗಾರ, ಸ್ಥಳಿಯ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಿದ್ರು. ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನ ಕಾಶ್ಮೀರಿ ಕ್ರಿಕೆಟಿಗರು ತೋರಿಸಿದ್ರು.
ಸವಾಲುಗಳನ್ನ ಮೆಟ್ಟಿನಿಂತಿದ್ದೇಗೆ ಜಮ್ಮು & ಕಾಶ್ಮೀರ ಕ್ರಿಕೆಟ್.?
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟಿಗರಿಗೆ ಎದುರಾಗಿದ್ದು ಒಂದಾ..ಎರಡಾ ಸಮಸ್ಯೆ..! ದಶಕಗಳಿಂದಲೂ ಕಾಶ್ಮೀರಿ ಕ್ರಿಕೆಟಿಗರು, ಸಾಲು ಸಾಲು ಸವಾಲುಗಳನ್ನ ಎದುರಿಸಿದ್ರು. ಈ ಎಲ್ಲಾ ಸಮಸ್ಯೆಗಳಿಗೆ, ದಿನ ಕಳೆದಂತೆ ಪರಿಹಾರ ಕೂಡ ಸಿಕ್ಕಿತು. ಶ್ರೀನಗರ ಮತ್ತು ಜಮ್ಮುವಿನಲ್ಲಿ ಕ್ರಿಕೆಟ್ ಅಕಾಡೆಮಿಗಳು ತಲೆ ಎತ್ತಿದವು. ಸ್ಥಳೀಯ ಸಮುದಾಯಗಳು ಮತ್ತು ಸ್ಥಳಿಯ ಕುಟುಂಬಗಳು ಕಠಿಣ ಪರಿಸ್ಥಿಗಳಲ್ಲೂ ಕ್ರಿಕೆಟ್ ಮತ್ತು ಕ್ರಿಕೆಟಿಗರ ಪರ ನಿಂತು ಬೆಂಬಲಿಸಿದ್ರು. ಈ ಸಣ್ಣಪುಟ್ಟ ವಿಚಾರಗಳೇ, ಜಮ್ಮು ಕ್ರಿಕೆಟ್​​ಗೆ ವರದಾನವಾಯ್ತು. 
ಜಮ್ಮು ಕ್ರಿಕೆಟ್ ಯಶಸ್ಸಿಗೆ ಅಸಲಿ ಕಾರಣ ಯಾರು..?
1959-60ರಲ್ಲಿ ರಣಜಿ ಕ್ರಿಕೆಟ್​ಗೆ ಕಾಲಿಟ್ಟ ಜಮ್ಮು ಮತ್ತು ಕಾಶ್ಮೀರ ತಂಡ, ಅಷ್ಟೇನು ಸದ್ದು ಮಾಡಲಿಲ್ಲ. ಯಾವಾಗ ದಿಗ್ಗಜ ಕ್ರಿಕೆಟಿಗರು ಕ್ರಿಕೆಟ್​​ ಬೆಳೆಸಲು ಜಮ್ಮುವಿಗೆ ಕಾಲಿಟ್ರೋ  ಆ ಬಳಿಕ ಎಲ್ಲಾ ಬದಲಾಯ್ತು. ಮಾಜಿ ಕ್ರಿಕೆಟಿಗ, ದಿಗ್ಗಜ ದಿವಂಗತ ಬಿಷನ್ ಸಿಂಗ್ ಬೇಡಿ ಜಮ್ಮು ಕಾಶ್ಮೀರ ತಂಡಕ್ಕೆ ಕೋಚ್ ಮತ್ತು ಮೆಂಟರ್ ಆಗಿ ಗೈಡ್ ಮಾಡಿದ್ರು.2019-20ರಲ್ಲಿ ಇರ್ಫನ್ ಪಠಾಣ್ ಜಮ್ಮು ತಂಡದ ಮೆಂಟರ್ ಆಗಿದ್ರು. ಆಗ ಜಮ್ಮು 2ನೇ ಬಾರಿ ನಾಕೌಟ್​​ ಸ್ಟೇಜ್​ಗೆ ಎಂಟ್ರಿ ಕೊಟ್ಟಿತ್ತು. 2021ರಲ್ಲಿ ಹಾಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ಜಮ್ಮು ಕ್ರಿಕೆಟ್ ಸಂಸ್ಥೆಯ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ಸೇವೆ ಸಲ್ಲಿಸಿದ್ರು. ಜಮ್ಮು ಕ್ರಿಕೆಟ್​ ಅನ್ನ ಸೈಲೆಂಟ್ ಆಗಿ ಬೆಳೆಸಿದ್ರು. 
2022ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್​ ಶಾ, ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ರು. ಅಲ್ಲಿ ಪರಿಸ್ಥಿಯನ್ನ ಕಣ್ಣಾರೆ ನೋಡಿ, ಅರ್ಥಮಾಡಿಕೊಂಡ್ರು. ಆಟಗಾರರು ಮತ್ತು ಕೋಚ್​ಗಳ ಜೊತೆ ಮಾತನಾಡಿದ್ರು. ಅದೇ ವರ್ಷ ಟ್ಯಾಲೆಂಟ್ ಹಂಟ್ ಪ್ರೋಗ್ರ್ಯಾಮ್ ಶುರುಮಾಡಿದ್ರು. ಜ್ಯೂನಿಯರ್, ಸೀನಿಯರ್ ಆಟಗಾರರು ಅಷ್ಟೇ ಯಾಕೆ, ಕೋಚ್​ಗಳಿಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನ ಮಾಡಿದ್ರು. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್​ ಅಭಿವೃದ್ದಿಗೆ ಜಯ್​ ಶಾ ಅಪಾರ ಕೊಡುಗೆ ನೀಡಿದ್ದಾರೆ. ಜೈ ಶಾ ಹೊರತುಪಡಿಸಿ ಮತ್ಯಾವ ಬಿಸಿಸಿಐ ಅಧಿಕಾರಿಯೂ ಹಿಂದೆ, ಕಾಶ್ಮೀರಕ್ಕೆ ಎಂಟ್ರಿ ಕೂಡ ಕೊಟ್ಟಿರಲಿಲ್ಲ. 
ಇಂದು ಐಪಿಎಲ್​ನಲ್ಲಿ ಜಮ್ಮು ಕ್ರಿಕೆಟರ್ಸ್​ ದರ್ಬಾರ್..! 
ದಶಕಗಳ ಕ್ರಿಕೆಟ್​​​ ಭೂಪಟದಲ್ಲಿ ಕಾಣೆಯಾಗಿದ್ದ ಜಮ್ಮು ಕಾಶ್ಮೀರ, ಇದೀಗ ಮತ್ತೆ ಸುದ್ದಿಯಲ್ಲಿದೆ. ಕಾಶ್ಮೀರಿ ಕ್ರಿಕೆಟಿಗರಿಗೆ ಈಗ ಭಾರೀ ಡಿಮ್ಯಾಂಡ್ ಕೂಡ ಇದೆ. ಐಪಿಎಲ್​ನಲ್ಲಿ ಜಮ್ಮು ಕ್ರಿಕೆಟಿಗರು, ಕೋಟಿ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದಾರೆ.  ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಟಗಾರರು ಮಿಂಚ್ತಿದ್ದಾರೆ. ಫರ್ವೀಝ್ ರಸೂಲ್, ಉಮ್ರಾನ್ ಮಲ್ಲಿಕ್, ಯುದ್ವೀರ್ ಸಿಂಗ್ ಚರಕ್, ಅಬ್ದುಲ್ ಸಮದ್, ಇದೀಗ ಔಕಿಬ್ ನಬಿ ಸಹ ಐಪಿಎಲ್​​ ಆಡಲು ರೆಡಿಯಾಗಿದ್ದಾರೆ. ಕಾಶ್ಮೀರ ಮೂಲದ ಆಲ್​ರೌಂಡರ್ ರಸೀಕ್ ಧರ್ ಸಹ ಹೈ ಪ್ರೊಫೈಲ್ ಟೀಮ್​​ಗಳನ್ನ ಪ್ರತಿನಿಧಿಸುತ್ತಿದ್ದಾರೆ.
ಒಟ್ನಲ್ಲಿ  ಟಫ್ ಪೀಪಲ್ ಕಮ್ಸ್ ಫ್ರಮ್ ಟಫ್ ಪ್ಲೇಸಸ್​ ಅಂತಾರೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟಿಗರ ವಿಚಾರದಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯ.!

Advertisment

ಗಂಗಾಧರ್.ಜಿ.ಎಸ್. ಸ್ಪೋರ್ಟ್ಸ್​ ಬ್ಯೂರೋ, ನ್ಯೂಸ್​ ಫಸ್ಟ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

JAMMU KASHMIR WON RANAJI TROPHY Jammu Kashmir
Advertisment
Advertisment
Advertisment