/newsfirstlive-kannada/media/media_files/2025/08/08/ms-dhoni-retirement-plan-2025-08-08-18-18-34.jpg)
MS ಧೋನಿ Photograph: (ಸಿಎಸ್ಕೆ ಟ್ವಿಟರ್)
T20 ವಿಶ್ವಕಪ್​ ಟೂರ್ನಿಯ ಅಬ್ಬರದ ನಡುವೆ ಐಪಿಎಲ್ ಸೀಸನ್​ 19ಕ್ಕೆ ಸದ್ದಿಲ್ಲದೆ ಸಿದ್ಧತೆಗಳು ನಡೀತಿವೆ. ಮಾರ್ಚ್​​ ಅಂತ್ಯದಿಂದ ಚುಟುಕು ಕ್ರಿಕೆಟ್​ ಹಬ್ಬ ಆರಂಭವಾಗಲಿದ್ದು, ಅದಕ್ಕೂ ಮುನ್ನ ಸಿಎಸ್​ಕೆ ಹಾಗೂ ಧೋನಿ ಅಭಿಮಾನಿಗಳಿಗೆ ಬಿಗ್​ ಅಪ್​​​ಡೇಟ್​ ಸಿಕ್ಕಿದೆ. ಧೋನಿ ಐಪಿಎಲ್ ಆಡೋ ವಿಚಾರದಲ್ಲಿ ಬಗ್ಗೆ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​ ಹೊಸ ಬಾಂಬ್ ಹಾಕಿದ್ದಾರೆ. ಹಾಗಾದ್ರೆ, ಮಾಹಿ ಐಪಿಎಲ್​ ಆಡ್ತಾರಾ.? ಇಲ್ವಾ.? ಈ ಸ್ಟೋರಿಯಲ್ಲಿದೆ ಓದಿ ಡಿಟೇಲ್ಸ್​.!
ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​ 19ರ ವೇಳಾಪಟ್ಟಿ ಅನೌನ್ಸ್​ಮೆಂಟ್​​ಗೆ ಕೆಲವೇ ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್​ ಅಂತ್ಯದಿಂದ ಕಲರ್​ಫುಲ್ ಲೀಗ್ ಆರಂಭವಾಗಲಿದ್ದು, ಐಪಿಎಲ್​​ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಎಲ್ಲಾ ತಂಡಗಳು ಮೆಗಾ ಟೂರ್ನಿಗೆ ಸದ್ದಿಲ್ಲದೇ ಸಿದ್ಧತೆ ಆರಂಭಿಸಿದೆ. 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್​​ ಕಿಂಗ್ಸ್​ ತಂಡ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಿದ್ಧತೆ ಆರಂಭಿಸಿದ ಬೆನ್ನಲ್ಲೇ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​ ಅಭಿಮಾನಿಗಳಿಗೆ ಬಿಗ್ ಅಪ್​​ಡೇಟ್​ ನೀಡಿದ್ದಾರೆ.
ಐಪಿಎಲ್​ಗೂ ಮುನ್ನ ಸಿಎಸ್​ಕೆ ಸಿಇಒ ಹೊಸ ಬಾಂಬ್​.!
ಧೋನಿ IPL ಆಡ್ತಾರಾ.? ಇಲ್ವಾ.? ಕಾಶಿ ವಿಶ್ವನಾಥನ್ ಉತ್ತರ.!
ಮುಂಬರೋ ಐಪಿಎಲ್​ನಲ್ಲಿ ಧೋನಿ ಆಡ್ತಾರಾ.? ಇಲ್ವಾ.? ಅನ್ನೋದು ಐಪಿಎಲ್ ಹರಾಜಿಗೂ ಮುನ್ನ ಇದ್ದ ಮಿಲಿಯನ್​​ ಡಾಲರ್​ ಟೂರ್ನಿಯ ಬಿಲಿಯನ್​ ಡಾಲರ್​ ಪ್ರಶ್ನೆಯಾಗಿತ್ತು. ಧೋನಿಯನ್ನ ಸಿಎಸ್​ಕೆ ರಿಟೈನ್ ಮಾಡಿಕೊಂಡ ಬಳಿಕ ಆಡೋದು ಕನ್​ಫರ್ಮ್​ ಎಂದೇ ಎಲ್ಲರೂ ಭಾವಿಸಿದ್ರು. ಆದ್ರೀಗ ಧೋನಿ ಐಪಿಎಲ್​ ಆಡೋ ವಿಚಾರದಲ್ಲಿ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​ ಹೊಸ ಬಾಂಬ್ ಸಿಡಿಸಿದ್ದಾರೆ.
ಧೋನಿ ಆಡ್ತಾರೆ.. ಎಷ್ಟು ಪಂದ್ಯ ಅನ್ನೋದು ಗೊತ್ತಿಲ್ಲ.!
ಸೀಸನ್​ 19ರಲ್ಲಿ ಧೋನಿ ಜಾತ್ರೆ ಮಾಡೋಕೆ ಹೊರಟಿದ್ದ ಅಭಿಮಾನಿಗಳಿಗೆ ಸಿಎಸ್​ಕೆ ಸಿಇಒ ಶಾಕ್​ ನೀಡಿದ್ದಾರೆ. ಧೋನಿ ಭವಿಷ್ಯದ ಬಗ್ಗೆ ಮಾತನಾಡಿರೋ ಕಾಸಿ ವಿಶ್ವನಾಥನ್​ ಸೀಸನ್​ 19ರಲ್ಲಿ ಧೋನಿ ತಂಡದಲ್ಲಿರೋದು ಕನ್​ಫರ್ಮ್ ಎಂದಿದ್ದಾರೆ. ಆದ್ರೆ, ಇದೇ ವೇಳೆ ಈ ಸೀಸನ್​ನ ಎಲ್ಲಾ ಪಂದ್ಯಗಳಲ್ಲೂ ದೋನಿ ಕಣಕ್ಕಿಳಿಯಲ್ಲ ಎಂದು ಕಾಸಿ ವಿಶ್ವನಾಥನ್​ ಹೇಳಿದ್ದಾರೆ. ಕಾಸಿ ವಿಶ್ವನಾಥನ್, ​ ಧೋನಿ ಬಗ್ಗೆ ನೀಡಿರೋ ಅಪ್​​ಡೇಟ್​ ಯೆಲ್ಲೋ ಆರ್ಮಿ ಅಭಿಮಾನಿಗಳನ್ನ ಶಾಕ್​ಗೆ ದೂಡಿದೆ.
ಸೀಸನ್​ 19ರಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಧೋನಿ ಕಣಕ್ಕೆ.?
ಧೋನಿ ಸೀಸನ್​ 19ರಲ್ಲಿ ಆಡೋದು ಕೆಲವೇ ಕೆಲವು ಪಂದ್ಯ ಮಾತ್ರ. ಆ ಪಂದ್ಯಗಳಲ್ಲೂ ಕೂಡ ಎಮ್​​.ಎಸ್​ ಧೋನಿ ಫುಲ್​​ ಟೈಮ್​ ಫ್ಯಾನ್ಸ್​ಗೆ ದರ್ಶನ ಕೊಡಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ. ಯಾಕಂದ್ರೆ, ಕೇವಲ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಲು ಧೋನಿ ನಿರ್ಧರಿಸಿದ್ದಾರಂತೆ. 44 ವರ್ಷದ ಧೋನಿ ಮೊಣಕಾಲಿನ ಸರ್ಜರಿ ಬಳಿಕ ಫಿಟ್​ನೆಸ್​ ಸಮಸ್ಯೆಯನ್ನ ಎದುರಿಸ್ತಿದ್ದಾರೆ. ಹೀಗಾಗಿ ಧೋನಿ ಬದಲಾಗಿ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರೋ ಸಂಜು ಸ್ಯಾಮ್ಸನ್​ ವಿಕೆಟ್​ ಕೀಪಿಂಗ್ ಜವಾಬ್ಧಾರಿ ನಿರ್ವಹಿಸಲಿದ್ದಾರೆ. ಮಾಹಿ ಕೇವಲ ಇಂಪ್ಯಾಕ್ಟ್​​ ಪ್ಲೇಯರ್ ಆಗಿ ಬ್ಯಾಟಿಂಗ್​ ಮಾಡೋದಾಗಿ ಮ್ಯಾನೇಜ್​ಮೆಂಟ್​ಗೆ ತಿಳಿಸಿದ್ದಾರೆ.
ಐಪಿಎಲ್ ಸೀಸನ್-19ಕ್ಕೆ ಧೋನಿ ಭರ್ಜರಿ ಪ್ರಾಕ್ಟಿಸ್..!
ಕಳೆದ ತಿಂಗಳಿಂದಲೇ ಆರಂಭವಾಗಿದೆ ಸಮರಾಭ್ಯಾಸ..!
ಕೇವಲ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡ್ತಿದ್ರೂ ಕೂಡ ಸೀಸನ್​ 19ಕ್ಕೆ ಧೋನಿ ಸಮರಾಭ್ಯಾಸ ಮಾತ್ರ ಜೋರಾಗಿದೆ. ಟೂರ್ನಿಗಾಗಿ ಜಾರ್ಖಂಡ್​ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಕಳೆದೊಂದು ತಿಂಗಳಿಂದ ಸೀರಿಯಸ್​ ಪ್ರಾಕ್ಟೀಸ್ ಮಾಡ್ತಿದ್ದಾರೆ. ಬಿರು ಬಿಸಿಲನ್ನ ಲೆಕ್ಕಿಸದ ಧೋನಿ, ಮೈದಾನದಲ್ಲಿ ಬೆವರು ಸುರಿಸ್ತಿದ್ದಾರೆ. . ಬ್ಯಾಟಿಂಗ್​ ಅಭ್ಯಾಸದ ಜೊತೆಗೆ ಫಿಟ್​​ನೆಸ್​ ಮೇಲೆ ಕೂಡ ಧೋನಿ ವರ್ಕೌಟ್​ ಮಾಡ್ತಿದ್ದಾರೆ.
ಮತ್ತೆ ಕಡಿಮೆ ತೂಕದ ಬ್ಯಾಟ್​​​​​​ ಮೊರೆ ಹೋದ ಧೋನಿ..!
ಕಳೆದ 2 ಐಪಿಎಲ್​ನಿಂದ ಧೋನಿ ಕಡಿಮೆ ​ತೂಕದ ಬ್ಯಾಟ್ ಉಪಯೋಗಿಸುತ್ತಿದ್ದಾರೆ. ಆದ್ರೆ ಈ ಬಾರಿ ಧೋನಿ ಅದಕ್ಕಿಂತ ಕಡಿಮೆ ತೂಕದ ಬ್ಯಾಟ್ ಮೊರೆ ಹೋಗಿದ್ದಾರೆ. ಸದ್ಯ SS ಬ್ಯಾಟ್ ಕಂಪನಿಯಿಂದ ಕಸ್ಟಮೈಸ್ಡ್​ ಬ್ಯಾಟ್ ತರಿಸಿಕೊಂಡಿದ್ದಾರೆ. ಇದ್ರ ತೂಕ 1.KG 230 ಗ್ರಾಂ ಆಗಿದೆ. ಈ ಲೈಟ್ ವೇಯ್ಟ್ ಬ್ಯಾಟ್​​​​ನಿಂದ ವೇಗವಾಗಿ ಬ್ಯಾಟ್ ಸ್ವಿಂಗ್ ಮಾಡಬಹುದು, ಅತ್ಯುತಮ ಟೈಮಿಂಗ್ಸ್​ನಿಂದ ಆಡಬಹುದು, ಹೆಚ್ಚು ಕಂಟ್ರೋಲ್ ಹೊಂದಬಹುದು ಅನ್ನೋ ಕಾರಣಕ್ಕೆ, ಧೋನಿ ಲೈಟ್ ವೇಯ್ಟ್ ಬ್ಯಾಟ್ ಮೊರೆ ಹೋಗಿದ್ದಾರೆ.
ಒಟ್ಟಿನಲ್ಲಿ, ಸಿದ್ಧತೆಯ ಹೊರತಾಗಿ ಇಂಪ್ಯಾಕ್ಟ್​ ಪ್ಲೆಯರ್​ ಆಗಿ ಮಾತ್ರ ಆಡೋಕೆ ನಿರ್ಧರಿಸಿರೋ ಧೋನಿ, ಐಪಿಎಲ್​ ಸೀಸನ್​ 19ರ ಆರಂಭಕ್ಕೂ ಮುನ್ನವೇ ಫ್ಯಾನ್ಸ್​ನ ಬೇಸರಕ್ಕೆ ದೂಡಿದ್ದಾರೆ. ಜೊತೆಗೆ ಈ ನಿರ್ಧಾರದೊಂದಿಗೆ ಇದು ನನ್ನ ಕೊನೆಯ ಐಪಿಎಲ್​ ಎಂಬ ಸಂದೇಶವನ್ನೂ ಪರೋಕ್ಷವಾಗಿ ನೀಡಿದ್ದಾರೆ.
ವಸಂತ್​ ಮಳವತ್ತಿ. ಸ್ಪೋರ್ಟ್ಸ್​ ಬ್ಯೂರೋ. ನ್ಯೂಸ್​ ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us