/newsfirstlive-kannada/media/media_files/2025/12/10/ksca-prez-venkatesh-prasad-met-dks-2025-12-10-18-47-55.jpg)
ಈ ಸಲ ಕಪ್​ ನಮ್ದು ಅಂತ ಗೆದ್ದಾಯ್ತು.. ಮತ್ತೆ ಈ ಸಲ ಕಪ್​ ನಮ್ದು ಅಂತ ಗೆಲ್ಲೋದಕ್ಕೆ ಕಾಯ್ತಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ಯಾನ್ಸ್​ಗೆ ಢವ ಢವ ಶುರುವಾಗಿದೆ​.. ಕಾರಣ ಏನಪ್ಪಾ ಅಂದ್ರೆ ಬೆಂಗಳೂರಲ್ಲಿ ಆರ್​ಸಿಬಿ ಮ್ಯಾಚ್​ ನಡೆಯುತ್ತೋ ಇಲ್ವೋ ಅನ್ನೋ ಕನ್ಫ್ಯೂಶನ್​ಗೆ ಇನ್ನೂ ಕನ್​ಕ್ಲ್ಯೂಶನ್​ ಸಿಕ್ಕಿಲ್ಲ. ಹಾಗಾದ್ರೆ ಏನ್​ ಆಗ್ತಿದೆ ಅನ್ನೋ ಡೀಟೇಲ್ಸ್​ ಇಲ್ಲಿದೆ.
11 ಮಂದಿ ದುರ್ಮರಣ.. ಅದೆಷ್ಟೋ ಜನ ಉಸಿರಾಡಲು ಪರದಾಡ್ತಿದ್ದ ಕ್ಷಣ.. ಕಪ್​ ಗೆದ್ದ ಖುಷಿ ಒಂದು ದಿನ ಕೂಡ ಇರಲಿಲ್ಲ ಬಿಡಿ.. ಈ ಘೋರ ದುರಂತ ಆರ್​ಸಿಬಿ ನಿಯೋಗದ ಮೇಲೆ ಒಂದು ಕಪ್ಪು ಚುಕ್ಕೆಯಾಗಿ ಈಗ್ಲೂ ಕಾಡ್ತಾನೇ ಇದೆ. ಇದು ಮರುಕಳಿಸ ಬಾರದು ಅಂತ ಸರ್ಕಾರ ಬೆಂಗಳೂರಲ್ಲಿ ಆರ್​ಸಿಬಿ ಮ್ಯಾಚ್ ಆಡಿಸೋದಾ..? ಬೇಡ್ವಾ..? ಅನ್ನೋ ಚಿಂತನೆಯಲ್ಲೇ ದಿನಗಳನ್ನ ದೂಡ್ತಾ ಇದೆ.
ಬೆಂಗಳೂರಲ್ಲಿ RCB ಮ್ಯಾಚ್​ ನಡೆಯುತ್ತಾ? ಇಲ್ವಾ? ಅನ್ನೋ ಬಗ್ಗ ಚರ್ಚೆ!
ಫೆಬ್ರವರಿ 12ಕ್ಕೆ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳನ್ನ ಆಡಿಸುವ ವಿಚಾರವಾಗಿ ಚರ್ಚೆ ಮೇಲೆ ಚರ್ಚೆಗಳು ಆಗ್ತಾನೇ ಇದೆ. ಇದಕ್ಕೆ ಇವತ್ತಾದ್ರೂ ತೆರೆ ಎಳೆಯೋಣ ಅಂತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್.. ರಾಜೇಶ್ ಮೆನನ್ ನೇತೃತ್ವದ ಆರ್‌ಸಿಬಿ ನಿಯೋಗ ಸೀದಾ ಬಂದಿಳಿದಿದ್ದು ಸದಾಶಿವ ನಗರದಲ್ಲಿರೋ ಗೃಹ ಸಚಿವರ ಮನೆಗೆ.
ಇವತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್​ ಮನೆ.. ಆರ್​ಸಿಬಿ ಟೈಮ್​ ಟೇಬಲ್​ ರೆಡಿ ಮಾಡೋ ಆಫೀಸ್​ ಆಗಿ ಬದಲಾಗಿತ್ತು.. ಹೌದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳನ್ನ ಆಡಿಸಬೇಕಾ.. ಬೇಡ್ವಾ.. ಅನ್ನೋ ಚರ್ಚೆ ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ನಡೆದಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್.. ರಾಜೇಶ್ ಮೆನನ್ ನೇತೃತ್ವದ ಆರ್‌ಸಿಬಿ ನಿಯೋಗ.. ಗೃಹ ಸಚಿವರ ಜತೆ ಸಮಾಲೋಚನೆ ನಡೆಸಿದ್ರು. ಅಂತಿಮವಾಗಿ ಇದೇ ವಾರ 12 ರಂದು ಮತ್ತೊಂದು ಸುತ್ತಿನ ಮತ್ತೊಂದು ಸಭೆ ನಡೆಸಿ ಆರ್‌ಸಿಬಿ ಪಂದ್ಯಾವಳಿ ಬೆಂಗಳೂರಲ್ಲಿ ಆಡಿಸೋ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ತೀವಿ ಅಂತ ಗೃಹ ಸಚಿವರ ಭರವಸೆ ಕೊಟ್ರು.
ಗೃಹ ಸಚಿವರ ಭೇಟಿ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಇಂದು ನಾವು ಗೃಹ ಸಚಿವರ ಭೇಟಿ ಮಾಡಿದ್ದೇವೆ. ಆರ್‌ಸಿಬಿ ಮ್ಯಾಚ್ ನಡೆಸೋ ಸಂಬಂಧ ಜಂಟಿ ನಿಯೋಗ ಬಂದಿದ್ದೆವು. ಆದಷ್ಟು ಬೇಗ ಸ್ಥಳ ನಿರ್ಧಾರ ಆಗಬೇಕು. ಹೀಗಾಗಿ, ಬೇಗ ಒಂದು ತೀರ್ಮಾನ ತಗೊಳ್ಳಿ ಅಂತ ಗೃಹಸಚಿವರಲ್ಲಿ ಮನವಿ ಮಾಡಿದ್ದೇವೆ. ಆರ್‌ಸಿಬಿ ಅಭಿಮಾನಿಗಳಿಗೆ ಖಂಡಿತ ಗುಡ್ ನ್ಯೂಸ್ ಸಿಗಲಿದೆ ಅಂತ ವೆಂಕಟೇಶ್​ ಪ್ರಸಾದ್​ ತಿಳಿಸಿದ್ರು.
/filters:format(webp)/newsfirstlive-kannada/media/post_attachments/wp-content/uploads/2023/06/G-parameshwar-1.jpg)
ಇದೇ ವೇಳೆ ಮಾತ್ನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್​, ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಆಡಿಸುವ ವಿಚಾರವಾಗಿ, ನ್ಯಾಯಮೂರ್ತಿ ಕುನ್ಹಾ ವರದಿ ಶಿಫಾರಸು ಪಾಲಿಸಬೇಕು ಅಂತ ಹೇಳಿದ್ದೀವಿ. ಸರ್ಕಾರದ ಹಂತದಲ್ಲಿ ಏನು ಮಾಡಬೇಕು.. ಏನೆಲ್ಲ ಸೂಚನೆ ಕೊಡಬೇಕು ಅನ್ನೋದನ್ನ ನೋಡುತ್ತೇವೆ ಅಂದಿದ್ದಾರೆ.
ಬೆಂಗಳೂರಿನಲ್ಲಿ ಮ್ಯಾಚ್ ಆಗಬೇಕು ಅಂತ ಕ್ರಿಕೆಟ್​ ಅಭಿಮಾನಿಗಳ ಬಯಕೆ ಆಗಿದೆ. ಆದ್ರೆ ಸುರಕ್ಷತೆನಾ ನೋಡಬೇಕು.. ಕಾಲ್ತುಳಿತದಂಥ ಘಟನೆಗಳು ಮತ್ತೆ ಮರುಕಳಿಸಬಾರದು.. ಅನ್ನೋ ಅಂಶಗಳನ್ನ ಗನದಲ್ಲಿಟ್ಟುಕೊಂಡಿರೋ ಸರ್ಕಾರ ಎಲ್ಲವನ್ನೂ ನೋಡಿ.. ಮಾಡಿ ತೀರ್ಮಾನ ಮಾಡ್ತೇವೆ ಅಂತ ಹೇಳಿದೆ. ಸದ್ಯಕ್ಕೆ ಕ್ರಿಕೆಟ್​ ಅಭಿಮಾನಿಗಳಿಗಿರೋ ಒಂದೇ ಆಪ್ಷನ್​​ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೆ ಅಂತ ಕಾದು ನೋಡೋದು.
ಶಿವಪ್ರಸಾದ್, ನ್ಯೂಸ್ ಫಸ್ಟ್​, ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us