ಟೀಮ್‌ ಇಂಡಿಯಾಗೆ ಹಿಂತಿರುಗುತ್ತಾರಾ ರೋಹಿತ್, ವಿರಾಟ್ ಕೋಹ್ಲಿ: ಇಂದು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ

ಆಕ್ಟೋಬರ್ 19 ರಿಂದ ಆಸ್ಟ್ರೇಲಿಯಾದ ಪರ್ತ್ ನಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ಒನ್ ಡೇ ಮ್ಯಾಚ್ ಶುರುವಾಗಲಿದೆ. ಬಳಿಕ ಐದು ಟಿ20 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಇಂದು ಟೀಮ್ ಇಂಡಿಯಾ ಆಯ್ಕೆ ನಡೆಯುತ್ತಿದೆ. ರೋಹಿತ್-ವಿರಾಟ್ ಕೋಹ್ಲಿ ತಂಡಕ್ಕೆ ವಾಪಸಾಗುವ ಸಾಧ್ಯತೆ ಇದೆ.

author-image
Chandramohan
ROHIT SHARMA AND VIRAT KOHLI

ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ

Advertisment
  • ಆಸ್ಟ್ರೇಲಿಯಾ ವಿರುದ್ಧದ ಓಡಿಐ, ಟಿ20ಗೆ ಇಂದು ಟೀಮ್ ಇಂಡಿಯಾ ಪ್ರಕಟ
  • ರೋಹಿತ್-ವಿರಾಟ್ ಕೋಹ್ಲಿ ಜೋಡಿ ತಂಡಕ್ಕೆ ವಾಪಸಾಗುವ ಸಾಧ್ಯತೆ
  • ಜಸಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯಾ, ಕುಲದೀಪ್ ಗೆ ವಿಶ್ರಾಂತಿ ಸಾಧ್ಯತೆ
  • ಪ್ರಸಿದ್ಧ ಕೃಷ್ಣ, ಹರ್ಷಿತ್ ರಾಣಾ, ಅಭಿಷೇಕ್ ಶರ್ಮಾ ತಂಡಕ್ಕೆ ಆಯ್ಕೆ ಸಾಧ್ಯತೆ

ಇದೇ ಆಕ್ಟೋಬರ್ 19 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಒನ್‌ ಡೇ ಮ್ಯಾಚ್ ಮತ್ತು ಐದು ಟಿ20 ಮ್ಯಾಚ್ ಗಳು ನಡೆಯಲಿವೆ.  ಆಕ್ಟೋಬರ್ 19 ರಂದು ಆಸ್ಟ್ರೇಲಿಯಾದ ಪರ್ತ್ ನಲ್ಲಿ ಮೊದಲ ಒನ್ ಡೇ ಮ್ಯಾಚ್ ನಡೆಯಲಿದೆ. ಈ ಸರಣಿಗೆ ಇಂದು ಟೀಮ್ ಇಂಡಿಯಾ ತಂಡದ ಆಟಗಾರರನ್ನು ಆಯ್ಕೆದಾರರು ಆಯ್ಕೆ ಮಾಡಿ ಪ್ರಕಟಿಸುವರು.  ಆಸ್ಟ್ರೇಲಿಯಾದ ವಿರುದ್ಧದ ಒನ್ ಡೇ ಮ್ಯಾಚ್ ಮತ್ತು ಟಿ20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿ ಆಡುವ ಸಾಧ್ಯತೆ ಇದೆ. 
ಆದರೇ, ರೋಹಿತ್ ಶರ್ಮಾಗೆ ಯಾವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಗೊಂದಲ ಇದೆ. ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ನೇರವಾಗಿ ರೋಹಿತ ಶರ್ಮಾ ಜೊತೆಯೇ ಟೀಮ್ ಇಂಡಿಯಾದ ಆಯ್ಕೆದಾರರು ನೇರವಾಗಿ ಮಾತನಾಡುವರು. ಬಳಿಕ ರೋಹಿತ್ ಶರ್ಮಾ ಅಭಿಪ್ರಾಯ ಪಡೆದು ತಂಡವನ್ನು ಆಯ್ಕೆ ಮಾಡಿ ಪ್ರಕಟಿಸುವರು. 
ರೋಹಿತ್ ಶರ್ಮಾ ಈಗಾಗಲೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ಹಿಂತಿರುಗಲು ರೋಹಿತ್ ಶರ್ಮಾ ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ನಲ್ಲಿರುವ ವಿರಾಟ್ ಕೋಹ್ಲಿ ಕೂಡ ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ಪಂದ್ಯಗಳಿಗೆ 7 ತಿಂಗಳ ಬಳಿಕ ಹಿಂತಿರುಗುವ ಸಾಧ್ಯತೆ ಇದೆ.  ರೋಹಿತ್- ವಿರಾಟ್ ಕೋಹ್ಲಿ ಜೋಡಿ 2027ರ 50 ಓವರ್ ವರ್ಲ್ಡ್ ಕಪ್ ವರೆಗೂ ಟೀಮ್ ಇಂಡಿಯಾ ಪರ ಆಡುವ ಸಾಧ್ಯತೆ ಇದೆ. 
ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಟೆಸ್ಟ್ ಕ್ಯಾಪ್ಟನ್ ಶುಭಮನ್ ಗಿಲ್ ಸದ್ಯ 2 ಟೆಸ್ಟ್ ಸರಣಿ ಆಡುತ್ತಿದ್ದು, ಒನ್ ಡೇ ಮ್ಯಾಚ್ ಮತ್ತು ಟಿ20 ಮ್ಯಾಚ್ ಗಳಿಗೆ ಶುಭಮನ್ ಗಿಲ್ ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಇನ್ನೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಜಸ್ ಪ್ರೀತ್ ಬುಮ್ರಾ ಕೂಡ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. 
ರೋಹಿತ್ ಶರ್ಮಾ ಜೊತೆಗೆ ಓಪನ್ನರ್ ಆಗಿ ಅಭಿಷೇಕ್ ಶರ್ಮಾ ಫೀಲ್ಡ್‌ಗೆ ಇಳಿಯುವ ಸಾಧ್ಯತೆ ಇದೆ. ಏಷ್ಯಾ ಕಪ್ ನಲ್ಲಿ ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಜೊತೆ ಓಪನ್ನರ್ ಆಗಿ ಅಭಿಷೇಕ್ ಶರ್ಮಾ ಕಣಕ್ಕಿಳಿಯಬಹುದು. 
ಕುಲದೀಪ್, ಜಸಪ್ರೀತ್ ಬುಮ್ರಾ, ಶುಭಮನ್ ಗಿಲ್ ಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಿ ಬೇರೆಯ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. 
ಇನ್ನೂ ಬೌಲರ್ ಗಳಾಗಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಹಾಗೂ ಹರ್ಷಿತ್ ರಾಣಾ ಆಯ್ಕೆಯಾಗುವ ಸಾಧ್ಯತೆ ಇದೆ. 
ಹಾರ್ದಿಕ್ ಪಾಂಡ್ಯಾ ಬದಲು ನೀತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

TEAM INDIA SELECTION AGAINST AUSTRALIA SERIES
Advertisment