/newsfirstlive-kannada/media/post_attachments/wp-content/uploads/2024/06/renukaswami.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್‌ನ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಸಾಕ್ಷಿ ಸಮೇತ ಆರೋಪಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆಗಾಗಿ ಇನ್ನೂ 8 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ನಟ ದರ್ಶನ್ ಅರೆಸ್ಟ್ ಕೇಸ್‌ನಲ್ಲಿ SPP ಪ್ರಸನ್ನ ಕುಮಾರ್ ಅವರು ಕೋರ್ಟ್‌ಗೆ ಕೊಲೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಆರೋಪಿ ದರ್ಶನ್ ಅವರು ಕೊಲೆ ಬಳಿಕ ಮೈಸೂರಿಗೆ ಹೋಗಿದ್ದಾರೆ. ಅಲ್ಲಿ ಘಟನೆಯ ಬಗ್ಗೆ ಇತರ ಆರೋಪಿಗಳ ಜೊತೆ ಸಂಭಾಷಣೆ ಆಗಿದೆ. ಅಲ್ಲದೇ ಆರೋಪಿ ಪ್ಲಾನ್‌ನಂತೆ ಕೆಲ ಆರೋಪಿಗಳು ಸುಳ್ಳು ಕಥೆ ಹೇಳಿ ಸರೆಂಡರ್ ಆಗಲು ಹೋಗಿದ್ದಾರೆ. ಹೀಗಾಗಿ ಮತ್ತಷ್ಟು ದಿನ ಕಸ್ಟಡಿ ನೀಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ, SPP ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಡಿಯೋ ಸಾಕ್ಷಿಗಳನ್ನು ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಕೃತ್ಯದಲ್ಲಿ ಲಭ್ಯವಾಗಿರುವ ಸಿಸಿಟಿವಿ ವಿಡಿಯೋಗಳ ಸಿಡಿ ಅನ್ನು ಮುಚ್ಚಿದ ಲಕೋಟೆ ಸಲ್ಲಿಕೆ ಮಾಡಲಾಗಿದ್ದು, ಅದರಲ್ಲಿ ತುಂಬಾ ಗಂಭೀರ ಅಂಶಗಳಿವೆ ಎನ್ನಲಾಗಿದೆ. ಅದನ್ನ ಒಮ್ಮೆ ನೋಡುವಂತೆ ನ್ಯಾಯಾಧೀಶರಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್ ಹಲ್ಲೆ ಮಾಡಿದ್ದ ದೃಶ್ಯ ಸೆರೆ?
ಆರೋಪಿಗಳು ಮೃತನಿಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಕೊಲೆಗೂ ಮುನ್ನ ರೇಣುಕಾಸ್ವಾಮಿ ಅವರಿಗೆ ಕರೆಂಟ್ ಶಾಕ್ ಕೂಡ ನೀಡಿದ್ದಾರೆ. ಆ ಡಿವೈಸ್ ಇನ್ನೂ ತನಿಖೆಯಲ್ಲಿ ಸಿಕ್ಕಿಲ್ಲ. ಅದನ್ನ ಆರೋಪಿಗಳು ನಾಶ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಅದರ ರಿಕವರಿ ಮಾಡಬೇಕಿದೆ ಅನ್ನೋ ಮಾಹಿತಿಯನ್ನು ಕೋರ್ಟ್‌ಗೆ ಪ್ರಸನ್ನ ಕುಮಾರ್ ನೀಡಿದ್ದಾರೆ.
ಇದನ್ನೂ ಓದಿ: ದರ್ಶನ್ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?
ಇದೇ ವೇಳೆ ದರ್ಶನ್ ಪರ ವಕೀಲ ಅನಿಲ್ ಬಾಬು ಅವರು ಕೊಲೆ ಪ್ರಕರಣದಲ್ಲಿ ಪೊಲೀಸರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಆರೋಪಿ 5 & 14 ರ ಜೊತೆ ಮೃಗೀಯ ವರ್ತನೆ ತೋರಿದ್ದು, ಅವರಿಗೂ ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ನೀಡಿದ್ದಾರೆ. ಹೀಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ