ಟಿ-20 ವಿಶ್ವಕಪ್​​ನಲ್ಲಿ ಚಾಂಪಿಯನ್ನರ ಸೊಕ್ಕು ಮುರಿದ ಜಿಂಬಾಬ್ವೆ.. ಮಣ್ಣುಮುಕ್ಕಿದ ಆಸ್ಟ್ರೇಲಿಯಾ..!

2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಆಸ್ಟ್ರೇಲಿಯಾಗೆ ದೊಡ್ಡ ಅಘಾತ ಆಗಿದೆ. ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ, ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಕ್ರಿಕೆಟ್ ಕೂಸು ಜಿಂಬಾಬ್ವೆ (Zimbabwe) ಮಣ್ಣುಮುಕ್ಕಿಸಿದೆ.

author-image
Ganesh Kerekuli
Australia vs Zimbabwe (3)
Advertisment

2026ರ ಟಿ20 ವಿಶ್ವಕಪ್‌ನಲ್ಲಿ  (T20 World Cup 2026) ಆಸ್ಟ್ರೇಲಿಯಾಗೆ ದೊಡ್ಡ ಅಘಾತ ಆಗಿದೆ. ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ, ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಕ್ರಿಕೆಟ್ ಕೂಸು ಜಿಂಬಾಬ್ವೆ (Zimbabwe) ಮಣ್ಣುಮುಕ್ಕಿಸಿದೆ. ಈ ಮೂಲಕ ಟೂರ್ನಿಯಲ್ಲಿ ಅತಿದೊಡ್ಡ ‘ಅಪ್‌ಸೆಟ್’ (Upset) ದಾಖಲಿಸಿದೆ.

ಚಾಂಪಿಯನ್ನರ ಸೊಕ್ಕು ಮುರಿದ ಜಿಂಬಾಬ್ವೆ..!

ಇಂದು ನಡೆದ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಐತಿಹಾಸಿಕ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 169 ರನ್​ಗಳಿಸಿತ್ತು. 

ಬೌಲರ್‌ಗಳ ಸಂಘಟಿತ ಹೋರಾಟ

170 ರನ್​ಗಳ ಗುರಿಯನ್ನ ಟಾರ್ಗೆಟ್ ಬೆನ್ನು ಹತ್ತಿದ ಆಸ್ಟ್ರೇಲಿಯಾ ಬ್ಯಾಟರ್ಸ್​​ ಆಘಾತ ಎದುರಿಸಿದರು. ಆಸ್ಟ್ರೇಲಿಯಾದ ದೈತ್ಯ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಜಿಂಬಾಬ್ವೆ ಬೌಲರ್‌ಗಳು ಯಶಸ್ವಿಯಾದರು. ಟ್ರಾವಿಸ್ ಹೆಡ್ ಅವರಂತಹ ಘಟಾನುಘಟಿಗಳನ್ನು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ಗೆ ಅಟ್ಟುವ ಮೂಲಕ ಜಿಂಬಾಬ್ವೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮವಾಗಿ ಆಸ್ಟ್ರೇಲಿಯಾ 19.3 ಓವರ್​ ಆಡಿ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 146 ರನ್​ಗಳಿಸಿ ಸೋಲಿಗೆ ಶರಣಾಯ್ತು. ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿದ ಖುಷಿಯಲ್ಲಿ ಜಿಂಬಾಬ್ವೆ ಆಟಗಾರರು ಮೈದಾನದಲ್ಲೇ ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ತಾಯಿ ಕಥೆ ಮುಗಿಸಿದ ಕಥೆಗೆ ಟ್ವಿಸ್ಟ್! : 40 ಲಕ್ಷ ಹಣ, ಆಸ್ತಿಗಾಗಿ ತಾಯಿ ಕೊಂದ ಮಗಳು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Zimbabwe beats Australia T20 world cup
Advertisment